ಬೆಂಗಳೂರು: ಈ ಪ್ರದೇಶದಲ್ಲಿ ರಾತ್ರಿ ಆದ್ಮೇಲೆ ಓಡಾಡೋಕೂ ಗುಂಡಿಗೆ ಗಟ್ಟಿ ಇರ್ಬೇಕಂತೆ. ಏನಾದ್ರೂ ಅಪ್ಪಿತಪ್ಪಿ ಬಾರ್ ಕಡೆಗೆ ಹೋದರೆ ನಿಮ್ಮ ಜೀವಕ್ಕಿರಲ್ಲ ಗ್ಯಾರಂಟಿ. ಯಾಕಂದ್ರೆ ಕೈ ಮುಗಿದು ಬೇಡಿದ್ರೂ ಬಿಡಲ್ಲ, ಕಾಲಿಗೆ ಬಿದ್ದರೂ ಬಿಡಲ್ಲ ಇಲ್ಲಿನ ಪುಂಡರ ಗ್ಯಾಂಗ್. ಬಾರ್ಗೆ ಮುಂದೆ ತನ್ನಪಾಡಿಗೆ ತಾವು ಎಣ್ಣೆ ಹಾಕೊಂಡು ಹೋಗ್ತೀವಿ ಅಂತ ಹೋದ್ರೂ ತಲೆ ತಗ್ಗಿಸಿ ಹೋಗ್ಬೇಕು. ತಲೆ ತಗ್ಗಿಸಿ ಬರ್ಬೇಕು. ಕಣ್ಣೆತ್ತಿ ನೋಡಿದ್ರೆ ಬೀಳುತ್ತೆ ಧರ್ಮದೇಟು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
ಅನ್ನಪೂರ್ಣೇಶ್ವರಿ ನಗರದಲ್ಲಿ ಪುಂಡರ ದರ್ಬಾರ್ ಮಿತಿ ಮೀರುತ್ತಿದೆ. ಕ್ಷುಲ್ಲಕ ಕಾರಣಕ್ಕೆ ಇಲ್ಲಿನ ಬಾರ್ಗೆ ನುಗ್ಗಿ ಯುವಕನ ಮೇಲೆ 15-20 ಪುಂಡರ ಗುಂಪು ಮನಸೋ ಇಚ್ಚೆ ಹಲ್ಲೆ ನಡೆಸಿದೆ. ಮುದ್ದಯ್ಯನಪಾಳ್ಯದ ಎಸ್ಎಸ್ ಬಾರ್ನಲ್ಲಿ ನಡೆದ ಗಲಾಟೆ ಇದಾಗಿದೆ. ಏ. 21 ರಾತ್ರಿ ಬಾರ್ಗೆ ಹೋಗಿದ್ದ ಸದಾನಂದ ಎಂಬ ಯುವಕನಿಗೆ ಹಲ್ಲೆ ಮಾಡಲಾಗಿದೆ.