ಬೆಂಗಳೂರು: ನಟ ದರ್ಶನ್ ಹೆಸರಲ್ಲಿ 25 ಕೋಟಿ ರೂಪಾಯಿ ವಂಚನೆ ಯತ್ನ ಪ್ರಕರಣವು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಂದು ಬೆಳಗ್ಗೆಯಷ್ಟೇ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮಾಧ್ಯಮಗೋಷ್ಟಿ ನಡೆಸಿ ದರ್ಶನ್ ಮಾಡಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಿದ್ರು. ಈ ಬೆನ್ನಲ್ಲೇ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಅರುಣಾ ಕುಮಾರಿ ಸಹ ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾಗಿದ್ದಾರೆ.
‘ಉಮಾಪತಿ ನನ್ನ ಬಳಸಿಕೊಂಡ್ರು’
ಈ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ, ನನ್ನನ್ನು ಬಳಸಿಕೊಂಡಿದ್ದು ತಪ್ಪು ಅಂತಾ ಹೇಳಿದ್ದಾರೆ. ಉಮಾಪತಿಗೆ ನನ್ನ ಪರಿಚಯ ಇಲ್ಲ ಅಂತಾ ಹೇಳ್ತಿದ್ದಾರಲ್ಲ, ಅವರು ನನಗೆ ಮಾರ್ಚ್ 30 ರಿಂದಲೂ ಪರಿಚಯ ಇದ್ದಾರೆ ಎಂದು ಅರುಣಾಕುಮಾರಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟರು.
‘ತಂದೆ-ಅಣ್ಣನಿಗೂ ಹಾರ್ಟ್ ಸಿಂಬಲ್ ಕಳಿಸ್ತಿನಿ’
ನಿರ್ಮಾಪಕ ಉಮಾಪತಿಗೆ ಹಾರ್ಟ್ ಸಿಂಬಲ್ ಕಳಿಸಿರುವ ಬಗ್ಗೆ ಮಾತನಾಡಿರುವ ಅರುಣಾ, ನನ್ನ ಅಣ್ಣ-ತಂದೆಗೂ ನಾನು ಹಾರ್ಟ್ ಸಿಂಬಲ್ ಕಳಿಸ್ತಿವಿ ಅಲ್ವಾ, ಅದ್ರಲ್ಲೇನು ವಿಶೇಷ. ಇದೇ ಈಗ ದೊಡ್ಡ ಸುದ್ದಿಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.