ಬೆಂಗಳೂರು: ಚರ್ಚ್ ಬಳಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ದುರುಳನನ್ನು ಅಶೋಕ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ವಿಲಿಯಮ್ ಪ್ರಕಾಶ್ ಬಂಧಿತ ಆರೋಪಿ.
ಈತ ಕಳೆದ ಸೆಪ್ಟೆಂಬರ್ 10ರ ಶನಿವಾರ ಶಾಂತಲಾ ನಗರದಲ್ಲಿ ಬಳಿ ಇರುವ ಸೆೇಂಟ್ ಚಾಪೆಲ್ ಚರ್ಚ್‌ನ ಲೈಟ್ ಆಫ್ ಮಾಡಲು ಹೋಗಿದ್ದ ಮಹಿಳೆಯ ಮೇಲೆ ಚಾಕು ತೋರಿಸಿ ಬಲಾತ್ಕಾರಕ್ಕೆ ಯತ್ನಿಸಿದ್ದ. ಆಕೆ ವಿರೋಧ ವ್ಯಕ್ತಪಡಿಸಿದಾಗ ಹಲ್ಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದನು. ಆರೋಪಿ ಬೆದರಿಸಿದ್ದ ಕಾರಣಕ್ಕೆ ಮಹಿಳೆ ಹಾಗೂ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕಿದ್ದರಂತೆ. ಈ ಪ್ರಕರಣ ಆಪ್ ಪಕ್ಷದ ಮುಖಂಡರಿಗೆ ತಿಳಿದು ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.