ಕರ್ನಾಟಕ

karnataka

ETV Bharat / state

ಹಸುಗಳೊಂದಿಗೆ ವಿಕೃತಿ ಮೆರೆಯುತ್ತಿದ್ದ ಆರೋಪಿಯ ಬಂಧನ - Etv Bharat Kannada

ಹಸುಗಳ ಜೊತೆ ಅನೈಸರ್ಗಿಕ ಲೈಂಗಿಕ ಕ್ರಿಯೆಗೆ ಯತ್ನಿಸಿದ್ದ ಆರೋಪಿಯನ್ನು ಚಂದ್ರಾಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ‌.

accused-arrested-for-unatural-sex-with-cow
ಹಸುಗಳೊಂದಿಗೆ ವಿಕೃತಿ ಮೆರೆಯುತ್ತಿದ್ದ ಆರೋಪಿಯ ಬಂಧನ

By

Published : Aug 8, 2022, 10:44 AM IST

ಬೆಂಗಳೂರು :ಹಸುಗಳ ಜೊತೆ ಅನೈಸರ್ಗಿಕ ಲೈಂಗಿಕ ಕ್ರಿಯೆಗೆ ಯತ್ನಿಸಿದ್ದ ಆರೋಪಿಯನ್ನು ಚಂದ್ರಾಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ‌. ಬಂಧಿತನನ್ನು ಮದ್ದೂರು ಮೂಲದ ಮಂಜುನಾಥ್(34) ಎಂದು ಗುರುತಿಸಲಾಗಿದೆ.

ನಾಯಂಡಹಳ್ಳಿ ಬಳಿ ಹಸುಗಳನ್ನು ಸಾಕಿದ್ದ ಶಶಿಕುಮಾರ್ ಎಂಬುವವರು ಬೆಂಗಳೂರು ಯೂನಿವರ್ಸಿಟಿ ಕ್ಯಾಂಪಸ್ ನಲ್ಲಿ ಹಸುಗಳನ್ನು ಮೇಯಲು ಕಟ್ಟುತ್ತಿದ್ದರು. ಮಾಲೀಕ ಇಲ್ಲದ ವೇಳೆ ಹಸುಗಳನ್ನು ಪೊದೆಗೆ ಎಳೆದೊಯ್ಯುತ್ತಿದ್ದ ಆರೋಪಿ ಹಸುವಿನ ಕೆಚ್ಚಲನ್ನು ಬಾಯಲ್ಲಿ ಕಚ್ಚುವುದು, ಹಸುವಿನ ಬಾಲವನ್ನು ತುಂಡರಿಸಿ ಹಿಂಸೆ ನೀಡುವುದಲ್ಲದೇ, ಬೆತ್ತಲಾಗಿ ಹಸುವಿನ ಜೊತೆ ಅನೈಸರ್ಗಿಕ ಲೈಂಗಿಕ ಕ್ರಿಯೆಗೆ ಯತ್ನಿಸಿದ್ದ. ಈ ಸಂಬಂಧ ಹಸುಗಳ ಮಾಲೀಕ ಶಶಿಕುಮಾರ್ ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದು, ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಓದಿ :ಮಹಿಳೆಯರ ಮುಂದೆ ವ್ಯಕ್ತಿ ಅಶ್ಲೀಲ ವರ್ತನೆ: ಖಾಸಗಿ ಅಂಗಕ್ಕೆ ಬೆಂಕಿ ಹಚ್ಚಿದ ಜನರು!

ABOUT THE AUTHOR

...view details