ಕರ್ನಾಟಕ

karnataka

ETV Bharat / state

ಮನೆ ಬಾಡಿಗೆ ಕೇಳುವ ಸೋಗಿನಲ್ಲಿ ಬಂದು ದರೋಡೆ.. ಖದೀಮರ ಬಂಧನ - Accused arrested for rent House Robbery in Bengaluru

ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯ ಮನೆಯೊಂದಕ್ಕೆ ಬಾಡಿಗೆ ಕೇಳುವವರ ಸೋಗಿನಲ್ಲಿ ಆರೋಪಿಗಳು ಬಂದಿದ್ದಾರೆ. ನಂತರ ಮನೆ ಒಳಗಡೆ ಗಲೀಜಾಗಿದೆ ನೋಡಿ ಅಂತ ಡ್ರಾಮಾ ಮಾಡಿ ಮನೆ ಮಾಲಕಿ ಜಯಮ್ಮರನ್ನ ಒಳಗಡೆ ಕರೆಸಿದ್ದಾರೆ. ಮಾಲಕಿ ಒಳಗಡೆಗೆ ಬರುತ್ತಿದ್ದಂತೆ ಮೂವರು ಆರೋಪಿಗಳು ಮಾಲಕಿಯ ಕಾಲು ಕಟ್ಟಿ, ಬಾಯಿಗೆ ಗಮ್ ಟೇಪ್ ಸುತ್ತಿ ಮೈಮೇಲಿದ್ದ 48 ಗ್ರಾಂ ಚಿನ್ನದ ಮಾಂಗಲ್ಯ ಸರ, ಓಲೆ ಕಿತ್ತು ಪರಾರಿಯಾಗಿದ್ದರು.

ಆರೋಪಿಗಳು
ಆರೋಪಿಗಳು

By

Published : May 22, 2022, 8:55 PM IST

ಬೆಂಗಳೂರು: ಮನೆ ಬಾಡಿಗೆ ಕೇಳುವ ನೆಪದಲ್ಲಿ ಬಂದು ವೃದ್ಧೆಯನ್ನ ಬೆದರಿಸಿ ದರೋಡೆ ಮಾಡಿದ್ದ ಮೂವರು ಕಳ್ಳರನ್ನ ನಂದಿನಿ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ‌. ನಂದನ್, ಜಿಯಾವುಲ್ಲಾ ಖಾನ್ ಹಾಗೂ ಶರತ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.

ಮಾಂಗಲ್ಯ ಸರ

ಮೇ 9ರಂದು ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯ ಮನೆಯೊಂದಕ್ಕೆ ಬಾಡಿಗೆ ಕೇಳುವವರ ಸೋಗಿನಲ್ಲಿ ಆರೋಪಿಗಳು ಬಂದಿದ್ದಾರೆ. ನಂತರ ಮನೆ ಒಳಗಡೆ ಗಲೀಜಾಗಿದೆ ನೋಡಿ ಅಂತ ಡ್ರಾಮಾ ಮಾಡಿ ಮನೆ ಮಾಲಕಿ ಜಯಮ್ಮರನ್ನ ಒಳಗಡೆ ಕರೆಸಿದ್ದಾರೆ. ಮಾಲಕಿ ಒಳಗಡೆಗೆ ಬರುತ್ತಿದ್ದಂತೆ ಮೂವರು ಆರೋಪಿಗಳು ಮಾಲಕಿಯ ಕಾಲು ಕಟ್ಟಿ, ಬಾಯಿಗೆ ಗಮ್ ಟೇಪ್ ಸುತ್ತಿ ಮೈಮೇಲಿದ್ದ 48 ಗ್ರಾಂ ಚಿನ್ನದ ಮಾಂಗಲ್ಯ ಸರ, ಓಲೆ ಕಿತ್ತು ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ನಂದಿನಿ ಲೇಔಟ್ ಪೊಲೀಸರು ಆರೋಪಿಗಳನ್ನ ಪತ್ತೆ ಹಚ್ಚಿ ಬಂಧಿತರಿಂದ 1.5 ಲಕ್ಷ ಬೆಲೆ ಬಾಳುವ ಚಿನ್ನಾಭರಣ, 2 ಬೈಕ್, ಮಾರಕಾಸ್ತ್ರವನ್ನು ಜಪ್ತಿ ಮಾಡಿದ್ದಾರೆ.

ಓದಿ:ಅಂಕೋಲಾದಲ್ಲಿ ಗಮನ ಸೆಳೆದ ಮಾವು ಮೇಳ; ತರಹೇವಾರಿ ಮ್ಯಾಂಗೋ ಖರೀದಿಸಿದ ಜನ

ABOUT THE AUTHOR

...view details