ಕರ್ನಾಟಕ

karnataka

ETV Bharat / state

ಕುಡಿದ ಅಮಲಿನಲ್ಲಿ ಕೊಲೆ.. ಪರಾರಿಯಾಗಿದ್ದ ಬಾಲಕನ ಬಂಧನ - ಕೆ ಎಸ್ ಲೇಔಟ್ ಪೊಲೀಸರು

ಕೆ ಎಸ್ ಲೇಔಟ್ ಠಾಣಾ ವ್ಯಾಪ್ತಿಯ ಕಾಶಿನಗರ ಸರ್ಕಲ್​ನ ನಿರ್ಮಾಣ ಹಂತದ ಕಟ್ಟಡದಲ್ಲಿ ಪರಿಚಿತನ ತಲೆಗೆ ದೊಣ್ಣೆಯಿಂದ ಹೊಡೆದು ಹತ್ಯೆಗೈದು ಪರಾರಿಯಾಗಿದ್ದ ಬಾಲಕನನ್ನು ಕೆ ಎಸ್​ ಲೇಔಟ್​ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣ ವಿಭಾಗದ ಡಿಸಿಪಿ ಪಿ ಕೃಷ್ಣಕಾಂತ್
ದಕ್ಷಿಣ ವಿಭಾಗದ ಡಿಸಿಪಿ ಪಿ ಕೃಷ್ಣಕಾಂತ್

By

Published : Nov 4, 2022, 5:20 PM IST

Updated : Nov 4, 2022, 5:51 PM IST

ಬೆಂಗಳೂರು: ಕುಡಿದ ಅಮಲಿನಲ್ಲಿ ಪರಿಚಿತನ ತಲೆಗೆ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದ ಕಾನೂನು ಸಂಘರ್ಷಕ್ಕೊಳಪಟ್ಟ ಬಾಲಕನನ್ನ ಕೆ ಎಸ್ ಲೇಔಟ್ ಠಾಣೆ ಪೊಲೀಸರು ಬಿಹಾರದಲ್ಲಿ ಬಂಧಿಸಿದ್ದಾರೆ. ಅಕ್ಟೋಬರ್ 21ರಂದು ರಾತ್ರಿ ಕೆ ಎಸ್ ಲೇಔಟ್ ಠಾಣಾ ವ್ಯಾಪ್ತಿಯ ಕಾಶಿನಗರ ಸರ್ಕಲ್​ನ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದಿದ್ದ ಘಟನೆಯಲ್ಲಿ ಪಾಟ್ನಾ ಮೂಲದ ಮುಖೇಶ್ ಎಂಬಾತನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

ದಕ್ಷಿಣ ವಿಭಾಗದ ಡಿಸಿಪಿ ಪಿ ಕೃಷ್ಣಕಾಂತ್ ಅವರು ಮಾತನಾಡಿದರು

ಬಿಹಾರ ಮೂಲದವರಾದ ಕೊಲೆಯಾದ ಮುಖೇಶ್ ಹಾಗೂ ಹಂತಕ ಕಾಶಿನಗರ ಸರ್ಕಲ್ ಬಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಟೈಲ್ಸ್ ವರ್ಕ್ ಕೆಲಸ ಮಾಡಿಕೊಂಡಿದ್ದರು. ಇಬ್ಬರಿಗೂ ಸಹ ರಾತ್ರಿ ಅಲ್ಲಿಯೇ ತಂಗಲು ಅವಕಾಶ ನೀಡಲಾಗಿತ್ತು. ಅಕ್ಟೋಬರ್ 21ರಂದು ಕುಡಿದ ಅಮಲಿನಲ್ಲಿ ಇಬ್ಬರ ನಡುವೆ ಆರಂಭವಾದ ಗಲಾಟೆ ಮುಖೇಶ್ ಹತ್ಯೆಯೊಂದಿಗೆ ಅಂತ್ಯವಾಗಿತ್ತು.

ಹಂತಕ ರಾತ್ರೋರಾತ್ರಿ ಸ್ಥಳದಿಂದ ಕಾಲ್ಕಿತ್ತು ರೈಲಿನ ಮೂಲಕ ಪಾಟ್ನಾ ತಲುಪಿದ್ದ. ಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದ ಕೆ ಎಸ್ ಲೇಔಟ್ ಪೊಲೀಸರು ಪಾಟ್ನಾಗೆ ತೆರಳಿ ಕೊನೆಗೂ ಆರೋಪಿಯನ್ನ ಬಂಧಿಸಿದ್ದಾರೆ.

ಓದಿ:ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಆರೋಪಿಯ ತಲೆಗೆ 5 ಲಕ್ಷ ಘೋಷಣೆ

Last Updated : Nov 4, 2022, 5:51 PM IST

ABOUT THE AUTHOR

...view details