ಬೆಂಗಳೂರು: ಪ್ರೇಯಸಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಆತ್ಮಹತ್ಯೆ ಎಂದು ನಂಬಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ಪರಿಧಿಯಲ್ಲಿ ಸಿಂಗಸಂದ್ರದ ಬಾಡಿಗೆ ಮನೆಯಲ್ಲಿ ಕಳೆದ 7ನೇ ಬುಧವಾರದಂದು ಮಹಿಳೆಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳೆಂದು ಪ್ರಕರಣ ದಾಖಲಾಗಿತ್ತು.
ಆಂಧ್ರದ ಅನಂತಪುರಂ ಮೂಲದ 27 ವರ್ಷದ ಸುನಿತಾ/ದೀಪು ಎಂಬ ಮಹಿಳೆ ಗಂಡನ ಬಿಟ್ಟು ಹೊಸರೋಡಿಗೆ ಬಂದು ಕೆಲ ವರ್ಷಗಳ ಹಿಂದೆ ಬಂದು ನೆಲೆಸಿದ್ದಳು. ಇದೇ ರಸ್ತೆಯ ವಾಸಿ 25 ವರ್ಷದ ಪ್ರಶಾಂತ್ ಮನೆಯ ಸಮೀಪವೇ ಇದ್ದ ಸುನಿತಾಳೊಂದಿಗೆ ಸಲುಗೆ ಬೆಳೆದು ಇಬ್ಬರೂ ಒಂದಾಗಿದ್ದರು.
ಇದು ಪ್ರಶಾಂತ್ ಮನೆಗೆ ಗೊತ್ತಾಗಿ ಪ್ರಶಾಂತ್ ತಂಗಿಯ ಮದುವೆಯಾದ ಮೇಲೆ ಇಬ್ಬರು ಮದುವೆಯಾಗಿ ಮನೆಗೆ ಬನ್ನಿ ಎಂದು ಕಟ್ಟಪ್ಪಣೆ ಮಾಡಿದ ಮೇಲೆ ಸಿಂಗಸಂದ್ರದ ಮನೆಯಲ್ಲಿ ಲಿವಿಂಗ್ ಟುಗೆದರ್ ಸಂಬಂಧದಲ್ಲಿ ನೆಲೆಸಿದ್ದರು.