ಕರ್ನಾಟಕ

karnataka

ETV Bharat / state

ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ವಂಚನೆ: ಬೆಂಗಳೂರಿನಲ್ಲಿ ಆರೋಪಿ ಬಂಧನ - ಕ್ರಿಪ್ಟೋ ಕರೆನ್ಸಿ

ನಿಮ್ಮ ಅಕೌಂಟಿನ ಡೆಬಿಟ್ ಕಾರ್ಡ್/ಚೆಕ್ ಬುಕ್ ಮತ್ತು ಸಿಮ್ ಕಾರ್ಡ್ ನೀಡಿದರೆ ನಿಮ್ಮ ಹಣವನ್ನು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಿ ಕೊಡುವುದಾಗಿ ನಂಬಿಸಿ, ಸಾರ್ವಜನಿಕರನ್ನ ವಂಚಿಸುತ್ತಿದ್ದ ಆರೋಪಿಯನ್ನ ಈಶಾನ್ಯ ವಿಭಾಗದ ಸಿಇಎನ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕ್ರಿಪ್ಟೋ ಕರೆನ್ಸಿ
cryptocurrency fraud case

By

Published : Sep 30, 2022, 12:20 PM IST

ಬೆಂಗಳೂರು: ಕ್ರಿಪ್ಟೋ ಕರೆನ್ಸಿ ಮೇಲಿನ ಕುತೂಹಲವನ್ನೇ ಬಂಡವಾಳವನ್ನಾಗಿಸಿಕೊಂಡು ಲಾಭ ಗಳಿಸಿಕೊಡುವುದಾಗಿ ಬ್ಯಾಂಕ್ ಖಾತೆ, ಸಿಮ್ ಕಾರ್ಡ್ ಪಡೆದು ವಂಚಿಸುತ್ತಿದ್ದ ಆರೋಪಿಯನ್ನ ಈಶಾನ್ಯ ವಿಭಾಗದ ಸಿಇಎನ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಶಾನೀದ್ ಅಬ್ದುಲ್ ಬಂಧಿತ ಆರೋಪಿ.

ಟೆಲಿಗ್ರಾಂನಲ್ಲಿ ಗ್ರೂಪ್ ಮಾಡಿಕೊಂಡಿದ್ದ ಅರೋಪಿ, ಬೇರೆ ಬೇರೆ ಜನರಿಗೆ ಗ್ರೂಪ್ ಲಿಂಕ್ ಕಳುಹಿಸಿ ಸೇರ್ಪಡೆ ಮಾಡಿಕೊಳ್ಳುತ್ತಿದ್ದ. ಬಳಿಕ ನೀವು ನಿಮ್ಮ ಕರೆಂಟ್ ಅಕೌಂಟಿನ ಡೆಬಿಟ್ ಕಾರ್ಡ್/ಚೆಕ್ ಬುಕ್ ಮತ್ತು ಸಿಮ್ ಕಾರ್ಡ್ ನೀಡಿದರೆ ನಿಮ್ಮ ಹಣವನ್ನು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಿ ಕೊಡುವುದಾಗಿ ನಂಬಿಸುತ್ತಿದ್ದ. ಬಳಿಕ ಅಕೌಂಟಿನಲ್ಲಿದ್ದ ಹಣವನ್ನು ವರ್ಗಾಯಿಸಿಕೊಂಡು ವಂಚಿಸುತ್ತಿದ್ದ.

ಇದನ್ನೂ ಓದಿ:ಕ್ರಿಪ್ಟೋ ಕರೆನ್ಸಿ ಹಣ ಹೂಡಿದರೆ ಹೆಚ್ಚಿನ ಲಾಭಾಂಶದ ಆಸೆ ತೋರಿಸಿ ಕೋಟ್ಯಂತರ ವಂಚನೆ : 17 ಕೋಟಿ ರೂಪಾಯಿ ಜಪ್ತಿ

ಸದ್ಯ ಆರೋಪಿಯನ್ನ ಬಂಧಿಸಿರುವ ಸಿಇಎನ್ ಪೊಲೀಸರು ಬಂಧಿತನಿಂದ ಬರೋಬ್ಬರಿ 222 ಸಿಮ್ ಕಾರ್ಡ್​​​​ಗಳು, 10 ಮೊಬೈಲ್ ಫೋನ್‌ಗಳು, 10 ಡೆಬಿಟ್ ಕಾರ್ಡ್​ಗಳು, ಬ್ಯಾಂಕ್ ಪಾಸ್ ಬುಕ್, ಚೆಕ್​ಬುಕ್​ಗಳನ್ನ ವಶಕ್ಕೆ ಪಡೆದಿದ್ದಾರೆ‌. ಪ್ರಕರಣದ ಮತ್ತೋರ್ವ ಆರೋಪಿ ಎಸ್ಕೇಪ್ ಆಗಿದ್ದು, ಪತ್ತೆ ಕಾರ್ಯ ಮುಂದುವರೆದಿದೆ.

ABOUT THE AUTHOR

...view details