ಕರ್ನಾಟಕ

karnataka

ರೈಲ್ವೆ ನೌಕರನ ಸೋಗಿನಲ್ಲಿ ಗಾಂಜಾ ಸಾಗಾಟ.. ಅಸ್ಸೋಂನ ಕಳ್ಳ ದಂಧೆಕೋರ ಅರೆಸ್ಟ್​

By

Published : Aug 31, 2022, 6:01 PM IST

Updated : Aug 31, 2022, 10:49 PM IST

ಅಸ್ಸೋಂನಿಂದ ಬೆಂಗಳೂರಿಗೆ ಗಾಂಜಾ ಸಾಗಣೆ ಮಾಡುತ್ತಿದ್ದ ಆರೋಪಿ ಅಸ್ವಕ್​ ಎಂಬಾತನನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಅಸ್ವಕ್
ಆರೋಪಿ ಅಸ್ವಕ್

ಬೆಂಗಳೂರು:ರೈಲ್ವೆ ಇಲಾಖೆಯ ನೌಕರ ಎಂದು ಹೇಳಿಕೊಂಡು ನಕಲಿ ಐಡಿ ಕಾರ್ಡ್ ಮಾಡಿಸಿ ರೈಲಿನ ಮೂಲಕ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಉಪ್ಪಾರಪೇಟೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಗಾಂಜಾ ವಶಕ್ಕೆ ಪಡೆದಿರುವುದು

ಮೊಹಮ್ಮದ್ ಅಸ್ವಕ್ ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ಆರೋಪಿ ಅಸ್ಸೋಂನಲ್ಲಿ ಒಂದು ಹಾಗೂ ಗದಗದಲ್ಲಿ ಇನ್ನೊಂದು ಮದುವೆ ಮಾಡಿಕೊಂಡಿದ್ದ. ಅಸ್ಸೋಂನಿಂದ ಬೆಂಗಳೂರಿಗೆ ಗಾಂಜಾ ಸಾಗಿಸುತ್ತಿದ್ದ ಅಸ್ವಕ್, ಗಾಂಜಾ ಸಾಗಿಸಲು ರೈಲ್ವೆ ಸಿಬ್ಬಂದಿಯನ್ನು ಬುಕ್ ಮಾಡಿ ಅಸ್ಸೋಂನಲ್ಲಿ ರೈಲ​ನ್ನು ಸ್ವಚ್ಛ ಮಾಡಲು ಹೋದಾಗ ಗಾಂಜಾ ಪ್ಯಾಕೆಟ್​ಗಳನ್ನ ಎಸಿ ಕೋಚ್​ಗಳಲ್ಲಿ ಲೋಡ್ ಮಾಡಿಸಿ ಅಲ್ಲಿಂದ ಬೆಂಗಳೂರಿಗೆ ತರಿಸುತ್ತಿದ್ದ ಎಂದು ತಿಳಿದುಬಂದಿದೆ.

ರೈಲ್ವೆ ಉದ್ಯೋಗಿಗಳ ಜೊತೆ ಸಂಪರ್ಕ:ಪುಣೆಯಲ್ಲಿ ರೈಲ್ವೆ ನೌಕರ ಎಂದು ಐಡಿ ಕಾರ್ಡ್ ಮಾಡಿಸಿಕೊಂಡಿದ್ದ ಅಸ್ವಕ್, ಬೆಂಗಳೂರಿಗೆ ರೈಲು ತಲುಪುತ್ತಿದ್ದಂತೆ ಕ್ಲೀನಿಂಗ್​ಗೆ ಹೋಗುವ ತನಕ ಕಾಯ್ದು ಅಲ್ಲಿ ಗಾಂಜಾ ರಿಸೀವ್ ಮಾಡುತ್ತಿದ್ದ. ಅಲ್ಲದೇ, ಆರೋಪಿಗೆ ರೈಲ್ವೆ ಉದ್ಯೋಗಿಗಳ ಜೊತೆಗೆ ನೆಟ್​ವರ್ಕ್ ಇರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಸದ್ಯ ಈತನನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಓದಿ:ಚಾಮರಾಜಪೇಟೆ ಈದ್ಗಾ ಮೈದಾನದ ಸುತ್ತಮುತ್ತ ಪೊಲೀಸ್​ ಸರ್ಪಗಾವಲು

Last Updated : Aug 31, 2022, 10:49 PM IST

ABOUT THE AUTHOR

...view details