ಬೆಂಗಳೂರು:ಸಾಲ ಕೊಡಿಸುವ ಸೋಗಿನಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ ಸಾವಿರಾರು ರೂ. ಹಣ ಪೀಕುತ್ತಿದ್ದ ನಾಲ್ವರು ಆರೋಪಿಗಳನ್ನು ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಸತೀಶ್, ಉದಯ್, ಜಯರಾಮ್, ವಿನಯ್ ಬಂಧಿತರು. ಬ್ಯಾಂಕ್‌ವೊಂದರ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡಿದ್ದ ಆರೋಪಿಗಳು ಜನರ ಜೊತೆ ಸಾಲದ ಬಗ್ಗೆ ಹೇಗೆ ಮಾತನಾಡಬೇಕು ಎಂಬುದರ ಬಗ್ಗೆ ಅರಿತ್ತಿದ್ದರು ಎಂದು ತಿಳಿದುಬಂದಿದೆ.
ಸಾಲ ಕೊಡಿಸುವ ನೆಪದಲ್ಲಿ ಜನರಿಗೆ ವಂಚನೆ: ನಾಲ್ವರ ಬಂಧನ - ಸಾಲ ಕೊಡಿಸುವ ನೆಪದಲ್ಲಿ ಹಣ ಕೀಳುತ್ತಿದ್ದ ಆರೋಪಿಗಳು ಅರೆಸ್ಟ್
ಮೋಜು ಮಸ್ತಿ ಲೈಫ್ಗಾಗಿ ಹೆಚ್ಚಿನ ಹಣ ಗಳಿಸುವ ಆಸೆಯಲ್ಲಿ ಬಿದ್ದು ಸಾಲ ಕೊಡಿಸುವ ಸೋಗಿನಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ ಮೋಸ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಂಚಕರು
ಪ್ರೊಸೆಸಿಂಗ್ ಫೀಸ್, ಅಪ್ಲಿಕೇಷನ್ ಫೀಸ್ ಎಂದೆಲ್ಲಾ ಮೊದಲಿಗೆ ಎರಡು ಸಾವಿರ, ಮೂರು ಸಾವಿರ ಹಣ ಹಾಕಿಸಿಕೊಳ್ಳುತ್ತಿದ್ದ ಆರೋಪಿಗಳು ಹಂತಹಂತವಾಗಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಈಶಾನ್ಯ ವಿಭಾಗದ ಸೆನ್ ಪೊಲೀಸರು ಆರೋಪಿಗಳನ್ನು ಬಂಧಿಸಿ ಖಾತೆಯಲ್ಲಿದ್ದಒಂದೂವರೆ ಲಕ್ಷ ರೂಪಾಯಿ ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ಕೈ ಮುಗಿದರೂ ಬಿಡದೆ ಹಲ್ಲೆ ನಡೆಸಿದ ಪುಂಡರ ತಂಡ- ಸಿಸಿಟಿವಿ ವಿಡಿಯೋ