ಕರ್ನಾಟಕ

karnataka

ETV Bharat / state

OLXನಲ್ಲಿ ಮೋಸ ಹೋಗಿ ತಾನೂ ವಂಚನೆಗೆ ಯತ್ನಿಸಿದ ಆರೋಪಿ ಅರೆಸ್ಟ್‌

ಐಷಾರಾಮಿ ಜೀವನ ಮಾಡಬಹುದೆಂದು ಅಡ್ಡದಾರಿ ಹಿಡಿದು ಬಹುತೇಕ ಮಂದಿಗೆ ನಾನಾ ಹೆಸರುಗಳನ್ನು ಹೇಳಿಕೊಂಡು ಮೋಸ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

OLx ನಲ್ಲಿ ಮೋಸ ಹೋಗಿದಕ್ಕೆ, ತಾನು ಮೋಸ ಮಾಡಲು ಹೋದ ಆರೋಪಿ ಅಂದರ್
OLx ನಲ್ಲಿ ಮೋಸ ಹೋಗಿದಕ್ಕೆ, ತಾನು ಮೋಸ ಮಾಡಲು ಹೋದ ಆರೋಪಿ ಅಂದರ್

By

Published : Aug 30, 2020, 4:23 PM IST

ಬೆಂಗಳೂರು: ಒಎಲ್​ಎಕ್ಸ್​​​ನಲ್ಲಿ ಜಾಹೀರಾತು ನೋಡಿ ಮೊಬೈಲ್ ವಸ್ತುಗಳನ್ನು ಖರೀದಿ‌‌ ಮಾಡಲು ಹೋಗಿ ವ್ಯಕ್ತಿಯೊಬ್ಬ 5 ಸಾವಿರ ರೂಪಾಯಿ ಕಳೆದುಕೊಂಡಿದ್ದ. ಇದರಿಂದ ತಾನು ಕೂಡ ಇದೇ ದಾರಿ ಹಿಡಿದು ಐಷಾರಾಮಿ ಜೀವನ ಮಾಡಬಹುದೆಂದು ಅಡ್ಡದಾರಿ ಹಿಡಿದು ಬಹುತೇಕ ಮಂದಿಗೆ ನಾನಾ ಹೆಸರುಗಳನ್ನು ಹೇಳಿಕೊಂಡು ಮೋಸ ಮಾಡಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

ಮಂಜುನಾಥ ಅಲಿಯಾಸ್ ನಂದೀಶ್ ರೆಡ್ಡಿ ಬಂಧಿತ ಆರೋಪಿ. ಈತ ‌ಮೊದಲು ಒಎಲ್​ಎಕ್ಸ್ ಜಾಹೀರಾತಿನಲ್ಲಿ ವಾಹನಗಳ ಮಾರಾಟಕ್ಕೆ ಪ್ರಕಟಿಸಿರುವ ಜಾಹೀರಾತುದಾರರನ್ನು ಭೇಟಿ ಮಾಡಿದ್ದಾನೆ. ಈ ವೇಳೆ ತಮ್ಮ ಸಂಬಂಧಿಕರಿಗೆ ವಾಹನ ಬೇಕಾಗಿರುವುದಾಗಿ ಮೊದಲು ನಂಬಿಸುತ್ತಿದ್ದ. ನಂತರ ನಿರುದ್ಯೋಗಿಗಳನ್ನು ಹುಡುಕಿ ಅವರಿಗೆ ಕೆಲಸ ಕೊಡಿಸುವ ನೆಪ ಹೇಳಿ ಅವರಿಂದ ಸಿಮ್​​ಗಳನ್ನು ಖರೀದಿಸಿ ತನ್ನ ಕೆಲಸಕ್ಕೆ ಸಿಮ್ ಬಳಕೆ ಮಾಡುತ್ತಿದ್ದ.

OLx ನಲ್ಲಿ ಮೋಸ ಹೋಗಿದ್ದಕ್ಕೆ, ತಾನೂ ಮೋಸ ಮಾಡಲು ಹೋದ ಆರೋಪಿ ಅಂದರ್

ಮೊದಲೇ ಅಸಲಿ‌ ಮಾಲೀಕರಿಂದ ವಾಹನಗಳ ಮಾಹಿತಿ ಹಾಗೂ ಫೋಟೋ ‌ಪಡೆದು ಒಎಲ್‌​ಎಕ್ಸ್​ನಲ್ಲಿ ಪ್ರಕಟಿಸಿರುವ ಬೆಲೆಗಿಂತ ಇನ್ನೂ‌ ಕಡಿಮೆ ಬೆಲೆಗೆ ವಾಹನ ಮಾರಾಟಕ್ಕಿದೆ ಎಂದು ತನ್ನ ನಿಜವಾದ ಹೆಸರು ‌ಮರೆಮಾಚಿ ಬಾಬು, ನಂದೀಶ್ ರೆಡ್ಡಿ, ಶಿವಾಜಿ ರಾವ್ , ನರಸಿಂಹಯ್ಯ ಹೀಗೆ ವಿವಿಧ ಹೆಸರುಗಳಲ್ಲಿ ಜಾಹೀರಾತು ನೀಡುತ್ತಿದ್ದ.

‌ಇದನ್ನ ನೋಡಿ‌ ಕೆಲವರು ಆರೋಪಿಯನ್ನು ಸಂಪರ್ಕಿಸಿದಾಗ ಇದು ನನ್ನ ಸಂಬಂಧಿಕರ ವಾಹನವೆಂದು ನಂಬಿಸಿದ್ದಾನೆ. ಈ ವೇಳೆ ನಿಜವಾಗಿ ಜಾಹೀರಾತು ಹಾಕಿದವರ ಬಳಿ‌ ಕರೆದೊಯ್ದು ಈತನೇ ಸಂಬಂಧಿಕನೆಂದು ನಂಬಿಸಿ ಗ್ರಾಹಕರಿಗೆ ಮತ್ತು ಮಾಲೀಕರಿಗೆ ನಂಬಿಕೆ ಬರುವಂತೆ ನಟನೆ ಮಾಡುತ್ತಿದ್ದನಂತೆ. ನಂತರ ವಾಹನ ಖರೀದಿ ಮಾಡುವ ಗ್ರಾಹಕರಿಂದ ಅನುಮಾನ ಬಾರದಂತೆ ಹಣ ಪಡೆದು ಎಸ್ಕೇಪ್ ಆಗುತ್ತಿದ್ದ.

ಈತನ ಬಗ್ಗೆ ದಾಖಲಾದ ದೂರಿನ ಆಧಾರದ ಮೇರೆಗೆ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆರೋಪಿಯು ಬೆಂಗಳೂರಿನ ತಿಲಕ್ ನಗರ, ಕೆ.ಆರ್.ಪುರಂ, ನೆಲಮಂಗಲ, ನಾಯಂಡಹಳ್ಳಿ ಮತ್ತು ಮೈಸೂರು‌‌ ಮುಂತಾದ ಕಡೆಗಳಲ್ಲಿ ಲಕ್ಷ ಲಕ್ಷ ಹಣ ದೋಖಾ ಮಾಡಿರುವ ವಿಚಾರ ಬಯಲಾಗಿದೆ. ಆರೋಪಿಯ ಬಳಿಯಿಂದ ಚಿನ್ನದ ಒಡವೆ, ಒಂದು ಫಿಯಟ್ ಕಾರು, ಎರಡು ದ್ವಿಚಕ್ರ ವಾಹನ, ವಾಚ್, ಗೃಹೋಪಯೋಗಿ ವಸ್ತುಗಳು, ನಗದು ವಶಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.

ABOUT THE AUTHOR

...view details