ಬೆಂಗಳೂರು :ಪೊಲೀಸರ ಗುಂಡೇಟು ತಿಂದವನು ಲಾಕ್‌ಡೌನ್ ಇದ್ರೂ ಗಣನೆಗೆ ತೆಗೆದುಕೊಳ್ಳದೇ ಜೈಲಿನಿಂದ ಮತ್ತೆ ವಾಪಸ್ ಬಂದು ಪುಂಡಾಟ ಮೆರೆದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.
ಪೊಲೀಸರಿಂದ ಗುಂಡು ರುಚಿ ತಿಂದ್ರೂ ಬುದ್ಧಿ ಕಲಿಯದ ಆಸಾಮಿ.. ಲಾಕೌಡೌನ್ ಇದ್ರೂ ಮತ್ತೆ ಕಿರಿಕ್.. - ಮಾಲೀಕ ರೌಡಿಗಳ ಪುಂಡಾಟದ ಹಿನ್ನೆಲೆ ಮನೆ ಖಾಲಿ
ಪೊಲೀಸರ ಗುಂಡೇಟು ತಿಂದವನು ಲಾಕ್‌ಡೌನ್ ಇದ್ರು ಗಣನೆಗೆ ತೆಗೆದುಕೊಳ್ಳದೆ ಜೈಲಿನಿಂದ ಮತ್ತೆ ವಾಪಾಸ್ ಬಂದು ಮನೆ ಮಾಲೀಕನ ಕಾಲು ಮುರಿದಿರುವ ಘಟನೆ ನಡೆದಿದೆ.
ಮಾರತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಂದ್ರು ಎಂಬುವರು ಮನೆ ಹೊಂದಿದ್ದಾರೆ. ಅದೇ ಮನೆಯಲ್ಲಿ ಬಾಡಿಗೆಗೆ ರೌಡಿ ಗಾಂಡು ಕುಮಾರ ಇದ್ದ. ಹೀಗಾಗಿ, ಮಾಲೀಕ ರೌಡಿಗಳ ಪುಂಡಾಟದ ಹಿನ್ನೆಲೆ ಮನೆ ಖಾಲಿ ಮಾಡಿಸಿದ್ರು. ಇದೇ ವಿಚಾರವಾಗಿ ಕುಮಾರ ಹಲ್ಲೆ ಮಾಡಲು ಮುಂದಾಗಿದ್ದ. ಹೀಗಾಗಿ ಪೊಲೀಸರು ಬಂಧಿಸಲು ಹೋದಾಗ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದ. ಈ ಹಿನ್ನಲೆಯಲ್ಲಿ ಪೊಲೀಸರು ಕುಮಾರ್‌ನ ಕಾಲಿಗೆ ಗುಂಡು ಹೊಡೆದು ಜೈಲಿಗೆ ಅಟ್ಟಿದ್ರು.
ಸದ್ಯ ಜಾಮೀನು ಪಡೆದು ಬಂದವನು ಮತ್ತೆ ಮನೆ ಮಾಲೀಕ ಚಂದ್ರು ಮೇಲೆ ಕಿರಿಕ್ ಮಾಡಿ ಹಲ್ಲೆ ನಡೆಸಿ ಕಾಲು ಮುರಿದಿದ್ದಾನೆ. ಸದ್ಯ ಘಟನೆ ಸಂಬಂಧ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ವಿರುದ್ಧ ದೂರು ದಾಖಲಾಗಿದೆ. ಲಾಕ್‌ಡೌನ್ ಆದರೂ ಹಳೆ ಚಾಳಿ ಬಿಡದ ಕಾರಣ ತನಿಖೆ ಮುಂದುವರೆದಿದೆ.