ಕರ್ನಾಟಕ

karnataka

ETV Bharat / state

ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ಹೇಳಿ ಯುವತಿಯರಿಗೆ  ಲಕ್ಷಾಂತರ ರೂ. ದೋಖಾ: ಆರೋಪಿ ಅಂದರ್ - ಬಿಡಿಎ ನಿವೇಶನ‌

ಸಿನಿಮಾ, ಧಾರಾವಾಹಿ ಹಾಗೂ ಪ್ರತಿಷ್ಠಿತ ಜುವೆಲ್ಲರಿ ಶಾಪ್ ಗಳಲ್ಲಿ ಆ್ಯಡ್ ಶೂಟ್ ಗೆ ಚಾನ್ಸ್ ಕೊಡಿಸುವುದಾಗಿ ನಂಬಿಸಿ ಯುವತಿಯರಿಂದ ಲಕ್ಷಾಂತರ ರೂ.ದೋಖಾ ಮಾಡಿದ್ದ ಖತರ್ ನಾಕ್ ಕಳ್ಳನನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಸಿನಿಮಾ, ಧಾರಾವಾಹಿಗಳಲ್ಲಿ ಚಾನ್ಸ್ ಕೊಡಿಸುವುದಾಗಿ ಲಕ್ಷಾಂತರ ರೂ.ದೋಖಾ ; ಆರೋಪಿ ಅಂದರ್

By

Published : Aug 29, 2019, 4:53 PM IST

ಬೆಂಗಳೂರು:ಸಿನಿಮಾ, ಧಾರಾವಾಹಿ ಹಾಗೂ ಪ್ರತಿಷ್ಠಿತ ಜುವೆಲ್ಲರಿ ಶಾಪ್​ಗಳ ಜಾಹೀರಾತಿನಲ್ಲಿ ಚಾನ್ಸ್ ಕೊಡಿಸುವುದಾಗಿ ನಂಬಿಸಿ ಯುವತಿಯರಿಗೆ ಲಕ್ಷಾಂತರ ರೂ. ವಂಚಿಸಿದ್ದ ಖತರ್ ನಾಕ್ ಕಳ್ಳನನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಫೇಸ್ ಬುಕ್ ನಲ್ಲಿ ಹುಡುಗಿಯರನ್ನು ಹುಡುಕಿ, ಅವರನ್ನು ನಂಬಿಸಿ ಸಿನಿಮಾ ಹಾಗೂ ಜ್ಯುವೆಲ್ಲರಿ ಶಾಪ್ ಗಳ ಜಾಹೀರಾತಿನಲ್ಲಿ ಅವಕಾಶ ನೀಡುವುದಾಗಿ ಹೇಳಿ ಮೋಸ ಮಾಡುತ್ತಿದ್ದ ಆರೋಪಿ ನಿಖಿಲ್ ಗೌಡ ಎಂಬಾತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಬೆಂಗಳೂರು, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ 9 ಮಂದಿ ಯುವತಿಯಗೆ 4.23 ಲಕ್ಷ ರೂ. ಮೋಸ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಇಷ್ಟೇ ಅಲ್ಲದೆ ಬಿಡಿಎ ನಿವೇಶನ‌ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ 25 ಸಾವಿರ ರೂ.ಟೋಪಿ ಹಾಕಿದ್ದಾನೆ ಎಂದು ನಗರ ಉತ್ತರ ವಿಭಾಗದ ಡಿಸಿಪಿ ಎನ್.ಶಶಿ ಕುಮಾರ್ ತಿಳಿಸಿದ್ದಾರೆ.

ABOUT THE AUTHOR

...view details