ಕರ್ನಾಟಕ

karnataka

ETV Bharat / state

ಸಿಎಎ, ಎನ್​​ಆರ್​​​​ಸಿ ಪ್ರೊಟೆಸ್ಟ್ ಪೇಜ್:  ಪೊಲೀಸರ ಮೇಲೆ ಹಲ್ಲೆ ಆರೋಪ - ಸಿಎಎ, ಎನ್ ಆರ್ ಸಿ ಪ್ರೊಟೆಸ್ಟ್ ಪೇಜ್

ಇತ್ತೀಚಿಗೆ ಪೌರತ್ವ ಕಿಚ್ಚು ದಿನೇ ದಿನೆ ಹೆಚ್ಚಾಗ್ತಿದೆ. ಅದಕ್ಕೆ ಪುಷ್ಟಿ ನೀಡುವಂತೆ ಸಿಎಎ, ಎನ್ ಆರ್ ಸಿ ಪ್ರೊಟೆಸ್ಟ್ ಪೇಜ್ ನಲ್ಲಿ ಪೊಲೀಸರು ಹಲ್ಲೆ ಮಾಡಿದ್ದಾರೆಂದು ಟ್ವೀಟರ್ ನಲ್ಲಿ ಆರೋಪ ಮಾಡಲಾಗಿರುವ ಘಟನೆ ಬೆಳಕಿಗೆ ಬಂದಿದೆ.

accuse-on-police-depertment-in-caa-nrc-protest-page
ಸಿಎಎ, ಎನ್ ಆರ್ ಸಿ ಪ್ರೊಟೆಸ್ಟ್ ಪೇಜ್ ನಲ್ಲಿ ಪೊಲೀಸರ ಮೇಲೆ ಹಲ್ಲೆ ಆರೋಪ ...

By

Published : Jan 16, 2020, 10:35 AM IST

ಬೆಂಗಳೂರು:ಇತ್ತೀಚಿಗೆ ಪೌರತ್ವ ಕಿಚ್ಚು ದಿನೇ ದಿನೆ ಹೆಚ್ಚಾಗ್ತಿದೆ. ಅದಕ್ಕೆ ಪುಷ್ಟಿ ನೀಡುವಂತೆ ಸಿಎಎ, ಎನ್​​​​ಆರ್​​​​ಸಿ ಪ್ರೊಟೆಸ್ಟ್ ಪೇಜ್ ನಲ್ಲಿ ಪೊಲೀಸರು ಹಲ್ಲೆ ಮಾಡಿದ್ದಾರೆಂದು ಟ್ವೀಟರ್ ನಲ್ಲಿ ಆರೋಪ ಮಾಡಲಾಗಿರುವ ಘಟನೆ ಬೆಳಕಿಗೆ ಬಂದಿದೆ.

ಇದೇ ತಿಂಗಳ 13ರ ಮಧ್ಯರಾತ್ರಿ 2:30 ರ ಸುಮಾರಿಗೆ ನಗರದ ಸುದುಗುಂಟೆಪಾಳ್ಯದ ಆಂಜನೇಯ ದೇವಸ್ಥಾನದ ಬಳಿ ಯಲಹಂಕದ ಖಾಸಗಿ ಕಾಲೇಜಿನ ವಿದ್ಯಾರ್ಥಿಯೊಬ್ಬ ಸೇರಿದಂತೆ ಮೂವರು ಯುವಕರು ರಸ್ತೆಯ ಬದಿ ನಿಂತಿದ್ವಿ. ಈ ವೇಳೆ ಬೀಟ್ ಪೊಲೀಸರು‌ ಅನುಚಿತ ವರ್ತಿಸಿದ್ದು, ಪಾಕಿಸ್ತಾನದವರು ಎಂದು ಆರೋಪ‌ ಮಾಡಿದ್ದಾರೆ. ಅಲ್ಲದೇ ಯಾವುದೇ ವಾರೆಂಟ್ ಇಲ್ಲದೇ ಬಲವಂತವಾಗಿ ಠಾಣೆಗೆ ಕರೆದೊಯ್ದಿದ್ದು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ಸದುಗುಂಟೆ ಠಾಣೆಯ ಪೊಲೀಸರ ಮೇಲೆ ಸಿಎಎ, ಎನ್ ಆರ್ ಸಿ ಪ್ರೊಟೆಸ್ಟ್ ಇನ್ಫೋ ಪೇಜ್ ನಲ್ಲಿ ಆರೋಪ‌ಮಾಡಿ ಅಪ್ಲೋಡ್‌‌ ಮಾಡಿದ್ದಾರೆ.

ಆದರೆ, ಈ ಆರೋಪ ತಳ್ಳಿಹಾಕಿದ ಪೊಲೀಸರು‌ ತಡರಾತ್ರಿ ಐದು ಯುವಕರು ನಿಂತಿದ್ದರು. ಮಧ್ಯರಾತ್ರಿ ನಿಂತಿದ್ದ ಯುವಕರ ಬಳಿ ತೆರಳಿದಾಗ ಪೊಲೀಸರ ಕಂಡ ಇಬ್ಬರು ಯುವಕರು ಓಡಿ ಹೊಗಿದ್ದರು. ಅಲ್ಲದೇ, ನಾವು ಪೊಲೀಸರು ಎಂದಾಗ ಐಡಿ ಕಾರ್ಡ್ ತೊರಿಸಿ ಎಂದು‌ ಯುವಕರು ಪ್ರಶ್ನೆ ಮಾಡಿದ್ದಾರೆ.‌ ಐಡಿ ತೋರಿಸಿದ ಬಳಿಕ ಅವರನ್ನು ಠಾಣೆಗೆ ಕೆರೆತಂದು ಪಿಟಿ ಕೇಸ್ ಹಾಕಿ ಬಿಟ್ಟು ಕಳುಹಿಸಿದ್ದೇವೆ. ಸದ್ಯ ಯಾವುದೇ ಹಲ್ಲೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ABOUT THE AUTHOR

...view details