ಕರ್ನಾಟಕ

karnataka

ETV Bharat / state

ಹಿಂದೂ ಸಂಸ್ಕೃತಿಗೆ ಧಕ್ಕೆ ಆರೋಪ: 'ನ್ಯೂಡ್​ ವಿತ್​​​​​​​​​​​​​​​ ಮಂಗಳಸೂತ್ರ' ಚಿತ್ರಕಲಾ ಪ್ರದರ್ಶನ ರದ್ದು

ಹಿಂದೂ ಧರ್ಮದ ಸಂಸ್ಕೃತಿಗೆ ಧಕ್ಕೆಯಾಗುತ್ತೆ ಎಂಬ ಆರೋಪದಡಿ ಕಲಾವಿದ ಸುಜಿತ್ ಕುಮಾರ್ ಜಿ.ಎಸ್. ಮಂಡ್ಯ ಅವರ 'ನ್ಯೂಡ್ ವಿತ್ ಮಂಗಳಸೂತ್ರ' ವಿಷಯದ ಕುರಿತ ಚಿತ್ರಕಲಾ ಪ್ರದರ್ಶನ ರದ್ದಾಗಿದೆ.

ನ್ಯೂಡ್​ ವಿತ್​​​​​​​​​​​​​​​ ಮಂಗಳಸೂತ್ರ ಚಿತ್ರಕಲಾ ಪ್ರದರ್ಶನ

By

Published : Mar 23, 2019, 1:22 PM IST

ಬೆಂಗಳೂರು: ಮಾ. 22 ರಿಂದ 31ರವರೆಗೆ ಚಿತ್ರಕಲಾ ಪರಿಷತ್​ನಲ್ಲಿ ಆಯೋಜನೆಗೊಂಡಿದ್ದ ಕಲಾವಿದ ಸುಜಿತ್ ಕುಮಾರ್ ಜಿ.ಎಸ್. ಮಂಡ್ಯ ಅವರ 'ನ್ಯೂಡ್ ವಿತ್ ಮಂಗಳಸೂತ್ರ' ವಿಷಯದ ಕುರಿತ ಚಿತ್ರಕಲಾ ಪ್ರದರ್ಶನತೀವ್ರ ವಿರೋಧಕ್ಕೆ ಒಳಗಾಗಿ ರದ್ದಾಗಿದೆ.

ಮಂಗಳಸೂತ್ರದ ಚಿತ್ರದೊಂದಿಗೆ ಹೆಣ್ಣಿನ ನಗ್ನ ಚಿತ್ರ ಬಿಡಿಸಿ ಪ್ರದರ್ಶನ ಮಾಡುತ್ತಿರುವುದರಿಂದ ಹಿಂದೂ ಧರ್ಮದ ಸಂಸ್ಕೃತಿಗೆ ಧಕ್ಕೆಯಾಗುತ್ತೆ ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಸಂಘಟನೆ ವಿರೋಧಿಸಿ, ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಪ್ರದರ್ಶನವನ್ನು ರದ್ದು ಮಾಡಿಸಿವೆ.

ಅವರವರ ತಿಳುವಳಿಕೆಗೆ ಸೀಮಿತವಾಗಿ ಚಿತ್ರವನ್ನು ನೋಡುತ್ತಿದ್ದಾರೆ:

ಕಲಾವಿದನ ದೃಷ್ಟಿಯಲ್ಲಿ ಇದಕ್ಕೆ ವಿಶಾಲಾರ್ಥವಿದೆ, ಉತ್ತಮ ಭಾವನೆಯೂ ಇದೆ. ಸಂಕುಚಿತವಾಗಿ ಬೆತ್ತಲೆ ಚಿತ್ರದೊಂದಿಗೆ ಮಂಗಳಸೂತ್ರ ಎಂದು ಭಾವಿಸಬಾರದು‌. ನಾನೂ ಕೂಡಾ ಒಬ್ಬ ಹಿಂದೂ ಆಗಿ, ಮಂಗಳಸೂತ್ರಕ್ಕೆ ಇರುವ ಅಪಾರ ಗೌರವದಿಂದಲೇ ಅದರ ಮಹತ್ವ ವಿವರಿಸುವ ರೀತಿ ಈ ಚಿತ್ರ ಬಿಡಿಸಿರುವೆ. ಅವರವರ ತಿಳುವಳಿಕೆಗೆ ಸೀಮಿತವಾಗಿ ಚಿತ್ರವನ್ನು ನೋಡುತ್ತಿದ್ದಾರೆ. ಆರು ವರ್ಷದ ಶ್ರಮವನ್ನು ತಡೆ ಹಿಡಿಯಲು ಸಾಧ್ಯವಿಲ್ಲ. ಚುನಾವಣೆ ಮುಗಿದ ಬಳಿಕ ಮತ್ತೆ ಪ್ರದರ್ಶನ ಮಾಡುತ್ತೇನೆ ಎಂದು ಸುಜಿತ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ನ್ಯೂಡ್​ ವಿತ್​​​​​​​​​​​​​​​ ಮಂಗಳಸೂತ್ರ ಚಿತ್ರಕಲಾ ಪ್ರದರ್ಶನ

ಈ ಬಗ್ಗೆ ಮಾತನಾಡಿದ ವಿಶ್ವ ಹಿಂದೂ ಪರಿಷತ್​ನ ಬೆಂಗಳೂರು ವಿಭಾಗದ ಕಾರ್ಯದರ್ಶಿ ಸುರೇಶ್, ಅಭಿವ್ಯಕ್ತಿ ಹೆಸರಲ್ಲಿ ಈ ಕಲಾವಿದರು ಧಾರ್ಮಿಕ ಭಾವನೆಗೆ ಧಕ್ಕೆ ತರಬಾರದು. ಹೆಣ್ಣನ್ನು ಪೂಜಿಸುವ ದೇಶ ಇದು. ಕಲಾವಿದನ ವಿರೋಧಿ ಅಲ್ಲ. ಆದರೆ ಧರ್ಮಕ್ಕೆ ವಿರೋಧ ಆಗಿರುವ ಕಲೆಯನ್ನು ವಿರೋಧಿಸುತ್ತೇವೆ. ಮಂಗಳಸೂತ್ರವನ್ನು ನಮ್ಮ ತಾಯಂದಿರು ನಂಬಿಕೆಯಲ್ಲಿ ಕಟ್ಟಿರುತ್ತಾರೆ. ಇದನ್ನು ಆಟದ ಸಾಮಾನಿನ ರೀತಿ ಬಳಸಬಾರದು. ಚಿತ್ರವನ್ನ ಬೇಕಾದ್ರೆ ಅವರ ಮನೆಯಲ್ಲಿ ಇಡಲಿ, ಸಾರ್ವಜನಿಕರಿಗೆ ಪ್ರದರ್ಶಿಸಬಾರದು ಎಂದರು.

'ನ್ಯೂಡ್ ವಿತ್ ಮಂಗಳಸೂತ್ರ' ಶೀರ್ಷಿಕೆಯಡಿ ಚಿತ್ರಕಲಾ ಪ್ರದರ್ಶನಕ್ಕೆ ಮುಂದಾಗಿದ್ದ ಸುಜಿತ್ ರಾವ್ ಅವರಿಗೆ ಸಾವಿರಕ್ಕೂ ಹೆಚ್ಚು ಬೆದರಿಕೆ ಕರೆಗಳು ಬಂದಿವೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಯಾಗುವಂತಹ ಕಮೆಂಟ್​ಗಳನ್ನು ಪೋಸ್ಟ್ ಮಾಡಲಾಗ್ತಿದೆ. ಇವರೆಲ್ಲರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಸುಜಿತ್ ಕುಮಾರ್ ಈಟಿವಿ ಭಾರತ್​ಗೆ ತಿಳಿಸಿದರು.

ABOUT THE AUTHOR

...view details