ಕರ್ನಾಟಕ

karnataka

ETV Bharat / state

ರೈಲು ನಿಯಂತ್ರಕನ ಸಮಯ ಪ್ರಜ್ಞೆ! ತಪ್ಪಿತು ಅನಾಹುತ - kannada news

ಭಾರಿ ಮಳೆ ಹಿನ್ನೆಲೆಯಲ್ಲಿ ರೈಲು ಕಂಬಿಗಳ ಮೇಲೆ ಮರಗಳು ಉರುಳಿಬಿದ್ದ ಪರಿಣಾಮ ಬೆಂಗಳೂರು-ಶಿವಮೊಗ್ಗ ರೈಲು ಮಾರ್ಗದಲ್ಲಿ ಸಂಚಾರ ವ್ಯತ್ಯಯವಾಗಿದೆ.

ರೈಲು ನಿಯಂತ್ರಕನ ಸಮಯ ಪ್ರಜ್ಞೆ ತಪ್ಪಿದ ದುರಂತ

By

Published : Jun 7, 2019, 9:55 PM IST

ನೆಲಮಂಗಲ :ತಾಲೂಕಿನ ಸುತ್ತಮುತ್ತ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಬೆಂಗಳೂರು-ಶಿವಮೊಗ್ಗ ರೈಲು ಮಾರ್ಗದ ಹಳಿಗಳ ಮೇಲೆ ಮರಗಳು ಉರುಳಿ ಬಿದ್ದಿವೆ. ಈ ವೇಳೆ ರೈಲು ಸಂಚರಿಸಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಾಗಿತ್ತು. ಆದರೆ ರೈಲು ನಿಯಂತ್ರಕನ ಸಮಯ ಪ್ರಜ್ಞೆಯಿಂದ ದುರಂತ ತಪ್ಪಿದೆ.

ತಾಲೂಕಿನ ದೊಡ್ಡಬೆಲೆ ನಿಡುವಂದ ಗ್ರಾಮದ ಬಳಿಯ ರೈಲ್ವೇ ಹಳಿಗಳ ಮೇಲೆ ಮಳೆಗಾಳಿಯಿಂದ ಮರಗಳು ಉರುಳಿ ಬಿದ್ದಿವೆ. ತಕ್ಷಣವೇ ರೈಲು ನಿಯಂತ್ರಕ ಸಮಯ ಪ್ರಜ್ಞೆ ತೋರಿ ಇದೇ ಮಾರ್ಗದಲ್ಲಿ ಸಂಚರಿಸುವ ರೈಲು ನಿಲ್ಲಿಸಿ ಸಂಭವನೀಯ ಅನಾಹುತ ತಪ್ಪಿಸಿದ್ದಾರೆ.

ಬೆಂಗಳೂರು-ಶಿವಮೊಗ್ಗ ರೈಲು ಮಾರ್ಗವಾಗಿದ್ದ ಹಳಿಗಳ ಮೇಲೆ ಬಿದ್ದ ಮರಗಳನ್ನು ತೆರವುಗೊಳಿಸಲು ರೈಲು ಸಂಚಾರ ಸ್ಥಗಿತಗೊಳಿಸಲಾಗಿದ್ದು, ನಾಲ್ಕು ರೈಲುಗಳ ಸಂಚಾರವನ್ನು ತಡೆ ಹಿಡಿಯಲಾಯಿತು, ಇದರಿಂದ ರೈಲುಗಳಲ್ಲಿದ್ದ ಸಾವಿರಾರು ಪ್ರಯಾಣಿಕರು ಪರದಾಟುವಂತಾಯಿತು.

ABOUT THE AUTHOR

...view details