ಬೆಂಗಳೂರು: ನಗರದ ಅರಮನೆ ರಸ್ತೆಯಲ್ಲಿ ಬೈಕ್ ಸವಾರನಿಗೆ ದುಬಾರಿ ಮೌಲ್ಯದ ಲ್ಯಾಂಬೋರ್ಗಿನಿ ಕಾರು ಡಿಕ್ಕಿ ಹೊಡೆದು ಬಳಿಕ ಸೌಜನ್ಯಕ್ಕಾಗಿಯೂ ಗಾಯಾಳುವನ್ನು ಮಾತನಾಡಿಸದೆ ಪ್ರಭಾವಿ ವ್ಯಕ್ತಿಯ ಮಗ ಪರಾರಿಯಾಗಿದ್ದಾನೆ.
ಬೈಕ್ಗೆ ಡಿಕ್ಕಿ ಹೊಡೆದು ಮಾನವೀಯತೆಗೂ ಮಾತನಾಡಿಸದೆ ತೆರಳಿದ ಪ್ರಭಾವಿ ವ್ಯಕ್ತಿಯ ಮಗ - Sadashivanagar Traffic Police Station
ಬೆಂಗಳೂರಿನ ಅರಮನೆ ರಸ್ತೆಯಲ್ಲಿ ಬೈಕ್ ಸವಾರನಿಗೆ ದುಬಾರಿ ಮೌಲ್ಯದ ಲ್ಯಾಂಬೋರ್ಗಿನಿ ಕಾರು ಡಿಕ್ಕಿ ಹೊಡೆದಿದ್ದು ಬಳಿಕ ಸೌಜನ್ಯಕ್ಕಾಗಿಯೂ ಗಾಯಾಳುವನ್ನು ಮಾತನಾಡಿಸದೆ ಪ್ರಭಾವಿ ವ್ಯಕ್ತಿಯ ಮಗ ಪರಾರಿಯಾಗಿದ್ದಾನೆ.
ಬೈಕ್ಗೆ ಡಿಕ್ಕಿ ಹೊಡೆದು ಮಾನವೀಯತೆಗೂ ಮಾತನಾಡಿಸದೆ ತೆರಳಿದ ಪ್ರಭಾವಿ ವ್ಯಕ್ತಿಯ ಮಗ
ಮೇಖ್ರಿ ಸರ್ಕಲ್ ಅಂಡರ್ ಪಾಸ್ ಬಳಿ ಪ್ರಭಾವಿ ವ್ಯಕ್ತಿಯ ಮಗ ಸೇರಿ ಆತನ ಸಹಚರರು ಕಾರುಗಳಲ್ಲಿ ಹೋಗುವಾಗ ಬೈಕ್ ಸವಾರನಿಗೆ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರ ನೆಲಕ್ಕೆ ಬಿದ್ದಿದ್ದಾನೆ. ಈ ವೇಳೆ ಗಾಯಾಳುವನ್ನು ಮಾತನಾಡಿಸದೆ ಪ್ರಭಾವಿ ವ್ಯಕ್ತಿಯ ಪುತ್ರ ಸ್ನೇಹಿತರ ಮತ್ತೊಂದು ಕಾರಿನಲ್ಲಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಗಾಯಾಳು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಸಂಬಂಧ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಸದಾಶಿವನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.