ಕರ್ನಾಟಕ

karnataka

ETV Bharat / state

ಮಹಿಳೆಗೆ ಡಿಕ್ಕಿ ಹೊಡೆದ ಆಟೋ : ಅಪಘಾತದ ಭಯಂಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಬೆಂಗಳೂರಿನಲ್ಲಿ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ,

ನಿನ್ನೆ ಮಧ್ಯಾಹ್ನ ಒಂದು ಗಂಟೆ ವೇಳೆ ಸಂಪಂಗಿರಾಮನಗರ ಬಳಿ ಶಶಿಕಲಾ ನಡೆದುಕೊಂಡು ಹೋಗುವಾಗ ವಿರುದ್ಧ ದಿಕ್ಕಿನಲ್ಲಿ ಆಟೋ ಬಂದಿದೆ. ಈ ವೇಳೆ ತಿರುವು ರಸ್ತೆಯಲ್ಲಿ ಬೈಕ್ ಬಂದಿದ್ದರಿಂದ ಎರಡು ವಾಹನಗಳ ಮಧ್ಯೆ ಡಿಕ್ಕಿ ಸಂಭವಿಸಿದೆ..

Accident captured in CCTV, Accident captured in CCTV at Bangalore, Bangalore crime news, ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ, ಬೆಂಗಳೂರಿನಲ್ಲಿ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ, ಬೆಂಗಳೂರು ಅಪರಾಧ ಸುದ್ದಿ,
ಅಪಘಾತದ ಭಯಕಂರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

By

Published : Jul 12, 2021, 1:55 PM IST

Updated : Jul 13, 2021, 1:54 PM IST

ಬೆಂಗಳೂರು :ನಡೆದುಕೊಂಡು ಹೋಗ್ತಿದ್ದ ವೇಳೆ ಆಟೋವೊಂದು ಗುದ್ದಿದ ಪರಿಣಾಮ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೊದಲು ಆಟೋ ಮತ್ತು ಬೈಕ್ ಮಧ್ಯೆ ಅಪಘಾತವಾಗಿದೆ. ಇದರಿಂದಾಗಿ ನಿಯಂತ್ರಣ ತಪ್ಪಿದ ಆಟೋ ಮಹಿಳೆಗೆ ಗುದ್ದಿ ಬಳಿಕ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.

ಅಪಘಾತದ ಭಯಕಂರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಸಂಪಂಗಿರಾಮನಗರ ನಿವಾಸಿ ಶಶಿಕಲಾ ಎಂಬುವರು ಗಾಯಗೊಂಡಿರುವ ಮಹಿಳೆ ಎಂದು ಗುರುತಿಸಲಾಗಿದೆ. ಸ್ಥಳೀಯರ ನೆರವಿನಿಂದಾಗಿ ಗಾಯಾಳು ಶಶಿಕಲಾ ಅವರನ್ನ ನಿಮ್ಹಾನ್ಸ್​ಗೆ ದಾಖಲಿಸಲಾಗಿದೆ‌.‌ ಈ ಸಂಬಂಧ ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿನ್ನೆ ಮಧ್ಯಾಹ್ನ ಒಂದು ಗಂಟೆ ವೇಳೆ ಸಂಪಂಗಿರಾಮನಗರ ಬಳಿ ಶಶಿಕಲಾ ನಡೆದುಕೊಂಡು ಹೋಗುವಾಗ ವಿರುದ್ಧ ದಿಕ್ಕಿನಲ್ಲಿ ಆಟೋ ಬಂದಿದೆ. ಈ ವೇಳೆ ತಿರುವು ರಸ್ತೆಯಲ್ಲಿ ಬೈಕ್ ಬಂದಿದ್ದರಿಂದ ಎರಡು ವಾಹನಗಳ ಮಧ್ಯೆ ಡಿಕ್ಕಿ ಸಂಭವಿಸಿದೆ.

ಅಪಘಾತದ ರಭಸಕ್ಕೆ ಆಟೋ ಪಲ್ಟಿಯಾಗಿ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಗೆ ಗುದ್ದಿದೆ. ಪರಿಣಾಮ ಮಹಿಳೆ ತಲೆಗೆ ಬಲವಾಗಿ ಪೆಟ್ಟಾಗಿದ್ದು, ಕೂಡಲೇ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಅಪಘಾತದ ದೃಶ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇಲೆ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Last Updated : Jul 13, 2021, 1:54 PM IST

ABOUT THE AUTHOR

...view details