ಬೆಂಗಳೂರು: ಕಳೆದ ಒಂದು ವರ್ಷದಿಂದ ಮಹಾಮಾರಿಯಂತೆ ಜಗತ್ತನ್ನೇ ಬೆಚ್ಚಿಬೀಳಿಸಿದ್ದ ಕೊರೊನಾ ಖಾಯಿಲೆಗೆ ಕೊನೆಗೂ ಬ್ರೇಕ್ ಬೀಳುವ ಸಮಯ ಬಂದಿದೆ.
ಕೊರೊನಾ ಲಸಿಕೆ ರೆಡಿ ಹಿನ್ನೆಲೆ: ಲಸಿಕೆ ಸ್ಟೋರೇಜ್‌ಗೆ ಬಿಬಿಎಂಪಿ ಸಿದ್ಧತೆ - Corona Vaccine Storage in BBMP
ಕೊರೊನಾ ರೋಗಕ್ಕೆ ಲಸಿಕೆ ಶೀಘ್ರದಲ್ಲೇ ಬರಲಿದ್ದು, ಇದರ ಬೆನ್ನಲ್ಲೇ ಬೆಂಗಳೂರಿನ ಟೌನ್ಹಾಲ್ನಲ್ಲಿರುವ ದಾಸಪ್ಪ ಹಾಸ್ಪಿಟಲ್ನಲ್ಲಿ ಕೊರೊನಾ ಲಸಿಕೆ ಸ್ಟೋರೇಜ್ ರೆಡಿಯಾಗುತ್ತಿದೆ. ಕೋವಿಡ್ ಲಸಿಕೆ ಸ್ಟೋರೇಜ್ ಸಂಗ್ರಹಕ್ಕೆ ಬಿಬಿಎಂಪಿಯಲ್ಲಿ ಸಕಲ ಸಿದ್ಧತೆ ನಡೆದಿದೆ.
ಇನ್ನೇನು ಕೊರೊನಾ ರೋಗಕ್ಕೆ ಲಸಿಕೆ ಶೀಘ್ರದಲ್ಲೇ ಬರಲಿದ್ದು, ಇದರ ಬೆನ್ನಲ್ಲೇ ಬೆಂಗಳೂರಿನ ಟೌನ್ಹಾಲ್ನಲ್ಲಿರುವ ದಾಸಪ್ಪ ಹಾಸ್ಪಿಟಲ್ನಲ್ಲಿ ಕೊರೊನಾ ಲಸಿಕೆ ಸ್ಟೋರೇಜ್ ರೆಡಿಯಾಗುತ್ತಿದೆ. ಕೋವಿಡ್ ಲಸಿಕೆ ಸ್ಟೋರೇಜ್ ಸಂಗ್ರಹಕ್ಕೆ ಬಿಬಿಎಂಪಿಯಲ್ಲಿ ಸಕಲ ಸಿದ್ಧತೆ ನಡೆದಿದೆ.
ಇನ್ನು ಲಸಿಕೆ ಸಂಗ್ರಹಕ್ಕೆ ಸ್ಟೋರೇಜ್ ಕಡೆ ಗಮನ ಹರಿಸಿರುವ ಪಾಲಿಕೆ ಈಗಾಗಲೇ ಬೆಂಗಳೂರಿನಲ್ಲಿ ಮೊದಲ ಹಂತದಲ್ಲೇ 94 ಸಾವಿರ ಸೋಂಕಿತರಿಗೆ ಈ ಲಸಿಕೆ ಸಿಗಲಿದೆ. ಇನ್ನು ಬಿಬಿಎಂಪಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ 8 ಸಾವಿರ, ಡೆಂಟಲ್ ಮೆಡಿಕಲ್ ಪ್ಯಾರಾ ಮೆಡಿಕಲ್ ಸ್ಟಾಪ್ನ 74 ಮಂದಿಗೆ, 4,350 ಖಾಸಗಿ ಆಸ್ಪತ್ರೆ ಸಿಬ್ಬಂದಿ ಹಾಗೂ 1800 ಅಂಗನವಾಡಿ ಸಿಬ್ಬಂದಿಗೆ ಮೊದಲ ಹಂತದಲ್ಲಿ ಲಸಿಕೆ ನೀಡೋಕೆ ಪಾಲಿಕೆ ತಯಾರಿ ನಡೆಸಿದೆ.