ಬೆಂಗಳೂರು: ವಿಧಾನಸಭೆಯಲ್ಲಿ ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ವಿಧೇಯಕ ಹಾಗೂ ಕರ್ನಾಟಕ ಪೌರಸಭೆಗಳ (ತಿದ್ದುಪಡಿ) ವಿಧೇಯಕ ಅಂಗೀಕಾರಗೊಂಡಿತು.
ಲೇವಾದೇವಿ ವಿಧೇಯಕದಲ್ಲಿ ಕಾನೂನು ಪ್ರಕಾರ ಸಾಲಗಾರನಿಂದ ಸಾಲ ವಸೂಲಿ ಮಾಡಬೇಕು. ಸಾಲಗಾರನಿಗೆ ಕಿರುಕುಳ, ಹಿಂಸಾಚಾರ, ಬೆದರಿಕೆ ಮಾಡುವಂತಿಲ್ಲ. ಒಂದು ವೇಳೆ ಈ ಕೃತ್ಯವನ್ನು ಎಸಗಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಮೊದಲ ಅಪರಾಧಕ್ಕೆ 6 ತಿಂಗಳವರೆಗೆ ವಿಸ್ತರಿಸಬಹುದಾದ ಜೈಲು ಅಥವಾ 5 ಸಾವಿರ ರೂ.ವರೆಗೆ ವಿಧಿಸಬಹುದಾದ ದಂಡದ ಬದಲಿಗೆ ಒಂದು ವರ್ಷದವರೆಗೆ ಶಿಕ್ಷೆ ಅಥವಾ 50 ಸಾವಿರ ರೂ.ವರೆಗೆ ದಂಡ ವಿಧಿಸುವುದಕ್ಕೆ ತಿದ್ದುಪಡಿ ತರಲಾಗಿದೆ.
ಇನ್ನು 2ನೇ ಬಾರಿಯ ಅಪರಾಧಕ್ಕೆ 2 ವರ್ಷವರೆಗೆ ಸೆರೆಮನೆವಾಸ ಹಾಗೂ 1 ಲಕ್ಷ ರೂ. ವರೆಗೆ ದಂಡ ವಿಸ್ತರಣೆ ಮಾಡಲಾಗಿದೆ.