ಬೆಂಗಳೂರು:20 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಮಹಿಳಾ ಟ್ರಾಫಿಕ್ ಇನ್‌ಸ್ಪೆಕ್ಟರ್ ಹಂಸವೇಣಿ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ. ಆರೋಪಿ ಪೊಲೀಸ್ ಅಧಿಕಾರಿಯನ್ನು ವಶಕ್ಕೆ ಪಡೆದಿರುವ ಎಸಿಬಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದೆ.
ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಮಹಿಳಾ ಟ್ರಾಫಿಕ್ ಇನ್‌ಸ್ಪೆಕ್ಟರ್ - Hamsaveni is the Inspector of Chikkajala Traffic Police Station
ಚಿಕ್ಕಜಾಲ ಟ್ರಾಫಿಕ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಹಂಸವೇಣಿ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೇಲ್ ಗ್ಯಾಸ್ ಕಂಪನಿ ಅಧಿಕಾರಿಗಳು ನೈಸರ್ಗಿಕ ಅನಿಲ ಪೈಪ್ ಅಳವಡಿಕೆಗೆ ರಸ್ತೆ ಬದಿ ನೆಲ ಅಗೆಯಲು ಮುಂದಾಗಿದ್ದರು. ಈ ಕುರಿತಾಗಿ ಪೂರ್ವಾನುಮತಿ ಪಡೆಯಲು ಸಂಚಾರಿ ಪೊಲೀಸರಿಗೆ ಪತ್ರ ಬರೆದಿದ್ದರು. ಆದರೆ ಇನ್‌ಸ್ಪೆಕ್ಟರ್ ಅನುಮತಿ ನೀಡಲು 20 ಸಾವಿರ ರೂ ಲಂಚ ಕೊಡುವಂತೆ ಬೇಡಿಕೆಯಿಟ್ಟಿದ್ದಾರೆ. ಈ ಬಗ್ಗೆ ಎಸಿಬಿಗೆ ಗೇಲ್ ಕಂಪನಿ ಅಧಿಕಾರಿಗಳು ದೂರು ನೀಡಿದ್ದಾರೆ. ಇಂದು ಅಕ್ರಮವಾಗಿ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ಪೊಲೀಸ್ ಅಧಿಕಾರಿಯನ್ನು ಹಿಡಿದಿದ್ದಾರೆ. ಬೆಂಗಳೂರು ನಗರ ಎಸಿಬಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇದನ್ನೂ ಓದಿ:ಕುಡಿತದ ಚಟಕ್ಕಾಗಿ ₹70 ಸಾವಿರ ಪಡೆದು ಹೆಣ್ಣು ಮಗು ಮಾರಾಟ ಮಾಡಿದ ತಂದೆ!
TAGGED:
ACB trap traffic inspecter