ಬೆಂಗಳೂರು:ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಲಂಚ ಪಡೆಯುವಾಗ ಡೆಪ್ಯೂಟಿ ತಹಶೀಲ್ದಾರ್ ಮಹೇಶ್ ಮತ್ತು ಡಿಸಿ ಸಹಾಯಕ ಚಂದ್ರಶೇಖರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. 5 ಲಕ್ಷ ಲಂಚ ಪಡೆಯುವಾಗ ಎಸಿಬಿ ಖೆಡ್ಡಾಗೆ ಬಿದ್ದಿದ್ದು, ಅಧಿಕಾರಿಗಳು ಸದ್ಯ ಚಂದ್ರಶೇಖರ್ ಎಂಬಾತನನ್ನು ವಿಚಾರಣೆ ನಡೆಸುತ್ತಿದ್ದಾರೆ.
ಮಹೇಶ್ ಅವರ ಬಳಿ ಹಣ ಇದ್ದಾಗ ಎಸಿಬಿ ಡಿವೈಎಸ್ಪಿ ರವಿಶಂಕರ್ ನೇತೃತ್ವದ ತಂಡ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ಆಜಂ ಪಾಷಾ ಎಂಬಾತನಿಗೆ ಜಮೀನಿನ ವ್ಯಾಜ್ಯ ಎಸಿ ಕೋರ್ಟ್ನಲ್ಲಿ ತೀರ್ಮಾನ ಅಗಿ ಡಿಸಿ ಕೋರ್ಟ್ಗೆ ಹೋಗಿತ್ತು. ಈ ಫೈಲ್ ಇತ್ಯರ್ಥಗೊಳಿಸಲು 15 ಲಕ್ಷ ಕೇಳಿ 5 ಲಕ್ಷಕ್ಕೆ ಒಪ್ಪಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ದೂರುದಾರ ಎಸಿಬಿಗೆ ದೂರು ನೀಡಿದ್ದರು. 5 ಲಕ್ಷ ಹಣ ಪಡೆದುಕೊಳ್ಳುವಾಗ ಎಸಿಬಿ ಮಾಡಿದ ಟ್ರ್ಯಾಪ್ನಲ್ಲಿ ಭ್ರಷ್ಟರು ಲಾಕ್ ಆಗಿದ್ದಾರೆ ಎನ್ನುವ ಮಾಹಿತಿ ದೊರೆತಿದೆ.