ಕರ್ನಾಟಕ

karnataka

ETV Bharat / state

ಇಂದು ಕೆಎಎಸ್ ಅಧಿಕಾರಿ ಸುಧಾ ಬ್ಯಾಂಕ್​ ಲಾಕರ್​ ಪರಿಶೀಲನೆ! - ACB attack on KAS Officer Sudha

ಕೆಎಎಸ್ ಅಧಿಕಾರಿ ಸುಧಾ ಹಾಗೂ ಆಪ್ತರ ಮನೆಯಲ್ಲಿ ಮೂರನೇ ದಿನವೂ ಎಸಿಬಿ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದು, ಇಂದು ಸುಧಾ ಅವರಿಗೆ ಸೇರಿರುವ 3ಕ್ಕೂ ಅಧಿಕ ಬ್ಯಾಂಕ್ ಲಾಕರ್​ಗಳ ಪರಿಶೀಲನೆ ಮಾಡಲು ಎಸಿಬಿ ಮುಂದಾಗಿದೆಯಂತೆ.

ಕೆಎಎಸ್ ಅಧಿಕಾರಿ ಸುಧಾ ಬಾಂಕ್​ ಲಾಕರ್​ ಪರಿಶೀಲನೆ ಮಾಡಲಿರುವ ಎಸಿಬಿ
ಕೆಎಎಸ್ ಅಧಿಕಾರಿ ಸುಧಾ

By

Published : Nov 9, 2020, 9:55 AM IST

ಬೆಂಗಳೂರು: ಕೆಎಎಸ್ ಅಧಿಕಾರಿ ಸುಧಾ ಹಾಗೂ ಅವರ ಆಪ್ತರ ಮನೆಯಲ್ಲಿ ಮೂರನೇ ದಿನವೂ ಎಸಿಬಿ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದಾರೆ. ನಿನ್ನೆ ಭಾನುವಾರ ಬ್ಯಾಂಕ್ ರಜೆ ಹಿನ್ನೆಲೆ ಇಂದು ಬ್ಯಾಂಕ್ ಲಾಕರ್​ಗಳ ಪರಿಶೀಲನೆ ಮಾಡಲು ಎಸಿಬಿ ಮುಂದಾಗಿದೆಯಂತೆ.

ಸುಧಾ ಅವರಿಗೆ ಸೇರಿರುವ 3ಕ್ಕೂ ಅಧಿಕ ಲಾಕರ್​ಗಳು, ಹಲವಾರು ಪಾಸ್ ಬುಕ್ ಡಿಟೇಲ್ಸ್, ಕೆಲ ಬ್ಯಾಂಕ್​ನ ಚೆಕ್​ಗಳ ಪರಿಶೀಲನೆಗೆ ಎಸಿಬಿ ಸಿದ್ಧತೆ ಮಾಡಿಕೊಂಡಿದ್ದು, ಸದ್ಯ ಪರಿಶೀಲನೆಗೆ ತೊಡಗಿದಾಗ ಕೋಟಿ ಕೋಟಿ ಹಣ ಇರುವುದು ಬೆಳಕಿಗೆ ಬಂದಿದೆ ಎಂದು ಹೇಳಲಾಗ್ತಿದೆ.

ಅಧಿಕೃತವಾಗಿ ಎಷ್ಟು ಅಕ್ರಮ ಹಣ, ಆಸ್ತಿ ಹೊಂದಿದ್ದಾರೆ ಎಂಬ ಕುರಿತು ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಆಪ್ತರಾದ ರೇಣುಕಾ ಮತ್ತು ರೇಣುಕಾ ಪತಿ ಚಂದ್ರಶೇಖರ್​ಗೆ ಸೇರಿದ ಆಸ್ತಿ ಬ್ಯಾಂಕ್​ಗಳ ಪರಿಶೀಲನೆಯನ್ನ ಇಂದು ನಡೆಸಲಿದ್ದಾರಂತೆ.

12-13 ವರ್ಷದ ಸರ್ಕಾರಿ ಸೇವಾ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ಆಸ್ತಿಯನ್ನ ಸುಧಾ ಸಂಪಾದಿಸಿದ್ದಾರೆ ಎನ್ನಲಾಗ್ತಿದೆ. ಕಡಿಮೆ ಅವಧಿಯಲ್ಲಿ ಇಷ್ಟು ಪ್ರಮಾಣದ ಆಸ್ತಿ ಗಳಿಕೆ ಹೇಗೆ ಸಾಧ್ಯ. ರೇಣುಕಾ, ಚಂದ್ರಶೇಖರ್ ಮಾತ್ರವಲ್ಲದೇ ಮತ್ತೆ ಯಾರೆಲ್ಲರ ಹೆಸರಿನಲ್ಲಿ ಆಸ್ತಿ ಹೊಂದಿದ್ದಾರೆ ಎಂಬ ಬಗ್ಗೆ ಮಾಹಿತಿಯನ್ನು ಎಸಿಬಿ ಅಧಿಕಾರಿಗಳು ಕಲೆಹಾಕುತ್ತಿದ್ದಾರೆ.

For All Latest Updates

ABOUT THE AUTHOR

...view details