ಬೆಂಗಳೂರು: ಟಿಡಿಆರ್ ಅವ್ಯವಹಾರ ಪ್ರಕರಣ ಸಂಬಂಧ ಇಬ್ಬರು ಮಹಿಳಾ ಕೆಎಎಸ್ ಅಧಿಕಾರಿಗಳ ವಿರುದ್ದ ತನಿಖೆ ನಡೆಸಲು ಅನುಮತಿ ಕೋರಿ ಎಸಿಬಿ, ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದೆ.
ಟಿಡಿಆರ್ ಅವ್ಯವಹಾರ ಪ್ರಕರಣ: ಇಬ್ಬರು ಕೆಎಎಸ್ ಅಧಿಕಾರಿಗಳಿಗೆ ಎಸಿಬಿಯಿಂದ ಸಂಕಷ್ಟ - ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದ ಎಸಿಬಿ
ಅಭಿವೃದ್ಧಿ ಹಕ್ಕು ವರ್ಗಾವಣೆ ಪತ್ರ ನೀಡುವಾಗ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದ್ದು, ಬಿಡಿಎ ಉಪ ಕಾರ್ಯದರ್ಶಿಗಳ ವಿರುದ್ಧ ತನಿಖೆಗೆ ಅನುಮತಿ ಕೋರಿ ಎಸಿಬಿ, ಸರ್ಕಾರಕ್ಕೆ ಪತ್ರ ಬರೆದಿದೆ.
![ಟಿಡಿಆರ್ ಅವ್ಯವಹಾರ ಪ್ರಕರಣ: ಇಬ್ಬರು ಕೆಎಎಸ್ ಅಧಿಕಾರಿಗಳಿಗೆ ಎಸಿಬಿಯಿಂದ ಸಂಕಷ್ಟ acb seeks government permission to investigation on KAS officers](https://etvbharatimages.akamaized.net/etvbharat/prod-images/768-512-9223887-thumbnail-3x2-brm.jpg)
ಬಿಡಿಎ ಉಪ ಕಾರ್ಯದರ್ಶಿಗಳಾದ ಮಂಗಳಾ ಮತ್ತು ಲೀಲಾವತಿ, ಅಭಿವೃದ್ಧಿ ಹಕ್ಕು ವರ್ಗಾವಣೆ ಪತ್ರ ನೀಡುವಾಗ ಕಾನೂನು ಪಾಲಿಸಿಲ್ಲ, ಹೀಗಾಗಿ ಅಧಿಕಾರ ದುರುಪಯೋಗ ಮಾಡಿಕೊಂಡು ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಎಸಿಬಿ ಪ್ರತ್ಯೇಕ ತನಿಖೆ ನಡೆಸುತ್ತಿದ್ದು, ಹಲವರ ಬಂಧನವಾಗಿದೆ. ಹಲವರು ಈ ಇಬ್ಬರು ಅಧಿಕಾರಿಗಳ ವಿರುದ್ದ ಹೇಳಿಕೆ ನೀಡಿದ್ದಾರೆ ಎನ್ನಲಾಗಿದ್ದು, ನಿಖೆ ವೇಳೆ ಅಧಿಕಾರಿಗಳು ಅಕ್ರಮ ಎಸಗಿರುವ ಬಗ್ಗೆ ಸಾಕ್ಷ್ಯಧಾರ ಲಭ್ಯವಾಗಿದೆ ಎಂದು ಉಲ್ಲೇಖ ಮಾಡಿದ್ದಾರೆ.
ಒಂದು ವೇಳೆ ಸರ್ಕಾರ ಅನುಮತಿ ಕೊಟ್ಟರೆ ಇಬ್ಬರು ಅಧಿಕಾರಿಗಳಿಗೆ ಎಸಿಬಿಯಿಂದ ಸಂಕಷ್ಟ ಎದುರಾಗಲಿದೆ. ಅಭಿವೃದ್ಧಿ ಹಕ್ಕು ವರ್ಗಾವಣೆ ಪತ್ರ ಸಂಬಂಧ ಈಗಾಗಲೇ ಹಲವಾರು ಅಧಿಕಾರಿಗಳು ಭಾಗಿಯಾಗಿರುವ ಕಾರಣ ಕೆಲವರನ್ನ ಅಧಿಕಾರದಿಂದಲೇ ವಜಾ ಮಾಡಲಾಗಿತ್ತು.