ಕರ್ನಾಟಕ

karnataka

ETV Bharat / state

ಮೂವರು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ: ರಾಜ್ಯಾದ್ಯಂತ 16 ಕಡೆ ಎಸಿಬಿ ದಾಳಿ - ACB raid

ರಾಜ್ಯದ ಮೂವರು ವಿವಿಧ ಸರ್ಕಾರಿ ನೌಕರರ ಮನೆ ಮೇಲೆ ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಎಸಿಬಿ

By

Published : Oct 3, 2019, 1:08 PM IST

ಬೆಂಗಳೂರು :ರಾಜ್ಯದ ಮೂವರು ವಿವಿಧ ಸರ್ಕಾರಿ ನೌಕರರು ಹಲವಾರು ಆಸ್ತಿ ಪಾಸ್ತಿಗಳನ್ನ ಹೊಂದಿದ್ದು, ಇಂದು ರಾಜ್ಯದ 16 ಕಡೆ ಏಕಕಾಲಕ್ಕೆ ಎಸಿಬಿ ದಾಳಿ ನಡೆಸಿ ಶೋಧ ಮುಂದುವರೆಸಿದೆ.

ಪತ್ರಿಕಾ ಪ್ರಕಟಣೆ

ಎಸ್. ಮೂರ್ತಿ ಹಿಂದಿನ ವಿಧಾನಸಭಾ ಸಚಿವಾಲಯ ಕಾರ್ಯದರ್ಶಿ ಸದ್ಯ ಅಮಾನತ್ತಿನಲ್ಲಿದ್ದು, ಇವರಿಗೆ ಸೇರಿದ ಸದಾಶಿವನಗರ ವಾಸದ ಮನೆ ,ಜಾಲಹಳ್ಳಿ ಹಳ್ಳಿ ಕ್ರಾಸ್ ಮನೆ, ಎಚ್​ಎಂಟಿ ಕಾಲೊನಿ ಮನೆ ಹಾಗೂ ಆರ್ ಟಿ ನಗರ ಬಳಿ ಇರುವ ಓಂ ಶಕ್ತಿ ಎರಡು ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಲಾಗಿದೆ

ಕೆ ಹನಮಂತಪ್ಪ ಪಂಚಾಯತ್ ರಾಜ್ ಇಂಜಿನಿಯರ್ ಹೂವಿನ ಹಡಗಲಿ ಇವರ ಹೊಸಪೇಟೆ ನಗರದ ವಾಸದ ಮನೆ ಹಾಗೂ ಹೂವಿನ ಹಡಗಲಿ ‍ಎಸ್ .ಕೆ. ಆರ್ ಸ್ಕೂಲ್ , ಕೋ ಆಪರೇಟಿವ್ ಬ್ಯಾಂಕ್ ,ಮನೆ ಮೇಲೆ ದಾಳಿ ಹೊಸಪೇಟೆ ನಿವಾಸ, ಸ್ವ ಕಚೇರಿ, ಬ್ಯಾಂಕ್ ಲಾಕರ್, ಶಾಲೆಗಳ ಮೇಲೆ ರೇಡ್​​ ಮಾಡಲಾಗಿದೆ.

ವಿಜಯ್ ರೆಡ್ಡಿ, ಪಂಚಾಯತ್ ರಾಜ್ ಇಂಜಿನಿಯರ್ ಹುಮನಾಬಾದ್​ ಇವರ ನಿವಾಸ ,ಸ್ವ ಕಚೇರಿ ಹಾಗೂ ಬ್ಯಾಂಕ್ ಅಕೌಂಟ್ ಡಿಟೇಲ್ಸ್ ಪಡೆದು ತಪಾಸಣೆ ನಡೆಸಲಾಗುತ್ತಿದೆ.

ಸದ್ಯ ಇನ್ನು ದಾಳಿ ‌ಮುಂದುವರೆದಿದ್ದು ಎಸಿಬಿ ಅಧಿಕಾರಿಗಳು ಶೋಧ ಮುಂದುವರಿಸಿದ್ದಾರೆ.

ABOUT THE AUTHOR

...view details