ಕರ್ನಾಟಕ

karnataka

ETV Bharat / state

ACB raids on BDA.. ಬಿಡಿಎ ಕಚೇರಿಗಳ ಮೇಲೆ ಮುಂದುವರೆದ ಎಸಿಬಿ ದಾಳಿ - ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಚೇರಿ ಮೇಲೆ ಎಸಿಬಿ ದಾಳಿ

ಎಸಿಬಿ ಅಧಿಕಾರಿಗಳು ಮತ್ತಷ್ಟು ದಾಖಲಾತಿಗಾಗಿ ಇಂದು ಸಹ ಬಿಡಿಎ ಕಚೇರಿ ಹಾಗೂ ಉಪ ಕಚೇರಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ಮುಂದುವರಿಸಿದ್ದಾರೆ.

acb-raids-on-bdo-office-at-bengaluru
ಬಿಡಿಎ ಕಚೇರಿಗಳ ಮೇಲೆ ಮುಂದುವರೆದ ಎಸಿಬಿ ದಾಳಿ

By

Published : Nov 25, 2021, 7:48 PM IST

ಬೆಂಗಳೂರು: ಬುಧವಾರ ರಾಜ್ಯಾದ್ಯಂತ 15 ಮಂದಿ ಭ್ರಷ್ಟ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದ ಎಸಿಬಿ ಅಧಿಕಾರಿಗಳು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಚೇರಿ ಹಾಗೂ ಉಪ ಕಚೇರಿಗಳ ಮೇಲೆ ಇಂದು ಸಹ ದಾಳಿ ಮುಂದುವರೆಸಿದ್ದಾರೆ. ದಾಖಲಾತಿಗಳ ಪರಿಶೀಲನೆ ನಡೆಯುತ್ತಿದ್ದು, ಅಕ್ರಮ ವ್ಯವಹಾರಗಳ ಜಾಡನ್ನು ಭೇದಿಸುತ್ತಿದ್ದಾರೆ.

ಬಿಡಿಎ ಕಚೇರಿಗಳ ಮೇಲೆ ಎಸಿಬಿ ದಾಳಿ

ಕೆಲ ದಿನಗಳ ಹಿಂದೆ ಕೇಂದ್ರ ಕಚೇರಿ ಹಾಗೂ ಉಪ ಕಚೇರಿಗಳ ಮೇಲೆ ದಾಳಿ ಮಾಡಿ ಮಹತ್ವದ ದಾಖಲಾತಿಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಈ ವೇಳೆ ಹಲವು ಅಕ್ರಮ‌ ಎಸಗಿರುವುದು ಪತ್ತೆಯಾಗಿತ್ತು. ಒಂದೇ ನಿವೇಶನವನ್ನ ಮೂರ್ನಾಲ್ಕು ಜನಕ್ಕೆ‌ ಮಂಜೂರು ಮಾಡಿ ಮೂಲ ಮಾಲೀಕರಿಗೆ ನಿವೇಶನ ಹಂಚದೆ ವಂಚನೆ‌, ಕಾರ್ನರ್ ಸೈಟ್ ಹಂಚಿಕೆಯಲ್ಲಿ ಅಕ್ರಮ ಹೀಗೆ ಹಲವು ರೀತಿಯ ಹಗರಣ ನಡೆದಿರುವುದು ಬೆಳಕಿಗೆ ಬಂದಿತ್ತು.

ದಾಖಲಾತಿ ಮುಂದಿಟ್ಟು ಅಧಿಕಾರಿಗಳನ್ನ, ಸಿಬ್ಬಂದಿಯನ್ನ ‌ವಿಚಾರಣೆ ನಡೆಸಿದ ಎಸಿಬಿ ಅಧಿಕಾರಿಗಳು, ಮತ್ತಷ್ಟು ದಾಖಲಾತಿಗಾಗಿ ಇಂದು ಬಿಡಿಎ ಕಚೇರಿ ಹಾಗೂ ಉಪ ಕಚೇರಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ಮುಂದುವರಿಸಿದ್ದಾರೆ.

ಓದಿ:CD Case: ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ಡಿಸಿಪಿ ಅನುಚೇತ್​ಗೆ ತಾತ್ಕಾಲಿಕ ರಿಲೀಫ್

ABOUT THE AUTHOR

...view details