ಬೆಂಗಳೂರು:ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಆರೋಪದಡಿ ವಿವಿಧ ಸರ್ಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 15 ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 68 ಸ್ಥಳಗಳಲ್ಲಿ 503 ಅಧಿಕಾರಿಗಳು ಹಾಗೂ ಸಿಬ್ಬಂದಿಯ 68 ತಂಡಗಳು ದಾಳಿ ಮಾಡಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ ಹಾಗೂ ಆಸ್ತಿ ಪತ್ರ ಸೇರಿದಂತೆ ಇನ್ನಿತರ ಮಹತ್ವದ ದಾಖಲಾತಿ ಜಪ್ತಿ ಮಾಡಿ ದಾಳಿ ಮುಕ್ತಾಯಗೊಳಿಸಿದ್ದಾರೆ.
15 ಮಂದಿ ಸರ್ಕಾರಿ ಅಧಿಕಾರಿಗಳ ಮೇಲೆ ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಕೇಳಿ ಬಂದ ಹಿನ್ನೆಲೆ ಬುಧವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿ ನೌಕರರಿಗೆ ಎಸಿಬಿ ಶಾಕ್ ನೀಡಿತ್ತು. ಹಾಗಾದರೆ ದಾಳಿಯಲ್ಲಿ ಸಿಕ್ಕಿರುವ ಸ್ಥಿರಾಸ್ತಿ ಹಾಗೂ ಚರಾಸ್ತಿ ಬಗ್ಗೆ ಎಸಿಬಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮಾಹಿತಿ ಈ ಕೆಳಗಿನಂತಿದೆ..
1) ಎಂ.ಬಿರಾದರ್, ಕಿರಿಯ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಜೇವರ್ಗಿ:
ಕಲಬುರಗಿಯಲ್ಲಿ 2 ವಾಸದ ಮನೆಗಳು, ಬೆಂಗಳೂರು ನಗರದಲ್ಲಿ 1 ನಿವೇಶನ, 3 ವಿವಿಧ ಕಂಪನಿಯ ಕಾರುಗಳು, 1 ದ್ವಿಚಕ್ರ ವಾಹನ, 1 ಸ್ಕೂಲ್ ಬಸ್, 2 ಟ್ರ್ಯಾಕ್ಟರ್‌ಗಳು, 54,50 ಲಕ್ಷ ರೂ. ನಗದು ಹಣ, ಸುಮಾರು 100 ಗ್ರಾಂ ಚಿನ್ನಾಭರಣ, 36 ಎಕರೆ ಕೃಷಿ ಜಮೀನು, 15 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ, ತನಿಖೆ ಮುಂದುವರೆದಿದೆ.
2. ಟಿ.ಎಸ್ ರುದ್ರೇಶಪ್ಪ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಗದಗ ಜಿಲ್ಲೆ, ಗದಗ:
ಶಿವಮೊಗ್ಗ ನಗರದಲ್ಲಿ 2 ವಾಸದ ಮನೆಗಳು, ವಿವಿಧ ಕಡೆಗಳಲ್ಲಿ 4 ನಿವೇಶನಗಳು, 9 ಕೆ.ಜಿ 400 ಗ್ರಾಂ ಚಿನ್ನದ ಬಿಸ್ಕೆಟ್ ಹಾಗೂ ಆಭರಣಗಳು, 3 ಕೆ.ಜಿ ಬೆಳ್ಳಿ ವಸ್ತುಗಳು, 2 ವಿವಿಧ ಕಂಪನಿಯ ಕಾರುಗಳು, 3 ದ್ವಿಚಕ್ರ ವಾಹನ, 2 ಎಕರೆ ಕೃಷಿ ಜಮೀನು, 15.94 ಲಕ್ಷ ನಗದು ಹಾಗೂ 20 ಲಕ್ಷ ರೂ.ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
3. ಕೆ. ಶ್ರೀನಿವಾಸ್, ಕಾರ್ಯಪಾಲಕ ಅಭಿಯಂತರರು, ಹೆಚ್‌ಎಲ್‌ಐಸಿ-3, ಕೆ.ಆರ್. ಪೇಟೆ, ಮಂಡ್ಯ
ಮೈಸೂರು ನಗರದಲ್ಲಿ 1 ವಾಸದ ಮನೆ, ಮೈಸೂರು ನಗರದಲ್ಲಿ 1 ಫ್ಲ್ಯಾಟ್, 2 ನಿವೇಶನ, ಮೈಸೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ 4 ಎಕರೆ 34 ಗುಂಟೆ ಕೃಷಿ ಜಮೀನು, ನಂಜನಗೂಡಿನಲ್ಲಿ 1 ಫಾರ್ಮ್ ಹೌಸ್, 2 ವಿವಿಧ ಕಂಪೆನಿಯ ಕಾರುಗಳು, 2 ದ್ವಿಚಕ್ರ ವಾಹನ, 1 ಕೆಜಿ ಚಿನ್ನ, 8 ಕೆ.ಜಿ 840 ಗ್ರಾಂ ಬೆಳ್ಳಿ ಸಾಮಾನುಗಳು, ನಗದು ಹಣ 9.85 ಲಕ್ಷ ನಗದು, ವಿವಿಧ ಬ್ಯಾಂಕ್‌ಗಳಲ್ಲಿ 22 ಲಕ್ಷ ರೂಗಳ ಠೇವಣಿ ಹಾಗೂ 8 ಲಕ್ಷ ರೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
4) ಕೆ.ಎಸ್. ಲಿಂಗೇಗೌಡ, ಕಾರ್ಯಪಾಲಕ ಅಭಿಯಂತರರು, ಸ್ಮಾರ್ಟ್ ಸಿಟಿ, ಮಂಗಳೂರು:
ಮಂಗಳೂರು ನಗರದಲ್ಲಿ ವಾಸದ ಮನೆ, ಚಾಮರಾಜನಗರ ಮತ್ತು ಮಂಗಳೂರಿನಲ್ಲಿ 3 ನಿವೇಶನ, 2 ವಿವಿಧ ಕಂಪನಿಯ ಕಾರುಗಳು, 1 ದ್ವಿ ಚಕ್ರ ವಾಹನ, 1 ಕೆ.ಜಿ.ಬೆಳ್ಳಿ ಆಭರಣ ಹಾಗೂ 10 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ದೊರೆತಿವೆ.
5. ಎಲ್. ಸಿ. ನಾಗರಾಜ್, ಆಡಳಿತಾಧಿಕಾರಿ, ಸಕಾಲ ಮಿಷನ್, 5ನೇ ಮಹಡಿ, ಬಹುಮಹಡಿಗಳ ಕಟ್ಟಡ, ಬೆಂಗಳೂರು:
ಬೆಂಗಳೂರು ನಗರದಲ್ಲಿ 1 ವಾಸದ ಮನೆ ಹಾಗೂ ನಿವೇಶನ, ನೆಲಮಂಗಲದ 1 ವಾಸದ ಮನೆ ನೆಲಮಂಗಲ ತಾಲೂಕಿನಲ್ಲಿ ಸುಮಾರು 11 ಎಕರೆ 25 ಗುಂಟೆ ಜಮೀನು, ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶದ ಒಂದು ಕಟ್ಟಡ, 3 ವಿವಿಧ ಕಂಪನಿಯ ಕಾರುಗಳು, 1,76 ಕೆ.ಜಿ.ಗ್ರಾಂ ಚಿನ್ನಾಭರಣ, 7 ಕೆಜಿ 284 ಗ್ರಾಂ ಬೆಳ್ಳಿ, ನಗದು ಹಣ 43 ಲಕ್ಷ ನಗದು ಹಾಗೂ ಸುಮಾರು 14 ಲಕ್ಷ ರೂ.ಗಳ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ.
6. ಜಿ.ವಿ.ಗಿರಿ, ಗ್ರೂಪ್-ಡಿ ನೌಕರ ಬಿಬಿಎಂಪಿ ಬಾಲಕ ಮತ್ತು ಬಾಲಕಿಯರ ಹೈಸ್ಕೂಲ್, ಮಾರಪ್ಪನಪಾಳ್ಯ, ಯಶವಂತಪುರ
ಬೆಂಗಳೂರು ನಗರದಲ್ಲಿ 6 ವಾಸದ ಮನೆಗಳು, 4 ವಿವಿಧ ಕಂಪನಿಯ ಕಾರುಗಳು, 4 ದ್ವಿಚಕ್ರ ವಾಹನಗಳು, 8 ಕೆಜಿ ಬೆಳ್ಳಿ ಸಾಮಾನು, 1.18 ಲಕ್ಷ ನಗದು ಹಣ ಹಾಗೂ ಸುಮಾರು 15 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
7. ಎಸ್. ಎಸ್.ರಾಜಶೇಖರ್, ಪಿಸಿಯೋಥೆರಪಿಸ್ಟ್, ಸರ್ಕಾರಿ ಆಸ್ಪತ್ರೆ, ಯಲಹಂಕ, ಬೆಂಗಳೂರು ನಗರ:
ಬೆಂಗಳೂರಿನ ಯಲಹಂಕದ ಮಾರಸಂದ್ರದಲ್ಲಿ 1 ಫ್ಲ್ಯಾಟ್, ಯಲಹಂಕದಲ್ಲಿನ ಶಿವನಹಳ್ಳಿಯಲ್ಲಿ 2 ಅಂತಸ್ತಿನ ಒಂದು ಫ್ಲ್ಯಾಟ್ ಮತ್ತು ತಳಮಹಡಿಯಲ್ಲಿ ಖಾಸಗಿ ಆಸ್ಪತ್ರೆ, ಯಲಹಂಕದ ಮೈಲನಹಳ್ಳಿಯಲ್ಲಿ ಒಂದು ನಿವೇಶನ, 1 ಕಾರ್, 1 ದ್ವಿ ಚಕ್ರ ವಾಹನ ಹಾಗೂ ಸುಮಾರು 4 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆ.