ಕರ್ನಾಟಕ

karnataka

ETV Bharat / state

ಮೂವರು ಸರ್ಕಾರಿ ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ದಾಳಿ - Raid on official

ಅಕ್ರಮ ಆಸ್ತಿ, ಹಣ ಸಂಪಾದನೆ ಮಾಡಿದ ಹಿನ್ನೆಲೆ ಮೂವರು ಅಧಿಕಾರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ACB Raid on official
ಭ್ರಷ್ಟ ಮೂವರು ಸರ್ಕಾರಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ

By

Published : Jun 17, 2020, 6:23 AM IST

Updated : Jun 17, 2020, 8:19 AM IST

ಬೆಂಗಳೂರು: ಭ್ರಷ್ಟಾಚಾರದಲ್ಲಿ ತೊಡಗಿದ್ದ ಸರ್ಕಾರಿ ನೌಕರರ 12 ಸ್ಥಳಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ‌ ನಡೆಸಿದ್ದಾರೆ.

ರಾಜ್ಯದ 3 ವಿವಿಧ ಸರ್ಕಾರಿ ನೌಕರರು, ನೌಕರಿಯಲ್ಲಿದ್ದುಕೊಂಡು ಅಕ್ರಮವಾಗಿ ಹಣ ಹಾಗೂ ಆಸ್ತಿ ಸಂಪಾದನೆ ಮಾಡಿದ್ದರು. ಹೀಗಾಗಿ ಎಸಿಬಿ‌ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಬೆಳಗಾವಿಯ ಕಾನೂನು ಮಾಪನ ಶಾಸ್ತ್ರ ಸಹಾಯಕ ನಿಯಂತ್ರಣಕರನಾಗಿ ಕೆಲಸ ಮಾಡುತ್ತಿದ್ದ ಸುಭಾಷ್ ಸುರೇಂದ್ರ,ಕೊಪ್ಪಳದ ಭೂ ದಾಖಲೆಗಳ ಉಪ ನಿರ್ದೇಶಕರಾದ ಗೋಪಾಲ ಎಲ್ ಮಾಲಗತ್ತಿ, ಹಾಗೂ ಯಾದಗಿಯ ಅಭಿವೃದ್ಧಿ ಅಧಿಕಾರಿ ಜಗದೇವಪ್ಪ ಇವರ ಮೇಲೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಕಲೆಹಾಕಿದ್ದಾರೆ.

Last Updated : Jun 17, 2020, 8:19 AM IST

For All Latest Updates

ABOUT THE AUTHOR

...view details