ಬೆಂಗಳೂರು:ಶಾಸಕ ಜಮೀರ್ ಅಹ್ಮದ್ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ. ನಗರದ 5 ಕಡೆಗಳಲ್ಲಿ 40ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಶಾಸಕರ ಮೇಲಿದೆ.
ನಿನ್ನೆಯಷ್ಟೇ ಎಸಿಬಿ ಬೆಂಗಳೂರು ಮಾಜಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ರನ್ನು ಬಂಧಿಸಿ ಜೈಲಿಗಟ್ಟಿತ್ತು. ಮರುದಿನವೇ ಶಾಸಕ ಜಮೀರ್ ಮನೆ ಮೇಲೆ ಎಸಿಬಿ ರೈಡ್ ಮಾಡಿದೆ. ಜಮೀರ್ ನಿವಾಸಗಳ ಮೇಲೆ ಕಳೆದ ವರ್ಷ ಜಾರಿ ನಿರ್ದೇಶನಾಲಯ(ಇಡಿ) ದಾಳಿ ನಡೆಸಿತ್ತು. ಈ ವರದಿಯನ್ನು ಎಸಿಬಿಗೂ ಕಳುಹಿಸಿತ್ತು. ಇದರ ಆಧಾರದ ಮೇರೆಗೆ ಇಂದು ಬೆಳಗ್ಗೆ ದಾಳಿ ನಡೆಸಲಾಗಿದೆ.