ಬೆಂಗಳೂರು:ಆದಾಯಕ್ಕೂ ಮೀರಿ ಅಕ್ರಮ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬೆಸ್ಕಾಂ ಎಕ್ಸಿಕ್ಯುಟಿವ್ ಇಂಜಿನಿಯರ್ ಲಕ್ಷ್ಮೀಶ್ ಮನೆಯಲ್ಲಿ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಬಿನ್ನಿ ಮಿಲ್ ಬಳಿಯ ಅಪಾರ್ಟ್ಮೆಂಟ್ನಲ್ಲಿರುವ ಲಕ್ಷ್ಮೀಶ್ ರ ಫ್ಲ್ಯಾಟ್ ಹಾಗೂ ಅರಸಿಕೆರೆಯ ಲಕ್ಷ್ಮೀಶ್ ನಿವಾಸದಲ್ಲಿ ಬೆಳಗ್ಗೆಯಿಂದಲೂ ಪರಿಶೀಲನೆ ನಡೆಸಲಾಗುತ್ತಿದೆ.
ಬೆಸ್ಕಾಂ ಎಕ್ಸಿಕ್ಯುಟಿವ್ ಇಂಜಿನಿಯರ್ ಲಕ್ಷ್ಮೀಶ್ ಮನೆಯಲ್ಲಿ ಎಸಿಬಿ ಶೋಧ - ಬೆಸ್ಕಾಂ ಎಕ್ಸಿಕ್ಯುಟಿವ್ ಇಂಜಿನಿಯರ್ ಲಕ್ಷ್ಮೀಶ್ ಮನೆಯಲ್ಲಿ ಎಸಿಬಿ ಶೋಧ
ಬೆಂಗಳೂರು ಉತ್ತರ ವಲಯದ ಬೆಸ್ಕಾಂ ಎಕ್ಸಿಕ್ಯುಟಿವ್ ಇಂಜಿನಿಯರ್ ಲಕ್ಷ್ಮೀಶ್ ಅವರನ್ನು ಎರಡು ದಿನಗಳ ಹಿಂದಷ್ಟೇ ₹10 ಸಾವಿರ ಲಂಚ ಸ್ವೀಕರಿಸುವಾಗ ಎಸಿಬಿ ಬಂಧಿಸಿತ್ತು. ಮುಂದುವರಿದ ಭಾಗವಾಗಿ ಇಂದು ಎಸಿಬಿ ಲಕ್ಷ್ಮೀಶ್ ಮನೆಯಲ್ಲಿ ತಪಾಸಣೆ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದೆ.
ಪರಿಶೀಲನೆ ವೇಳೆ ಮಾಗಡಿ ರಸ್ತೆಯ ಪ್ರೆಸ್ಟೀಜ್ ವುಡ್ ಅಪಾರ್ಟ್‌ಮೆಂಟ್ ನಲ್ಲಿ ಒಂದು ಫ್ಲ್ಯಾಟ್, 9 ಲಕ್ಷ ನಗದು, 1 ಕಾರು, 1 ದ್ವಿಚಕ್ರ ವಾಹನ, 5.78 ಲಕ್ಷ ಗೃಹೋಪಯೋಗಿ ವಸ್ತುಗಳು, ಹಾಸನ ಜಿಲ್ಲೆ ಅರಸೀಕೆರೆಯಲ್ಲಿ 1 ಮನೆ, 3 ಎಕರೆ ಕೃಷಿ ಜಮೀನು ಪತ್ತೆಯಾಗಿದೆ ಎನ್ನಲಾಗ್ತಿದೆ. ಬೆಂಗಳೂರು ಉತ್ತರ ವಲಯದ ಬೆಸ್ಕಾಂ ಎಕ್ಸಿಕ್ಯುಟಿವ್ ಇಂಜಿನಿಯರ್ ಲಕ್ಷ್ಮೀಶ್ ಅವರನ್ನು ಎರಡು ದಿನಗಳ ಹಿಂದಷ್ಟೇ ₹10 ಸಾವಿರ ಲಂಚ ಸ್ವೀಕರಿಸುವಾಗ ಎಸಿಬಿ ಬಂಧಿಸಿತ್ತು. ಮುಂದುವರಿದ ಭಾಗವಾಗಿ ಇಂದು ಎಸಿಬಿ ಲಕ್ಷ್ಮೀಶ್ ಮನೆಯಲ್ಲಿ ತಪಾಸಣೆ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದೆ.
ಇದನ್ನೂ ಓದಿ : ಬೆಂಗಳೂರು: ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಬೆಸ್ಕಾಂ ಎಕ್ಸಿಕ್ಯುಟಿವ್ ಇಂಜಿನಿಯರ್