ಬೆಂಗಳೂರು: ಶೂ ವಾಣಿಜ್ಯ ವಹಿವಾಟು ನಡೆಸಲು ಪರವಾನಿಗೆ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಜಯನಗರದ ಆರೋಗ್ಯ ಅಧಿಕಾರಿಯನ್ನು ಎಸಿಬಿ ಬಂಧಿಸಿದೆ.
ಜಯನಗರದ 4ನೇ ಬ್ಲಾಕ್‌ನ ಬಿಬಿಎಂಪಿ ಆರೋಗ್ಯಾಧಿಕಾರಿ ಲೋಕೇಶ್ ಬಂಧಿತ ಆರೋಪಿ. ಜಯನಗರದ ನಿವಾಸಿಯೊಬ್ಬರು ಲಿಬರ್ಟಿ ಶೂ ವಾಣಿಜ್ಯ ವಹಿವಾಟು ನಡೆಸಲು ಪರವಾನಿಗೆ ಕೋರಿ ಜಯನಗರದ 4ನೇ ಹಂತದಲ್ಲಿರುವ ಬಿಬಿಎಂಪಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಅಲ್ಲಿನ ಆರೋಗ್ಯಾಧಿಕಾರಿ ಲೋಕೇಶ್ ಶೂ ವಹಿವಾಟು ನಡೆಸಲು ಪರವಾನಿಗೆಗಾಗಿ 15 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗ್ತಿದೆ. ಈ ಕುರಿತು ಜಯನಗರ ನಿವಾಸಿ ಎಸಿಬಿಗೆ ದೂರು ನೀಡಿದ್ದರು.