ಬೆಂಗಳೂರು: ಉದ್ಯೋಗ ಕೊಡಿಸುವ ನೆಪದಲ್ಲಿ ಹೊರ ರಾಜ್ಯದಿಂದ ಹುಡುಗಿಯರನ್ನು ಕರೆಯಿಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಸ್ಪಾ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೆಲಸದ ಆಮಿಷವೊಡ್ಡಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಕಿರಾತಕರು: ಸ್ಪಾ ಮೇಲೆ ದಾಳಿ - ಬೆಂಗಳೂರಲ್ಲಿ ವೇಶ್ಯಾವಾಟಿಕೆ
ನಗರದ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ದಿ ಡ್ರಾಗನ್ ಸ್ಪಾದಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿತ್ತು ಎನ್ನಲಾಗಿದೆ. ಹೊರ ರಾಜ್ಯದಲ್ಲಿ ಕಷ್ಟದಲ್ಲಿರುವ ಮಹಿಳೆಯರನ್ನು ಟಾರ್ಗೆಟ್ ಮಾಡಿ ಈ ಕೆಲಸಕ್ಕೆ ಕಿರಾತಕರು ನೂಕುತ್ತಿದ್ದರು ಎಂದು ತಿಳಿದುಬಂದಿದೆ.
ಸ್ಪಾ ಮೇಲೆ ದಾಳಿ
ನಗರದ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ದಿ ಡ್ರಾಗನ್ ಸ್ಪಾದಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿತ್ತು ಎನ್ನಲಾಗಿದೆ. ಹೊರ ರಾಜ್ಯದಲ್ಲಿ ಕಷ್ಟದಲ್ಲಿರುವ ಮಹಿಳೆಯರನ್ನು ಟಾರ್ಗೆಟ್ ಮಾಡಿ ಹೆಚ್ಚಿನ ಸಂಬಳ ಕೊಡುವ ಆಮಿಷ ತೋರಿಸಿ, ಸ್ಪಾಗೆ ಕರೆತಂದು ವೇಶ್ಯಾವಾಟಿಕೆ ದಂಧೆಗೆ ನೂಕುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಪೊಲೀಸ್ ದಾಳಿ ವೇಳೆ ಸ್ಥಳದಲ್ಲಿದ್ದ ವಡ್ಡಿ ಚಿನ್ನ, ಅಂಕಲ್ ಕುಮಾರ್, ರಿಚರ್ಡ್ ಹಾಗು ಪ್ರಜ್ವಲ್ ಸಿಸಿಬಿ ಅಧಿಕಾರಿಗಳ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಪ್ರಕರಣ ತನಿಖೆ ಮುಂದುವರೆದಿದೆ.