ಕರ್ನಾಟಕ

karnataka

ETV Bharat / state

ಟಿಡಿಆರ್ ಹಗರಣ: ಎಸಿಬಿಗೆ ತಲೆನೋವಾದ ರತನ್​ ಲಾಥ್​ ಡೈರಿ ಕೋಡ್​ವರ್ಡ್​ಗಳು - undefined

ಬಿಬಿಎಂಪಿ ಟಿಡಿಆರ್ ಹಗರಣಕ್ಕೆ ಸಂಬಂಧಿಸಿದಂತೆ ಎಸಿಬಿ ಆರೋಪಿ ರತನ್ ಲಾಥ್‌ ಮನೆ‌ ಮೇಲೆ ದಾಳಿ ನಡೆದಾಗ ಮಹತ್ವದ ಡೈರಿಗಳು ಸಿಕ್ಕಿದ್ದು, ಡೈರಿ ಪರಿಶೀಲನೆಯ ವೇಳೆ ಎಸಿಬಿಗೆ ಸ್ಪೋಟಕ ಮಾಹಿತಿ ಲಭ್ಯವಾಗಿದೆ.  ಆರೋಪಿಗಳು ಕೋಡ್​ವರ್ಡ್​ ಮೂಲಕ ಡೀಲಿಂಗ್ ಮಾಡ್ತಿದ್ದರು ಎನ್ನಲಾಗುತ್ತಿದೆ.

ಬಿಬಿಎಂಪಿ ಟಿಡಿಆರ್ ಹಗರಣಕ್ಕೆ ಸಂಬಂಧಿಸಿದಂತೆ ಎಸಿಬಿ ತನಿಖೆ

By

Published : May 16, 2019, 5:01 PM IST

ಬೆಂಗಳೂರು:ಬನಶಂಕರಿ ಕೋ ಆಪರೇಟಿವ್ ಬ್ಯಾಂಕ್ ಮೇಲೆ ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಜನ ಏಜೆಂಟರ್​ಗಳು ಇದ್ದಾರೆ. ಕಾನೂನು ಬಾಹಿರವಾಗಿ ಕೆಲಸ ಮಾಡಿದವರ ವಿರುದ್ದ ಕ್ರಮ ಕೈಗೊಂಡಿದ್ದಿವಿ ಎಂದು ಎಸಿಬಿ ಐಜಿ ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ.

ಎಸಿಬಿ ಐಜಿ ಚಂದ್ರಶೇಖರ್

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಟಿಡಿಆರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬ್ಯಾಂಕ್​ನಲ್ಲಿ ವಹಿವಾಟು ನಡೆದಿದೆ. ಈ ಹಿನ್ನೆಲೆ ಇವತ್ತು ಬ್ಯಾಂಕ್ ಮೇಲೆ ದಾಳಿ ಮಾಡಲಾಗಿದೆ. ದಾಳಿ‌ ಮಾಡಿದ ಸಂದರ್ಭದಲ್ಲಿ ಹಲವು ದಾಖಲೆಗಳು ಸಿಕ್ಕಿವೆ. ಹಾಗೆ ಈ ಪ್ರಕರಣದಲ್ಲಿ ರತನ್ ಲಾಥ್ ತಲೆಮರೆಸಿಕೊಂಡಿದ್ರು. ಎಸಿಬಿ ತಂಡ ಹುಡುಕಾಟ ನಡೆಸಿದ ಸಂದರ್ಭದಲ್ಲಿ ವಾಪಸ್ ಬಂದಿದ್ದಾರೆ. ಹಾಗೆ ಟಿಡಿಆರ್ ಪ್ರಕರಣದಲ್ಲಿ ಇಲ್ಲಿವರೆಗೂ ಯಾರನ್ನೂ ಬಂಧನ ಮಾಡಿಲ್ಲ ಕೆಲವರು ಮಧ್ಯಂತರ ಜಾಮೀನು ಪಡೆದಿದ್ದಾರೆ ಅಷ್ಟೇ ಎಂದು ತಿಳಿಸಿದರು.

ಬಿಬಿಎಂಪಿ ಟಿಡಿಆರ್ ಹಗರಣಕ್ಕೆ ಸಿಕ್ಕಿದೆ ಮಹತ್ವದ ಸಾಕ್ಷಿ

ಇನ್ನು ಎಸಿಬಿ ಆರೋಪಿ ರತನ್ ಲಾಥ್‌ ಮನೆ‌ ಮೇಲೆ ದಾಳಿ ನಡೆದಾಗ ಮಹತ್ವದ ಡೈರಿಗಳು ಸಿಕ್ಕಿದ್ದು, ಡೈರಿ ಪರಿಶೀಲನೆಯ ವೇಳೆ ಎಸಿಬಿಗೆ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಯಾಕಂದ್ರೆ, ರತನ್ ಲಾಥ್ ಕೋಡಿಂಗ್ ಡಿ-ಕೋಡಿಂಗ್​ನಲ್ಲಿ ವ್ಯವಹಾರ ಮಾಡ್ತಿರುವ ಅಂಶ ಡೈರಿಯಲ್ಲಿ ಉಲ್ಲೇಖ‌ವಾಗಿದ್ದು ಕೋಡ್​ವರ್ಡ್​ನಲ್ಲಿ ವ್ಯವಹಾರವನ್ನ ಡೈರಿಯಲ್ಲಿ ಬರೆದಿದ್ದಾನೆ.

ಇನ್ನು ರತನ್ ಲಾಥ್ ಡೈರಿಯಲ್ಲಿ ಇಂಗ್ಲಿಷ್, ರಾಜಸ್ಥಾನಿ ಭಾಷೆಯಲ್ಲಿ ಕೋಡ್​ವರ್ಡ್​​​ ಇದ್ದು ಡಿ ಕೋಡ್ ಮಾಡಲು ಎಸಿಬಿ ಅಧಿಕಾರಿಗಳು ತನಿಖೆ ಚುರುಕು ಗೊಳಿಸಿ ಅನೇಕ ಭಾಷಾ ತಜ್ಞರ ಮೂಲಕ ಡಿ ಕೋಡ್ ಮಾಡಿಸಲು ಪ್ರಯತ್ನ ಮಾಡಿದ್ದಾರೆ. ಹಾಗೆ ಅನೇಕ ಮಾರ್ವಾಡಿಗಳ ಕರೆಸಿ ಡಿ ಕೋಡ್ ಮಾಡಲು ಪ್ರಯತ್ನಿಸಿದ್ದಾರೆ. ಆದ್ರೆ ಮಾರ್ವಾಡಿಗಳಿಗೂ ಸಹ ಅರ್ಥವಾಗದ ರತನ್ ಲಾತ್ ಕೋಡ್ ಹೀಗಾಗಿ ಎಫ್​ಎಸ್​ಎಲ್​ ತಜ್ಞರಿಗೆ ಡೈರಿ ನಕಲು ರವಾನೆ ಮಾಡಲು ಎಸಿಬಿ ಚಿಂತನೆ‌ ನಡೆಸಿದೆ.

ಎಸಿಬಿ ತನಿಖೆಗೆ ಸರಿಯಾಗಿ ಸಹಕರಿಸದ‌ ಆರೋಪಿ ಬಿಲ್ಡರ್ ರತನ್ ಲಾಥ್

ಇನ್ನು ಎಸಿಬಿ ಅಧಿಕಾರಿಗಳ ಎದುರು ತನಿಖೆಗೆ ಕನ್ನಡದಲ್ಲಿ ಮಾತನಾಡದೇ ರತನ್ ಲಾಥ್ ತನಿಖಾಧಿಕಾರಿಗಳಿಗೆ ಕಿರಿಕಿರಿ ಉಂಟುಮಾಡಿದ್ದಾರೆ. ಇಂಗ್ಲಿಷ್ ಅಥವಾ ಹಿಂದಿಯಲ್ಲಿಯೇ ತನಿಖೆ ಮಾಡುವಂತೆ ಪಟ್ಟು ಹಿಡಿದು ನಂತರ ಏನೆ ಸಹಿ‌ಮಾಡಬೇಕಾದ್ರು, ವಕೀಲರ ಮೂಲಕ ಓದಿಸಿದ ನಂತರವೇ ಹೇಳಿಕೆಗೆ ಸಹಿ ಹಾಕುತ್ತಿದ್ದಾರೆ. ಸದ್ಯ ಆರೋಪಿ ಮಧ್ಯಂತರ ಜಾಮೀನು ಪಡೆದಿದ್ದು ಜಾಮೀನು ರದ್ದತಿಗೆ ಕೋರ್ಟ್ ಅರ್ಜಿ ಸಲ್ಲಿಸಲು ಎಸಿಬಿ ನಿರ್ಧಾರ ಮಾಡಿದೆ.

For All Latest Updates

TAGGED:

ABOUT THE AUTHOR

...view details