ಬೆಂಗಳೂರು: ಕೆಎಎಸ್ ಸುಧಾ ಮನೆ ಮೆಲೆ ಎಸಿಬಿ ದಾಳಿ ಪ್ರಕರಣ ಸಂಬಂಧ ಭ್ರಷ್ಟಾಚಾರ ನಿಗ್ರಹ ಸಂಸ್ಥೆ (ಎಸಿಬಿ) ಐಜಿಪಿ ಚಂದ್ರಶೇಖರ್ ಪ್ರತಿಕ್ರಿಯಿಸಿದ್ದಾರೆ.
ಕೆಎಎಸ್ ಅಧಿಕಾರಿಯಾಗಿರುವ ಸುಧಾ ಅವರು ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಮಾಹಿತಿ ಬಂದಿತ್ತು. ಈ ಹಿನ್ನೆಲೆ ಅವರಿಗೆ ಸಂಬಂಧಪಟ್ಟ 6 ಕಡೆ ದಾಳಿ ಮಾಡಿದ್ದೇವೆ. ಕೆಲವು ದಾಖಲೆಗಳು ಸಿಕ್ಕಿವೆ, ಅವನ್ನು ವಶಪಡಿಸಿಕೊಂಡಿದ್ದೇವೆ. ಬೆಂಗಳೂರು, ಉಡುಪಿ, ಮೈಸೂರು ಸೇರಿದಂತೆ ಆರು ಕಡೆ ದಾಳಿ ನಡೆಸಿದ್ದೇವೆ. ಸುಧಾ ಅವರ ಮೇಲೆ ಮಾತ್ರ ಈಗ ದೂರು ದಾಖಲಿಸಿದ್ದೇವೆ. ಪ್ರಾಥಮಿಕ ಮಾಹಿತಿ ಪ್ರಕಾರ ಬೇನಾಮಿ ಆಸ್ತಿಯೂ ಇದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆಯೂ ತನಿಖೆ ನಡೆಸಲಿದ್ದೇವೆ. ಆ ರೀತಿಯಾಗಿ ಬೇನಾಮಿಗಳು ಯಾರಾದರೂ ಇದ್ದರೆ ಅವರ ವಿರುದ್ಧವೂ ಕೇಸ್ ದಾಖಲಿಸಿಕೊಳ್ಳಲಿದ್ದೇವೆ. ಪರಿಶೀಲನೆ ಮುಗಿದ ಬಳಿಕ ಈ ಬಗ್ಗೆ ಸಂಪೂರ್ಣ ವಿವರ ನೀಡುತ್ತೇವೆ ಎಂದರು.