ಕರ್ನಾಟಕ

karnataka

ETV Bharat / state

ಇನ್​ಸ್ಪೆಕ್ಟರ್​ ಸೈಮನ್​ಗೆ ಮತ್ತೊಂದು ಸಂಕಷ್ಟ: ಐಟಿ, ಇಡಿ ತನಿಖೆ ಸಾಧ್ಯತೆ - ACB attack on inspector saiman

ಮಂಗಳವಾರ ವಿಕ್ಟರ್ ಸೈಮನ್ ಅವರ ನಿವಾಸ ಸೇರಿ ಇತರ ಕೆಲವು ಸ್ಥಳಗಳ ಮೇಲೆ ಎಸಿಬಿ ದಾಳಿ ನಡೆಸಿತ್ತು. ಎಸಿಬಿ ವಿಚಾರಣೆ ಬೆನ್ನಲ್ಲೇ ಐಟಿ ಮತ್ತು ಇಡಿ ಅಧಿಕಾರಿಗಹಳು ಸಹ ತನಿಖೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

ACB attack on inspector saiman
ಇನ್​ಸ್ಪೆಕ್ಟರ್​ ಸೈಮನ್​ಗೆ ಮತ್ತೊಂದು ಸಂಕಷ್ಟ

By

Published : Mar 12, 2021, 10:17 AM IST

ಬೆಂಗಳೂರು: ಆದಾಯ ಮೀರಿ ಆಸ್ತಿ ಹೊಂದಿದ ಆರೋಪದಡಿ ಬಂಧಿತರಾಗಿದ್ದ ಬೆಂಗಳೂರು ಮಹಾನಗರ ಕಾರ್ಯಪಡೆಯ ಪೊಲೀಸ್ ಇನ್ಸ್‌ಪೆಕ್ಟರ್ ವಿಕ್ಟರ್ ಸೈಮನ್​​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಎಸಿಬಿ ವಿಚಾರಣೆ ಬೆನ್ನಲ್ಲೇ ಐಟಿ ಮತ್ತು ಇಡಿ ಅಧಿಕಾರಿಗಹಳು ಸಹ ತನಿಖೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಸೈಮನ್ ಬಗ್ಗೆ ಐಟಿ ಮತ್ತು ಇಡಿಗೆ ಮಾಹಿತಿ ನೀಡಲು, ಹಿರಿಯ ಎಸಿಬಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರಂತೆ.

ಇದನ್ನೂ ಓದಿ:ಡ್ರಗ್ಸ್ ಪ್ರಕರಣ: ತೆಲುಗು‌ ನಟ ತನೀಶ್ ಸೇರಿ ಐವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್

ಮಂಗಳವಾರ ವಿಕ್ಟರ್ ಸೈಮನ್ ಅವರ ನಿವಾಸ ಸೇರಿ ಇತರ ಕೆಲವು ಸ್ಥಳಗಳ ಮೇಲೆ ಎಸಿಬಿ ದಾಳಿ ನಡೆಸಿತ್ತು. ಸೈಮನ್‌ ಅವರ ಬಳಿ ಈವರೆಗೆ ಆದಾಯಕ್ಕಿಂತಲೂ ಹೆಚ್ಚಿನ 2 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಪರಿಶೀಲನೆ ವೇಳೆ ತೆರಿಗೆ ವಂಚಿಸಿರುವುದು ದೃಢಪಟ್ಟಿದೆ.

ಅಶೋಕ ನಗರ ಸಂಚಾರಿ ಪೊಲೀಸ್​ ಠಾಣೆ, ಬೆಳ್ಳಂದೂರು, ಹೆಚ್‌ಎಸ್‌ಆರ್ ಲೇಔಟ್ ಸೇರಿದಂತೆ ಮೊದಲಾದ ಠಾಣೆಗಳಲ್ಲಿ ಇನ್ಸ್‌ಪೆಕ್ಟರ್ ಆಗಿ ಸೈಮನ್ ಕರ್ತವ್ಯ ನಿರ್ವಹಿಸಿದ್ದಾರೆ.

For All Latest Updates

ABOUT THE AUTHOR

...view details