ಕರ್ನಾಟಕ

karnataka

ETV Bharat / state

ಮಾಸ್ಕ್ ಹಾಕು ಎಂದಿದ್ದಕ್ಕೆ ನಿಂದನೆ: ಪೊಲೀಸ್​ ಎಂದಾಕ್ಷಣ ವರಸೆ ಬದಲಿಸಿದ ಭೂಪ - ಬೆಂಗಳೂರು ಮಾಸ್ಕ್ ಸುದ್ದಿ

ಬಸವೇಶ್ವರನಗರದ ಅಂಬೇಡ್ಕರ್ ಪಾರ್ಕ್ ಬಳಿ ಪೊಲೀಸರು‌‌ ಮಫ್ತಿಯಲ್ಲಿ ಗಸ್ತು ತಿರುಗುತ್ತಿದ್ದಾರೆ. ಈ ವೇಳೆ, ಒಬ್ಬ ವ್ಯಕ್ತಿಗೆ ಮಾಸ್ಕ್ ಹಾಕಿಕೊಳ್ಳಲು ಸೂಚಿಸಿದ್ದಾರೆ. ಆಗ ಆ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ತನಗೆ ತಿಳಿ ಹೇಳಿದವರು ಪೊಲೀಸರು ಎಂದಾಕ್ಷಣ ತಕ್ಷಣ ಕ್ಷಮೆಯಾಚಿಸಿದ್ದಾನೆ.

ಮಾಸ್ಕ್ ಹಾಕು ಎಂದಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದನೆ
ಮಾಸ್ಕ್ ಹಾಕು ಎಂದಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದನೆ

By

Published : Jul 2, 2020, 11:55 AM IST

Updated : Jul 2, 2020, 12:01 PM IST

ಬೆಂಗಳೂರು: ನಗರದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿರುವ ಹಿನ್ನೆಲೆ ಸರ್ಕಾರವು ಜನರಿಗೆ ಮುಂಜಾಗ್ರತೆ ವಹಿಸುವಂತೆ ಸೂಚಿಸುತ್ತಲೇ ಇದೆ. ಆದರೆ, ಇಲ್ಲೊಬ್ಬ ಮಾಸ್ಕ್​ ಹಾಕಿಕೊಳ್ಳಿ ಎಂದಿದ್ದಕ್ಕೆ ಪೊಲೀಸರಿಗೇ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ನಡೆದಿದೆ.

ಬಸವೇಶ್ವರನಗರದ ಅಂಬೇಡ್ಕರ್ ಪಾರ್ಕ್ ಬಳಿ ಬಸವೇಶ್ವರನಗರ ಠಾಣಾ ಪೊಲೀಸರು‌‌ ಹಾಗೂ ಮಾರ್ಷಲ್​ಗಳು ಮಫ್ತಿಯಲ್ಲಿ ಗಸ್ತು ತಿರುಗುತ್ತಿದ್ದಾರೆ. ಈ ವೇಳೆ ಓರ್ವ ವ್ಯಕ್ತಿಗೆ ಮಾಸ್ಕ್ ಹಾಕಿಕೊಳ್ಳುವಂತೆ ಸೂಚಿಸಿದ್ದಾರೆ. ಆಗ ಆ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ಈ ವೇಳೆ ಮಫ್ತಿಯಲ್ಲಿದ್ದವರು ನಾವು ಪೊಲೀಸರು ಠಾಣೆಗೆ ಬಾ ಎಂದಿದ್ದಾರೆ. ಪೊಲೀಸರು ಅಂದ ತಕ್ಷಣ ಕ್ಷಮೆ ಕೇಳಿ ತಪ್ಪಾಯ್ತು ಕ್ಷಮಿಸಿ ಸರ್ ಎಂದು ಬೇಡಿಕೊಂಡಿದ್ದಾನೆ. ಇದೇ ವೇಳೆ, ಅಲ್ಲಿ ಸಾರ್ವಜನಿಕರು ಗುಂಪು ಸೇರಿ ಮಾತಿನ ಚಕಮಕಿ ನಡೆಸಿದರು. ಈ ಕುರಿತು ಬಸವೇಶ್ವರ ನಗರ ಠಾಣೆಯಲ್ಲಿ ಪಿಟಿ ಕೇಸ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Last Updated : Jul 2, 2020, 12:01 PM IST

ABOUT THE AUTHOR

...view details