ಕರ್ನಾಟಕ

karnataka

ETV Bharat / state

ಜನ ಸಿಎಂ ಆಗಿ ಅಂತಾರೆ, ನಾ ಬಾಯಿ ಮುಚ್ಚಿಸಲಿಕ್ಕಾಗುತ್ತಾ.. ವಿಶ್ವನಾಥ್‌ ಬಗ್ಗೆ ನೋ ಕಮೆಂಟ್‌ ಎಂದ ಸಿದ್ದು! - undefined

ಹೆಚ್. ವಿಶ್ವನಾಥ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಅದರ ಬಗ್ಗೆ ಈಗ ಏನು ಮಾತನಾಡುವುದಿಲ್ಲ. ಬಹಿರಂಗವಾಗಿ ಚರ್ಚೆ ಮಾಡುವುದು ಸರಿಯಲ್ಲ. ಚುನಾವಣೆ ಬಳಿಕ ಸಮನ್ವಯ ಸಮಿತಿಯಲ್ಲಿ ಈ ಬಗ್ಗೆ ಚರ್ಚೆ ಮಾಡುವೆ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮಾಜಿ ಸಿಎಂ‌ ಸಿದ್ದರಾಮಯ್ಯ

By

Published : May 14, 2019, 11:48 AM IST

ಹುಬ್ಬಳ್ಳಿ:ಹೆಚ್. ವಿಶ್ವನಾಥ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಅದರ ಬಗ್ಗೆ ಈಗಲೇ ಏನೂ ಮಾತನಾಡೋದಿಲ್ಲ. ಬಹಿರಂಗವಾಗಿ ಚರ್ಚೆ ಮಾಡುವುದು ಸರಿಯಲ್ಲ. ಚುನಾವಣೆ ಬಳಿಕ ಸಮನ್ವಯ ಸಮಿತಿಯಲ್ಲೇ ಈ ಬಗ್ಗೆ ಚರ್ಚೆ ಮಾಡುವೆ ಅಂತಾ ಮಾಜಿ ಸಿಎಂ‌ ಸಿದ್ದರಾಮಯ್ಯ ಹೇಳಿದರು. ಈ ಸಂಬಂಧ ಸಿದ್ದರಾಮಯ್ಯ ಟ್ವೀಟ್​ ಸಹ ಮಾಡಿದ್ದಾರೆ.

ಮಾಜಿ ಸಿಎಂ‌ ಸಿದ್ದರಾಮಯ್ಯ

ಹುಬ್ಬಳ್ಳಿ ಏರ್‌ಪೋರ್ಟ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇವಲ ಕಾಂಗ್ರೆಸ್‌ನವರ ಮೇಲೆ ಐಟಿ ದಾಳಿ ಮಾಡಲಾಗುತ್ತಿದೆ. ಬಿಜೆಪಿಗರ ಹೋಟೆಲ್‌ಗಳ ಮೇಲೆ ಮತ್ತು ಯಡಿಯೂರಪ್ಪ ಇದ್ದ ರೂಮ್ ಮೇಲೆ ದಾಳಿ ಮಾಡಲಿ. ಐಟಿ ಸಂಸ್ಥೆಯವರು ತಮ್ಮ ಕೆಲಸವನ್ನ ನಿಷ್ಪಕ್ಷಪಾತವಾಗಿ ಮಾಡಬೇಕು ಎಂದರು.

ಯಡಿಯೂರಪ್ಪ ಹಗಲು ಕನಸು ಕಾಣ್ತಾ ಇದ್ದಾರೆ, ಅವರು ಒಂದು ಸಲ ಹೇಳಿದ್ರೇ ಜನ ಗಂಭೀರವಾಗಿ ತೆಗೆದುಕೊಳ್ಳಬೇಕು. ಹತ್ತು ಸಲ ಅದನ್ನೇ ಹೇಳಿದ್ರೇ ಗಂಭೀರವಾಗಿ ತೆಗೆದುಕೊಳ್ಳಲಾಗುತ್ತಾ..? ಜನರು ಆಶೀರ್ವಾದ ಮಾಡಿದ್ರೇ ಮತ್ತೆ ಸಿಎಂ‌ ಆಗಬಾರದಾ? ಜನರ ಅಭಿಪ್ರಾಯದಲ್ಲಿ ತಪ್ಪೇನಿದೆ. ಅವರು ತಮ್ಮ ಅಭಿಮಾನದಿಂದ ಹೇಳ್ತಿದ್ದಾರೆ. ಜನರ ಬಾಯಿ ಮುಚ್ಚಿಸಲಿಕ್ಕೆ ಆಗುತ್ತಾ? ನಾನು ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದಿದ್ದೇನೆ ಎಂದರು.

For All Latest Updates

TAGGED:

ABOUT THE AUTHOR

...view details