ಬೆಂಗಳೂರು: ಬಿಬಿಎಂಪಿಗೆ ಚುನಾವಣಾ ವರ್ಷವಾಗಿರೋದ್ರಿಂದ ರಾಜ್ಯ ಸರ್ಕಾರದ ಬಜೆಟ್ನಲ್ಲಿ ಬೆಂಗಳೂರಿಗೆ ಹೆಚ್ಚಿನ ಅನುದಾನದ ನಿರೀಕ್ಷೆ ಇಡಲಾಗಿತ್ತು. ಆದ್ರೆ ಹಳೆಯ ಯೋಜನೆಗಳನ್ನೇ ಮುಂದುವರಿಸಿದ್ದು, ಹೊಸ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡದಿರುವುದು ಬೆಂಗಳೂರಿನ ಪಾಲಿಗೆ ಕಹಿಯಾಗಿದೆ ಎಂದು ಪ್ರತಿಪಕ್ಷ ಆರೋಪಿಸಿದೆ. ಅಲ್ಲದೆ ಹೆಚ್ಚಿನ ತೆರಿಗೆ ನೀಡುವ ಬಿಬಿಎಂಪಿಗೆ ಕಡಿಮೆ ಮೊತ್ತದ ಅನುದಾನ ನೀಡಿ ಮೋಸ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಅಬ್ದುಲ್ ವಾಜಿದ್ ಟೀಕಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳ ಅಭಿವೃದ್ಧಿಗೆ ಎರಡು ವರ್ಷಕ್ಕೆ ಸಾವಿರ ಕೋಟಿ ಮೀಸಲಿಟ್ಟಿದ್ದು, ಕಸದಿಂದ ವಿದ್ಯುತ್ ಯೋಜನೆಗೆ 210 ಕೋಟಿ ರೂ., ಮಳೆನೀರು, ಕಾಲುವೆ ಅಭಿವೃದ್ಧಿಗೆ 500 ಕೋಟಿ ರೂ. ಮೀಸಲಿಟ್ಟಿದೆ. ಅಲ್ಲದೆ 2019-20ನೇ ಸಾಲಿನ ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯ 8344 ಕೋಟಿ ರೂ., ಶುಭ್ರ ಯೋಜನೆಯ 999 ಕೋಟಿ ರೂ. ಯೋಜನೆ ಅನುಷ್ಠಾನದ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ ಇಂದಿರಾ ಕ್ಯಾಂಟೀನ್ ಯೋಜನೆ, ರಸ್ತೆ ಅಭಿವೃದ್ಧಿಗಳಿಗೆ ಈ ಬಾರಿ ಹೆಚ್ಚಿನ ಅನುದಾನ ನೀಡಿಲ್ಲ.