ಕರ್ನಾಟಕ

karnataka

ETV Bharat / state

ಬಿಬಿಎಂಪಿ ಪ್ರತಿಪಕ್ಷ ನಾಯಕನಾಗಿ ಅಬ್ದುಲ್ ವಾಜಿದ್ ನೇಮಕ - kpcc latest news

ಬಿಬಿಎಂಪಿಯಲ್ಲಿ ನಾಲ್ಕನೇ ಅವಧಿಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತದಲ್ಲಿ ಅಬ್ದುಲ್ ವಾಜಿದ್ ಒಂದು ವರ್ಷ ಆಡಳಿತ ಪಕ್ಷದ ನಾಯಕರಾಗಿದ್ದರು. ಇದೀಗ ಅವರಿಗೆ ಪ್ರತಿಪಕ್ಷ ನಾಯಕನ ಸ್ಥಾನ ಒಲಿದಿದೆ.

ಅಬ್ದುಲ್ ವಾಜಿದ್

By

Published : Oct 22, 2019, 1:04 PM IST

ಬೆಂಗಳೂರು:ಬಿಬಿಎಂಪಿ ಪ್ರತಿಪಕ್ಷ ನಾಯಕರನ್ನಾಗಿ ಮನೋರಾಯನಪಾಳ್ಯ ವಾರ್ಡ್​ನ ಅಬ್ದುಲ್ ವಾಜಿದ್ ಅವರ‌ನ್ನು ಕೆಪಿಸಿಸಿ ನೇಮಕ ಮಾಡಿದೆ.

ಆದೇಶ ಪತ್ರ

ತಮ್ಮನ್ನು ಬಿಬಿಎಂಪಿ ಪ್ರತಿಪಕ್ಷ ನಾಯಕನಾಗಿ ಆಯ್ಕೆ ಮಾಡಿದ್ದಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ದಿನೇಶ್ ಗುಂಡೂರಾವ್, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ನಗರದ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರಿಗೆ ಅಬ್ದುಲ್ ವಾಜಿದ್ ಧನ್ಯವಾದ ತಿಳಿಸಿದ್ದಾರೆ.

ಬಿಬಿಎಂಪಿಯಲ್ಲಿ ನಾಲ್ಕನೇ ಅವಧಿಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತದಲ್ಲಿ ಅಬ್ದುಲ್ ವಾಜಿದ್ ಒಂದು ವರ್ಷ ಆಡಳಿತ ಪಕ್ಷದ ನಾಯಕರಾಗಿದ್ದರು. ಇದೀಗ ಚುನಾವಣೆ ವರ್ಷವಾಗಿದ್ದು, ಆಡಳಿತ ಪಕ್ಷದ ತಪ್ಪುಗಳ‌ನ್ನು ಎತ್ತಿಹಿಡಿದು ಸಮರ್ಥವಾಗಿ ಪ್ರತಿಪಕ್ಷದ ಸ್ಥಾನ ನಿಭಾಯಿಸಲು ಅಬ್ದುಲ್ ವಾಜಿದ್ ಅವರನ್ನು ಇಂದು ನೇಮಕ ಮಾಡಿ ಕೆಪಿಸಿಸಿ ಆದೇಶ ಹೊರಡಿಸಿದೆ.

ABOUT THE AUTHOR

...view details