ಬೆಂಗಳೂರು: ಬೆಂಗಳೂರಿನ ಮಹತ್ವದ ಮೇಲ್ಸೇತುವೆ, ಯಲಹಂಕದ ಮೇಲ್ಸೇತುವೆ ಕರ್ನಾಟಕ ಮಹನೀಯರ ಹೆಸರಿಡಲಿ ಆದ್ರೆ, ವೀರ್ ಸಾವರ್ಕರ್ ಹೆಸರು ಹಿಂಪಡೆಯಬೇಕು ಎಂದು ಬಿಬಿಎಂಪಿ ವಿಪಕ್ಷ ನಾಯಕ ಅಬ್ದುಲ್ ವಾಜಿದ್ ಒತ್ತಾಯಿಸಿದರು.
ಆಡಳಿತದಲ್ಲಿದ್ರೂ ಕದ್ದುಮುಚ್ಚಿ ವೀರ್ ಸಾವರ್ಕರ್ ನಾಮಕರಣ ಯಾಕೆ?: ಅಬ್ದುಲ್ ವಾಜಿದ್ - ವೀರ್ ಸಾವರ್ಕರ್ಹೆಸರು ಬೇಡ ಬ್ದುಲ್ ವಾಜಿದ್
ಯಲಹಂಕದ ಮೇಲ್ಸೇತುವೆ ಕರ್ನಾಟಕ ಮಹನೀಯರ ಹೆಸರಿಡಲಿ ಆದ್ರೆ, ವೀರ್ ಸಾವರ್ಕರ್ ಹೆಸರು ಹಿಂಪಡೆಯಬೇಕೆಂದು ಬಿಬಿಎಂಪಿ ವಿಪಕ್ಷ ನಾಯಕ ಅಬ್ದುಲ್ ವಾಜಿದ್ ಒತ್ತಾಯ ಮಾಡಿದ್ದಾರೆ.
ಆಡಳಿತದಲ್ಲಿದ್ರೂ ಕದ್ದುಮುಚ್ಚಿ ವೀರ್ ಸಾವರ್ಕರ್ ನಾಮಕರಣ ಯಾಕೆ?: ಅಬ್ದುಲ್ ವಾಜಿದ್
ವೀರ್ ಸಾವರ್ಕರ್ಗೂ ಕರ್ನಾಟಕಕ್ಕೂ ಸಂಬಂಧ ಇಲ್ಲ. ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ಚರ್ಚೆಯೇ ಆಗಿಲ್ಲ. ಟೌನ್ ಹಾಲ್ ವಿಚಾರವಾಗಿ ಪ್ರತಿಭಟನೆ ನಡೆಯುತ್ತಿತ್ತು. ಆ ವೇಳೆ, ಬಿಜೆಪಿ ಸುಮೋಟೋ ನಿರ್ಧಾರ ಮಾಡಿ, ಮೇಲ್ಸೇತುವೆಗೆ ವೀರ್ ಸಾವರ್ಕರ್ ಹೆಸರು ಅಂತಿಮಗೊಳಿಸಿದೆ. ಆಡಳಿತದಲ್ಲಿದ್ರೂ ಈ ರೀತಿ ಕದ್ದುಮುಚ್ಚಿ ನಾಮಕರಣ ಮಾಡುವ ಅಗತ್ಯ ಇಲ್ಲ. ಮತ್ತೆ ಈ ವಿಚಾರ ಕೌನ್ಸಿಲ್ನಲ್ಲಿ ಚರ್ಚೆಯಾಗಲಿ ಎಂದು ಬಿಬಿಎಂಪಿ ವಿಪಕ್ಷ ನಾಯಕ ಅಬ್ದುಲ್ ವಾಜಿದ್ ಒತ್ತಾಯಿಸಿದರು.
ಸದ್ಯ ಯಲಹಂಕ ಮೇಲ್ಸೇತುವೆ ಉದ್ಘಾಟನಾ ಸಮಾರಂಭ ಮುಂದೂಡಿಕೆಯಾಗಿದೆ.