ಕರ್ನಾಟಕ

karnataka

ETV Bharat / state

ಬಿಬಿಎಂಪಿ ವ್ಯಾಪ್ತಿಯ ನಾಯಿಗಳಿಗೆ ಎಬಿಸಿ ಚಿಕಿತ್ಸೆ... ರೇಬಿಸ್​​​ ಚುಚ್ಚುಮದ್ದು ಫ್ರೀ - ರೇಬಿಸ್ ಚುಚ್ಚುಮದ್ದು ನೀಡಲು ಹತ್ತು ಕೋಟಿ ರೂಪಾಯಿ ವೆಚ್ಚ

ಬಿಬಿಎಂಪಿ ವ್ಯಾಪ್ತಿಯ ನಾಯಿಗಳಿಗೆ ಎಬಿಸಿ ಚಿಕಿತ್ಸೆ ಹಾಗೂ ರೇಬಿಸ್ ಚುಚ್ಚುಮದ್ದು ನೀಡಲು ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಕೆನಲ್ ನಿರ್ಮಾಣಕ್ಕೆ ಚರ್ಚಿಸಲಾಗಿದೆ.

ಚುಚ್ಚುಮದ್ದು ಫ್ರೀ
ಚುಚ್ಚುಮದ್ದು ಫ್ರೀ

By

Published : Feb 18, 2020, 11:05 PM IST

ಬೆಂಗಳೂರು:ವರ್ಷದ ಆರಂಭದ ಎರಡು ತಿಂಗಳಲ್ಲೇ ಪಾಲಿಕೆ ವ್ಯಾಪ್ತಿಯಲ್ಲಿ ರೇಬಿಸ್​ಗೆ ತುತ್ತಾಗಿ ಇಬ್ಬರು ಮೃತಪಟ್ಟಿದ್ದು, ಬಿಬಿಎಂಪಿ ಕೊನೆಗೂ ಎಚ್ಚೆತ್ತುಕೊಂಡಿದೆ. ಬಿಬಿಎಂಪಿಯ 85 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆರು ರೆಫೆರಲ್ ಆಸ್ಪತ್ರೆಗಳಲ್ಲಿ ಉಚಿತವಾಗಿ ರೇಬಿಸ್ ಚುಚ್ಚುಮದ್ದು ನೀಡಲಾಗುತ್ತದೆ.

ಈ ಬಗ್ಗೆ ಮೇಯರ್ ಗೌತಮ್ ಕುಮಾರ್ ಮಾತನಾಡಿ, ಬಿಬಿಎಂಪಿಯ 85 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 6 ರೆಫರಲ್ ಆಸ್ಪತ್ರೆಗಳಲ್ಲಿ ಉಚಿತವಾಗಿ ರೇಬಿಸ್ ಚುಚ್ಚುಮದ್ದು ನೀಡಲಾಗುತ್ತದೆ. ಜನರಿಗೆ ತಲುಪಿಸುವಲ್ಲಿ ಇದ್ದ ಕೊರತೆಯನ್ನು ನೀಗಿಸಲಾಗುವುದು. ಮುಖ್ಯ ಆರೋಗ್ಯಾಧಿಕಾರಿ ಬಳಿ ಸಭೆ ನಡೆಸಲಾಗಿದೆ. ಜನಜಾಗೃತಿ ಹಾಗೂ ಆನ್​​ಲೈನ್ ಪ್ರಚಾರ ನಡೆಸಲಾಗುವುದು ಎಂದರು.

ಮಾದ್ಯಮಗಳೊಂದಿಗೆ ಮಾತನಾಡಿದ ಮೇಯರ್​

ಹತ್ತು ಕೋಟಿ ವೆಚ್ಚದಲ್ಲಿ ಎರಡು ಕೆನಲ್ ನಿರ್ಮಾಣ

ಬಿಬಿಎಂಪಿ ವ್ಯಾಪ್ತಿಯ ನಾಯಿಗಳಿಗೆ ಎಬಿಸಿ ಚಿಕಿತ್ಸೆ ಹಾಗೂ ರೇಬಿಸ್ ಚುಚ್ಚುಮದ್ದು ನೀಡಲು ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಕೆನಲ್ ನಿರ್ಮಾಣಕ್ಕೆ ಚರ್ಚಿಸಲಾಗಿದೆ. ಮುಂದಿನ ಬಜೆಟ್​​ನಲ್ಲಿ ಹತ್ತು ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದು ಆರೋಗ್ಯ ಸ್ಥಾಯಿ‌ ಸಮಿತಿ ಅಧ್ಯಕ್ಷ ಮಂಜುನಾಥ್ ರಾಜು ತಿಳಿಸಿದ್ದಾರೆ.

ಮುಂದಿನ ಬಜೆಟ್​ನಲ್ಲಿ ಹತ್ತು ಕೋಟಿ ರೂ. ವೆಚ್ಚದಲ್ಲಿ ಎರಡು ಕೆನಲ್ ನಿರ್ಮಾಣಕ್ಕೆ ಪ್ರಸ್ತಾವನೆ ಇದೆ. ಇದನ್ನು ನಿರ್ಮಾಣ ಮಾಡಲಾಗುವುದು. ಆ ಮೂಲಕ ನಾಯಿಗಳ ಹಾವಳಿಗೆ ತಡೆ ನೀಡಲು ಎಬಿಸಿ ಚಿಕಿತ್ಸೆ ಹಾಗೂ ರೇಬಿಸ್ ನೀಡಲಾಗುವುದು ಎಂದರು.

ಸರ್ಕಾರದ 55, ಬಿಬಿಎಂಪಿಯ 85 ಒಟ್ಟು 140 ಆರೋಗ್ಯ ಕೇಂದ್ರಗಳಲ್ಲೂ ರೇಬಿಸ್ ಲಸಿಕೆ ಹಾಕಿಸಲಾಗುವುದು ಎಂದು ತಿಳಿಸಿದರು.

For All Latest Updates

ABOUT THE AUTHOR

...view details