ಕರ್ನಾಟಕ

karnataka

ETV Bharat / state

ಕುಕ್ಕರ್ ಸ್ಫೋಟ ಸಂಬಂಧ ಡಿಕೆಶಿ ಹೇಳಿಕೆ ಖಂಡನೀಯ: ಆರಗ ಜ್ಞಾನೇಂದ್ರ ಗರಂ - ದೇಶದ ಆಂತರಿಕ ಭದ್ರತೆ

ಕುಕ್ಕರ್ ಸ್ಫೋಟ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆಯನ್ನು ಮಾಧ್ಯಮದಲ್ಲಿ ನೋಡಿ ತುಂಬಾ ನೋವಾಯಿತು. ಜವಾಬ್ದಾರಿ ಸ್ಥಾನದಲ್ಲಿ ಇರುವ ವ್ಯಕ್ತಿಗಳು ಆಡುವ ಮಾತಲ್ಲ ಇದು. ಇದನ್ನು ನಾನು ಖಂಡಿಸುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವಾಗ್ದಾಳಿ ನಡೆಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ

By

Published : Dec 15, 2022, 6:02 PM IST

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು

ಬೆಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಸಂಬಂಧದ ಡಿಕೆಶಿ ಹೇಳಿಕೆಯನ್ನು ಖಂಡಿಸುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವಾಗ್ದಾಳಿ ನಡೆಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಕುಕ್ಕರ್ ಸ್ಫೋಟ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆಯನ್ನು ಮಾಧ್ಯಮದಲ್ಲಿ ನೋಡಿ ತುಂಬಾ ನೋವಾಯಿತು.

ಜವಾಬ್ದಾರಿ ಸ್ಥಾನದಲ್ಲಿ ಇರುವ ವ್ಯಕ್ತಿಗಳು ಆಡುವ ಮಾತಲ್ಲ ಇದು. ಇದನ್ನು ನಾನು ಖಂಡಿಸುತ್ತೇನೆ. ದೇಶದ ಆಂತರಿಕ ಭದ್ರತೆಯ ವಿಚಾರ ಇದು. ನಾವೆಲ್ಲಾ ರಾಜಕಾರಣವನ್ನು ಮೀರಿ ಇದರ ಬಗ್ಗೆ ಹೇಳಿಕೆ ನೀಡಬೇಕು ಎಂದರು. ಡಿ ಕೆ ಶಿವಕುಮಾರ್ ಅವರ ಪಕ್ಷದ ಸರ್ಕಾರ ಇದ್ದಾಗ ದೇಶದ ಮೂಲೆ ಮೂಲೆಯಲ್ಲಿ ದೀಪಾವಳಿ ಪಟಾಕಿಯಂತೆ ಬಾಂಬ್ ಸ್ಫೋಟಗಳು ನಡೆಯುತ್ತಿದ್ದವು.

ನರೇಂದ್ರ ಮೋದಿ ಸರ್ಕಾರ ಬಂದ ಬಳಿಕ ಪೊಲೀಸ್ ಇಲಾಖೆಯನ್ನು ಭದ್ರಪಡಿಸಲಾಯಿತು ಹಾಗೂ ಭಯೋತ್ಪಾದನಾ ಮುಕ್ತ ದೇಶ ವನ್ನಾಗಿ ಮಾಡಲು ಪ್ರಯತ್ನ ಪಡಲಾಯಿತು. ಇಂತಹ ಸಂದರ್ಭಗಳಲ್ಲಿ ಡಿ ಕೆ ಶಿವಕುಮಾರ್ ಅವರಂತವರು ಈ‌ ರೀತಿ ಮಾತನಾಡುತ್ತಿದ್ದರೆ ಪೊಲೀಸರ ನೈತಿಕತೆ ಕುಗ್ಗಿಸಿದಂತೆ ಎಂದು ಕಿಡಿಕಾರಿದರು.

ಕಾನೂನು ಪ್ರಕಾರ ಕ್ರಮ: ಅಲ್ಪಸಂಖ್ಯಾತರ ವೋಟ್​ಗಾಗಿ ಓಲೈಕೆ ರಾಜಕಾರಣವನ್ನು ಡಿ ಕೆ ಶಿವಕುಮಾರ್ ಮಾಡುತ್ತಿದ್ದಾರೆ. ಓಟರ್ ಲಿಸ್ಟ್ ಪ್ರಕರಣಕ್ಕೂ ಇದಕ್ಕೂ ಯಾವ ಸಂಬಂಧವೂ ಇಲ್ಲ. ಯಾವುದನ್ನೂ ರಾಜ್ಯ ಸರ್ಕಾರ ಮುಚ್ಚಿಟ್ಟಿಲ್ಲ. ಮತಪಟ್ಟಿ ಅಕ್ರಮದಲ್ಲಿ ಯಾರನ್ನು ಬಂಧನ ಮಾಡಬೇಕಿತ್ತು ಅದನ್ನು ಮಾಡಿದೆ. ಕಾನೂನು ಪ್ರಕಾರ ಕ್ರಮ ಕೈಗೊಂಡಿದೆ ಎಂದರು.

ಯುಎಪಿಎ ಅಡಿ ಬಂಧನ:ಆರೋಪಿ ಶಾರೀಕ್ ಈ ಹಿಂದೆ ಯುಎಪಿಎ ಅಡಿ ಬಂಧನ ಆಗಿದ್ದ ವ್ಯಕ್ತಿ. ಆತನ ಎಲ್ಲ ಜಾತಕಗಳು ಪೊಲೀಸರಲ್ಲಿ ಇವೆ. ನ್ಯಾಯಾಲಯದಲ್ಲಿ ಬೇಲ್ ಪಡೆದುಕೊಂಡ ಬಳಿಕ ನಾಪತ್ತೆ ಆಗಿದ್ದ. ಪೊಲೀಸರು ಅವನನ್ನು ಹುಡುಕುತ್ತಿದ್ದರು. ಅದರ ಹಿನ್ನೆಲೆಯಲ್ಲಿ ಡಿಜಿ ಘಟನೆ ಬಳಿಕ ಟ್ವೀಟ್ ಮಾಡಿದ್ದರು. ಬೇರೆ ದಾಖಲೆಯೇ ಬೇಡ. ಡಿಕೆಶಿ ಇಂತಹ ವ್ಯಕ್ತಿಯ ಮೇಲೆ ವಕಾಲತ್ತು ವಹಿಸುತ್ತಾರೆ ಎಂದರೆ ಅವರ ರಾಜಕಾರಣಕ್ಕೆ ಏನು ಹೇಳಬೇಕು ಎಂದು ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಎನ್​ಐಎ ತನಿಖೆ ನಡೆಸುತ್ತಿದೆ: ಶಾರೀಕ್ ಆವತ್ತು ಭಯೋತ್ಪಾದಕನೇ ಈವತ್ತೂ ಭಯೋತ್ಪಾದಕನೇ. ಅದರಲ್ಲಿ ಎರಡು ಮಾತಿಲ್ಲ. ಡಿಜಿ ಟ್ವೀಟ್ ಹೇಳಿಕೆಯನ್ನು ನಾನು ಸಮರ್ಥನೆ ಮಾಡುತ್ತೇನೆ. ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಬಗ್ಗೆ ಇವಾಗ ಎನ್​ಐಎ ತನಿಖೆ ನಡೆಸುತ್ತಿದೆ. ಎಲ್ಲವೂ ಹೊರಗಡೆ ಬರುತ್ತಿದೆ. ಪುಲ್ವಾಮಾ, ಮುಂಬೈ ದಾಳಿಗಳು ಎಲ್ಲವೂ ಕಾಂಗ್ರೆಸ್ ಕೂಸುಗಳೇ. ಇವರೇ ಈ ದೇಶದಲ್ಲಿ ಈ ರೀತಿಯನ್ನು‌ ಹುಟ್ಟು ಹಾಕಿದ್ದು. ಆದರೆ, ಬಿಜೆಪಿ ಕೇಂದ್ರ ಸರ್ಕಾರ ಅದನ್ನು ನಿರ್ನಾಮ ಮಾಡುತ್ತಿದೆ. ಅದನ್ನು ಡಿಕೆಶಿಗೆ ಸಹಿಸಲು ಆಗುತ್ತಿಲ್ವಾ? ಎಂದು ಪ್ರಶ್ನಿಸಿದರು.

ದೇಶದ ಆಂತರಿಕ ಭದ್ರತೆ ಬಗ್ಗೆ ಯೋಚಿಸಬೇಕು:ಉಗ್ರರು ಮಂಗಳೂರಿನ ಜನನಿಬಿಡ ಪ್ರದೇಶದಲ್ಲಿ ಇಟ್ಟಿದ್ದರೆ ಏನು ಆಗುತ್ತಿತ್ತು. ಅವರು ಬಾಂಬ್ ಟ್ರಯಲ್ ನೋಡಿದ್ದಾನೆ. ಡಿಕೆಶಿ ಇಂತಹ ಹೇಳಿಕೆ ಖಂಡನೀಯ. ಓಟಿಗಾಗಿ ಓಲೈಕೆ ರಾಜಕೀಯ ಬಿಟ್ಟು ದೇಶದ ಆಂತರಿಕ ಭದ್ರತೆಯ ಬಗ್ಗೆ ಯೋಚನೆ ಮಾಡಬೇಕು ಎಂದರು.

ಓದಿ:ಕುಕ್ಕರ್ ಬ್ಲಾಸ್ಟ್ ಮೂಲಕ ಬಿಜೆಪಿಯಿಂದ ಮತದಾರರ ಮಾಹಿತಿ ಕಳ್ಳತನ ವಿಷಯ ಡೈವರ್ಟ್: ಡಿಕೆಶಿ

ABOUT THE AUTHOR

...view details