ಬೆಂಗಳೂರು:ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ಕೇಳಿಬರುತ್ತಿರುವ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರವೇ ಹುದ್ದೆಯನ್ನು ವಜಾಗೊಳಿಸಿ ಬಂಧಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.
ಗುರುವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಾರ್ಟಿ ರಾಜ್ಯ ವಕ್ತಾರ ಹಾಗೂ ಮಾಜಿ ಕೆಎಎಸ್ ಅಧಿಕಾರಿ ಕೆ. ಮಥಾಯ್, “ಕರಕುಶಲ ನಿಗಮದ ಕೇಂದ್ರ ಕಚೇರಿಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳ ರೆಕಾರ್ಡಿಂಗ್ ಇರುವ ಡಿವಿಆರ್‌ನಲ್ಲಿ ಮಾಹಿತಿ ತಿರುಚಿರುವ ಆರೋಪವು ರಾಘವೇಂದ್ರ ಶೆಟ್ಟಿ ಮೇಲಿದೆ.
25 ಕೋಟಿ ರೂ. ಅಕ್ರಮ ನಡೆಸಿ ಪ್ರಧಾನ ವ್ಯವಸ್ಥಾಪಕ ಹುದ್ದೆಯಿಂದ ವಜಾಗೊಂಡಿದ್ದ ಕಿಶೋರ್ ಕುಮಾರ್ ಎಂಬುವವರನ್ನು ಮರಳಿ ಅದೇ ಹುದ್ದೆಗೆ ನೇಮಕ ಮಾಡಲು ವಿಫಲ ಯತ್ನ ನಡೆಸಿದ್ದಾರೆ. ಇದಕ್ಕಾಗಿ ರೂಪಾಯಿ 5 ಕೋಟಿ ಹಣದ ವ್ಯವಹಾರದ ಮಾತುಕತೆ ನಡೆದಿರುವ ಮಾಹಿತಿಯಿದೆ. ಕಚೇರಿ ಸಿಬ್ಬಂದಿಯ ಹಾಜರಾತಿ ವಿವರ ಒದಗಿಸದೇ ಮಾಸಿಕ ₹5 ಲಕ್ಷದಷ್ಟು ವೇತನ ಮತ್ತು ಇತರ ವೆಚ್ಚ ಪಡೆಯುತ್ತಿದ್ದಾರೆ. ನಿಗಮದ ಅಧಿಕಾರಿಗಳಿಂದ ಬಲವಂತವಾಗಿ ಊಟ ತರಿಸಿಕೊಂಡು ಬಳಸಿದ್ದಾರೆ. ಮಹಿಳಾ ಆಪ್ತ ಸಹಾಯಕಿಯೇ ಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಲ್ಲದೇ, ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪ ಕೂಡ ಮೇಲಿದೆ” ಎಂದು ಹೇಳಿದರು.
‘ಬೇಳೂರು ರಾಘವೇಂದ್ರ ಶೆಟ್ಟಿರವರ ಆಪ್ತ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಶ್ರೀಕಾಂತ ಚೌರಿ ಎಂಬಾತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಬಂಧಿತನಾಗಿದ್ದಾನೆ. ರಾಘವೇಂದ್ರ ಶೆಟ್ಟಿ ಕೂಡ ಈ ಅಕ್ರಮದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದ್ದು, ಈ ಬಗ್ಗೆಯೂ ತನಿಖೆ ನಡೆಸಬೇಕು. ನಿಗಮದ ಬೋರ್ಡ್ ಮೀಟಿಂಗ್‌ಗಳ ಸಭೆಗಳಲ್ಲಿ ಜೋರಾಗಿ ಕೂಗುತ್ತಾ ಅಶಾಂತಿ ವಾತಾವರಣ ಉಂಟು ಮಾಡಿದ್ದರು.