ಕರ್ನಾಟಕ

karnataka

ETV Bharat / state

ರಸ್ತೆ ಗುಂಡಿಗೆ ಮತ್ತೆರಡು ಬಲಿ: ಪ್ರತಿಭಟನೆ ನಡೆಸಿದ ಆಪ್​ ಮುಖಂಡರು ಪೊಲೀಸ್‌ ವಶಕ್ಕೆ

ರಸ್ತೆ ಅಪಘಾತಕ್ಕೆ ಯುವಕರಿಬ್ಬರು ಸಾವನ್ನಪ್ಪಿದ್ದನ್ನು ಖಂಡಿಸಿ ಆಪ್​ ಕಾರ್ಯಕರ್ತರು ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸಿದರು.

aap-protest-on-potholes-in-bengaluru
ರಸ್ತೆ ಗುಂಡಿಗೆ ಮತ್ತೆರಡು ಬಲಿ: ಪ್ರತಿಭಟನೆ ನಡೆಸಿದ ಆಪ್​ ಮುಖಂಡರು ವಶಕ್ಕೆ

By

Published : Oct 31, 2022, 8:46 PM IST

ಬೆಂಗಳೂರು: ಅಟ್ಟೂರು ಬಡಾವಣೆ ಹಾಗೂ ರಾಜಾನುಕುಂಟೆಯಲ್ಲಿ ರಸ್ತೆ ಅಪಘಾತಕ್ಕೆ ಯುವಕರಿಬ್ಬರು ಸಾವನ್ನಪ್ಪಿದ್ದನ್ನು ಖಂಡಿಸಿ ಆಮ್‌ ಆದ್ಮಿ ಪಾರ್ಟಿ ಕಾರ್ಯಕರ್ತರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು. ಬಿಬಿಎಂಪಿ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಲು ಯೋಜನೆ ರೂಪಿಸಿದ್ದ ಕಾರ್ಯಕರ್ತರನ್ನು ಪೊಲೀಸರು ಮಾರ್ಗಮಧ್ಯದಲ್ಲೇ ತಡೆದು ವಶಕ್ಕೆ ಪಡೆದುಕೊಂಡರು.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಎಎಪಿ ಬೆಂಗಳೂರು ಅಧ್ಯಕ್ಷ ಮೋಹನ್‌ ದಾಸರಿ, ನಗರದಲ್ಲಿ ರಸ್ತೆಗುಂಡಿಗೆ ಜನರು ಸಾಯುತ್ತಿರುವುದು ಕೇವಲ ಸಾವಲ್ಲ. ಇದು ಸರ್ಕಾರಿ ಪ್ರಾಯೋಜಿತ ಕಗ್ಗೊಲೆ. ರಸ್ತೆಗುಂಡಿಗಳನ್ನು ಮುಚ್ಚಿಸುವ ಯೋಗ್ಯತೆಯಿಲ್ಲದ ನಿರ್ಲಜ್ಜ ಸರ್ಕಾರವು ಅಮಾಯಕ ಜೀವಗಳನ್ನು ಈ ರೀತಿ ಕೊಲೆ ಮಾಡಿ ವಿಕೃತಿ ಮೆರೆಯುತ್ತಿದೆ. ಬಿಬಿಎಂಪಿ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವುದಕ್ಕೆ ಬೆರಳೆಣಿಕೆಯ ದಿನಗಳಿದ್ದಾಗ ಕಳಪೆ ಕಾಮಗಾರಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚಿ ಮತದಾರರನ್ನು ವಂಚಿಸಲು ಸರ್ಕಾರ ನಿರ್ಧರಿಸಿದೆ ಎಂದು ದೂರಿದರು.

ಇದನ್ನೂ ಓದಿ :ತಳವಾರ, ಪರಿವಾರ ಎಸ್​ಟಿಗೆ ಸೇರಿಸುವುದು ಅನ್ಯಾಯ ಮಾಡಿದಂತೆ: ವಾಲ್ಮೀಕಿ ಮುಖಂಡರ ಆಕ್ರೋಶ

ABOUT THE AUTHOR

...view details