ಕರ್ನಾಟಕ

karnataka

ETV Bharat / state

'ಹಿಂದೆ ಲಾಭದಲ್ಲಿದ್ದ KSRTC ಲೂಟಿ ಹೊಡೆದ ಆರ್‌. ಅಶೋಕ್ ಈಗ ಒಬ್ಬ ಗೊಡ್ಡು ಸಚಿವ' - Minister R. Ashok

ಮೊದಲ ಬಾರಿ ಬಿಜೆಪಿ ಸರ್ಕಾರ ರಚಿಸಿದಾಗ ಸಾರಿಗೆ ಸಚಿವರಾಗಿ ಆರ್.ಅಶೋಕ್ ಲಾಭದಲ್ಲಿದ್ದ ಕೆಎಸ್‌ಆರ್‌ಟಿಸಿ ಸಂಸ್ಥೆಯನ್ನು ಲೂಟಿ ಹೊಡೆದರು. ಭೂ ಕಳಬಳಿಕೆ ಹಿನ್ನೆಲೆ 13 ಸಾವಿರ ಪ್ರಕರಣಗಳು ಹೈಕೋರ್ಟ್​ನಲ್ಲಿ ಬಾಕಿ ಇರುವಾಗಲೇ ಸರ್ಕಾರದ ಮೇಲೆ ಒತ್ತಡ ತಂದು 79ಎ, ಬಿ ಕಾಯ್ದೆ ತಿದ್ದುಪಡಿ ಮಾಡಿಸಿ ಭೂಗಳ್ಳರ ರಕ್ಷಣೆಗೆ ನಿಂತಿದ್ದಾರೆ..

dsd
ಬೆಂಗಳೂರಿನಲ್ಲಿ ಆಪ್ ಪ್ರತಿಭಟನೆ

By

Published : Feb 1, 2021, 3:18 PM IST

ಬೆಂಗಳೂರು :ರಾಜ್ಯದಲ್ಲಿ ಸಾವಿರಾರು ಎಕರೆ ಕಂದಾಯ ಭೂಮಿ ಪ್ರಭಾವಿಗಳ ಪಾಲಾಗುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಆರ್.ಅಶೋಕ್ ಗೊಡ್ಡು ಸಚಿವ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಶೋಕ್​ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಮೊದಲ ಬಾರಿ ಬಿಜೆಪಿ ಸರ್ಕಾರ ರಚಿಸಿದಾಗ ಸಾರಿಗೆ ಸಚಿವರಾಗಿ ಆರ್.ಅಶೋಕ್ ಲಾಭದಲ್ಲಿದ್ದ ಕೆಎಸ್‌ಆರ್‌ಟಿಸಿ ಸಂಸ್ಥೆಯನ್ನು ಲೂಟಿ ಹೊಡೆದರು.

ಬೆಂಗಳೂರಿನಲ್ಲಿ ಆಪ್ ಪ್ರತಿಭಟನೆ

ಭೂ ಕಳಬಳಿಕೆ ಹಿನ್ನೆಲೆ 13 ಸಾವಿರ ಪ್ರಕರಣಗಳು ಹೈಕೋರ್ಟ್​ನಲ್ಲಿ ಬಾಕಿ ಇರುವಾಗಲೇ ಸರ್ಕಾರದ ಮೇಲೆ ಒತ್ತಡ ತಂದು 79ಎ, ಬಿ ಕಾಯ್ದೆ ತಿದ್ದುಪಡಿ ಮಾಡಿಸಿ ಭೂಗಳ್ಳರ ರಕ್ಷಣೆಗೆ ನಿಂತಿದ್ದಾರೆ.

ಸಚಿವರ ಆಪ್ತ ಸಹಾಯಕ ಸರ್ಕಾರಿ ಅಧಿಕಾರಿಯ ಬಳಿ ಲಂಚ ಕೇಳಿರುವ ಆರೋಪದ ನೈತಿಕ ಹೊಣೆ ಹೊತ್ತು ಈ ಕೂಡಲೇ ರಾಜಿನಾಮೆ ನೀಡಬೇಕು. ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದ ಬಿಜೆಪಿ ರಾಜ್ಯದ ಅಭ್ಯುದಯದ ಬಗ್ಗೆ ಯೋಚನೆ ಮಾಡುವುದು ಬಿಟ್ಟು ಕೇವಲ ಹಗರಣದಲ್ಲೇ ಕಾಲ ಕಳೆಯುತ್ತಿದೆ.

ಸಚಿವ ಸಂಪುಟದ ಸಹೋದ್ಯೋಗಿಗಳ ಹಗರಣಗಳ ಬಗ್ಗೆ ಕಿಂಚಿತ್ತೂ ಮಾತನಾಡದ ಯಡಿಯೂರಪ್ಪ, ರಾಜ್ಯ ಕಂಡ ಅಸಮರ್ಥ, ಅತಿ ಭ್ರಷ್ಟ ಮುಖ್ಯಮಂತ್ರಿ ಎಂದು ಆಕ್ರೋಶ ವ್ಯಕ್ತಪಡಸಿದ್ದಾರೆ.

ABOUT THE AUTHOR

...view details