ಕರ್ನಾಟಕ

karnataka

ETV Bharat / state

ರೈತರ ಹೆಸರೇಳಿಕೊಂಡು ಹಾಲಿನ ದರ ಹೆಚ್ಚಳ ಮಾಡುವ ಕೆಎಂಎಫ್ ಚಿಂತನೆಗೆ ಆಮ್ ಆದ್ಮಿ ಪಕ್ಷ ಕಿಡಿ - ಹಾಲಿನ ಸಂಸ್ಕರಣೆ

ಹಾಲಿನ ಸಂಸ್ಕರಣೆಗೆ ಕಡಿಮೆ ಹಣ ಖರ್ಚು ಮಾಡಿ ಪುಕ್ಕಟೆಯಾಗಿ ಲಾಭ ಮಾಡುತ್ತಿರುವ ಕೆಎಂಎಫ್ ಯಾವ ಕಾರಣಕ್ಕೆ ಬೆಲೆ ಏರಿಕೆ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿದೆ ಎಂದು ತಿಳಿಸಬೇಕು. ಕೆಎಂಎಫ್ ಚುನಾವಣೆಗೆಂದೇ ಕೋಟಿ ಕೋಟಿ ಖರ್ಚು ಮಾಡುತ್ತಿರುವ ಪುಡಾರಿಗಳ ಹಸ್ತಕ್ಷೇಪದಿಂದ ಗ್ರಾಹಕ ಮತ್ತು ರೈತರಿಗೆ ನಿಜವಾದ ನ್ಯಾಯಯುತ ಬೆಲೆ ಸಿಗುತ್ತಿಲ್ಲ ಎಂದು ಆರೋಪಿಸಿದರು.

ಹಾಲಿನ ದರ ಹೆಚ್ಚಳ ಮಾಡಲು ಕೆಎಂಎಫ್ ಚಿಂತನೆ
ಹಾಲಿನ ದರ ಹೆಚ್ಚಳ ಮಾಡಲು ಕೆಎಂಎಫ್ ಚಿಂತನೆ

By

Published : Feb 6, 2021, 4:32 AM IST

ಬೆಂಗಳೂರು:ಲಾಕ್‌ಡೌನ್ ಸಂದರ್ಭದಲ್ಲಿ ರೈತರಿಂದ ಖರೀದಿಸುತ್ತಿದ್ದ ಹಾಲಿನ ದರವನ್ನು ಇಳಿಸಲಾಗಿತ್ತು. ಈಗ ಮತ್ತೆ ಖರೀದಿ ದರ ಹೆಚ್ಚಳ ಮಾಡಿ ರೈತರಿಗೆ ಉಪಯೋಗವಾಗುವಂತೆ ಮಾಡಿರುವುದು ಸ್ವಾಗತಾರ್ಹ ನಿರ್ಧಾರ. ಆದರೆ ಮಾರಾಟ ದರವನ್ನು 5 ರೂಪಾಯಿ ಹೆಚ್ಚಳ ಮಾಡಿ ಗ್ರಾಹಕರ ಮೇಲೆ ಹೊರೆ ಹಾಕಲು ಹೊರಟಿರುವ ಕೆಎಂಎಫ್ ನಿರ್ಧಾರವನ್ನು ಆಮ್ ಆದ್ಮಿ ಪಕ್ಷ ಖಂಡಿಸುತ್ತದೆ. ಈ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಬಾರದು ಎಂದು ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.

ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ರೈತರಿಗೆ ಸಿಗುತ್ತಿರುವ ಹಾಲಿನ ಖರೀದಿ ದರ ಸಾಕಷ್ಟು ಕಡಿಮೆ ಇದೆ. ಲೀಟರ್ ಹಾಲಿಗೆ 25 ರಿಂದ 27 ರೂಪಾಯಿ ಸಿಕ್ಕರೆ ಹೆಚ್ಚು, ರೈತರಿಂದ ಇಷ್ಟು ಕಡಿಮೆ ದರಕ್ಕೆ ಹಾಲನ್ನು ಖರೀದಿಸಿ ಗ್ರಾಹಕರಿಗೆ 38 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಈಗ 5 ರೂಪಾಯಿ ಹೆಚ್ಚಳ ಮಾಡಿದರೆ 43 ರೂಪಾಯಿ ಆಗುತ್ತದೆ. ಇದರಿಂದ ಹಾಲು ಒಕ್ಕೂಟಗಳು 16 ರೂಪಾಯಿ ನೇರ ಲಾಭ ಆದಂತಾಗುತ್ತದೆ. ಇದನ್ನು ನೋಡಿದರೆ ರೈತರಿಗೆ ಕಡಿಮೆ ಪ್ರಮಾಣದ ಲಾಭಾಂಶ ಹಣ ನೀಡಲಾಗುತ್ತಿದೆ. ರೈತರ ಹೆಸರಿನಲ್ಲಿ ಹಣ ನುಂಗಲಾಗುತ್ತಿದೆ ಎಂದು ದೂರಿದರು.

ಹಾಲಿನ ದರ ಹೆಚ್ಚಳ ಮಾಡುವ ಕೆಎಂಎಫ್ ಚಿಂತನೆಗೆ ಆಮ್ ಆದ್ಮಿ ಪಕ್ಷ ಅಸಮಧಾನ

ಹಾಲಿನ ಸಂಸ್ಕರಣೆಗೆ ಕಡಿಮೆ ಹಣ ಖರ್ಚು ಮಾಡಿ ಪುಕ್ಕಟೆಯಾಗಿ ಲಾಭ ಮಾಡುತ್ತಿರುವ ಕೆಎಂಎಫ್ ಯಾವ ಕಾರಣಕ್ಕೆ ಬೆಲೆ ಏರಿಕೆ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿದೆ ಎಂದು ತಿಳಿಸಬೇಕು. ಕೆಎಂಎಫ್ ಚುನಾವಣೆಗೆಂದೇ ಕೋಟಿ ಕೋಟಿ ಖರ್ಚು ಮಾಡುತ್ತಿರುವ ಪುಡಾರಿಗಳ ಹಸ್ತಕ್ಷೇಪದಿಂದ ಗ್ರಾಹಕ ಮತ್ತು ರೈತರಿಗೆ ನಿಜವಾದ ನ್ಯಾಯಯುತ ಬೆಲೆ ಸಿಗುತ್ತಿಲ್ಲ ಎಂದು ಆರೋಪಿಸಿದರು.

2016-17 ರಲ್ಲೇ ಸುಮಾರು 11 ಸಾವಿರ ಕೋಟಿ ವಹಿವಾಟು ನಡೆಸಿ 121 ಕೋಟಿ ಲಾಭ ಮಾಡಿದ್ದ ಕೆಎಂಎಫ್‌ನ ಆದಾಯ ಪ್ರಸ್ತುತ ವರ್ಷ ಇನ್ನೂ ಹೆಚ್ಚಾಗಿದೆ. ಆದರೂ ಗ್ರಾಹಕರಿಗೆ ಹಾಗೂ ರೈತರಿಗೆ ನ್ಯಾಯಯುತ ಬೆಲೆ ನೀಡದೆ ಮೋಸ ಮಾಡುತ್ತಿದೆ ಎಂದರು.

ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಮಾತನಾಡಿ, ಸಂಸ್ಕರಣೆ, ಆಡಳಿತಾತ್ಮಕ ಹಾಗೂ ಇತರೇ ಖರ್ಚಿಗೆಂದು 5 ಸಾವಿರ ಕೋಟಿಯಷ್ಟು ವೆಚ್ಚ ಮಾಡುತ್ತಿರುವುದು ನಿಜಕ್ಕೂ ಆಶ್ಚರ್ಯ ತರಿಸುವಂತಿದೆ. ಹಾಲಿನ ದರ ಖರೀದಿ ಹೆಚ್ಚಳ ಎನ್ನುವುದು ಕೇವಲ ಕಣ್ಣೊರೆಸುವ ತಂತ್ರ. ಒಂದು ಕಡೆ ಪಶು ಆಹಾರದ ದರವನ್ನು ಹೆಚ್ಚಳ ಮಾಡಿ, ಒಂದು ಕಡೆ ಕೊಡುವುದು, ಇನ್ನೊಂದು ಕಡೆ ಕಿತ್ತುಕೊಳ್ಳುವ ಆಟವಾಡುತ್ತಿದೆ. ಇದು ಸರ್ಕಾರದ ಜನ ಮತ್ತು ರೈತ ವಿರೋಧಿ ನೀತಿಗೆ ಸಾಕ್ಷಿ ಎಂದು ಹೇಳಿದರು. ಹಾಲು ಒಕ್ಕೂಟಗಳಲ್ಲಿ ಆಡಳಿತಾತ್ಮಕ ವೆಚ್ಚ ತಗ್ಗಿಸಿ ಮತ್ತು ಸೋರಿಕೆಯನ್ನು ತಡೆಗಟ್ಟಿ ಹಾಲು ಉತ್ಪಾದಕರಿಗೆ ಹೆಚ್ಚಿನ ನೆರವು ನೀಡಬೇಕು, ಈ ಕೂಡಲೇ ಕಳೆದ 10 ವರ್ಷಗಳ ಸಂಪೂರ್ಣ ಲೆಕ್ಕ ಪರಿಶೋಧನೆ ನಡೆಸಬೇಕು ಎಂದು ಆಗ್ರಹಿಸಿದರು.

ABOUT THE AUTHOR

...view details