ಕರ್ನಾಟಕ

karnataka

ETV Bharat / state

ದೆಹಲಿ ಮಾದರಿಯ ಗ್ಯಾರಂಟಿ ಈಡೇರಿಸಲು ನಮ್ಮ ಸಹಕಾರ ಇದ್ದೇ ಇದೆ... ಇಲ್ಲದಿದ್ದರೆ ಹೋರಾಟ: ಬ್ರಿಜೇಶ್ ಕಾಳಪ್ಪ

ಕಾಂಗ್ರೆಸ್​ ಪಕ್ಷವು ಇನ್ನು ಒಂದು ತಿಂಗಳಿನಲ್ಲಿ ತಾನು ನೀಡಿರುವ ಗ್ಯಾರಂಟಿಗಳನ್ನು ಈಡೇರಿಸದೇ ಇದ್ದರೆ ಆಮ್ ಆದ್ಮಿ ಪಕ್ಷವು ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ರಾಜ್ಯ ಆಪ್​ ಸಂವಹನ ಮುಖ್ಯಸ್ಥ ಬ್ರಿಜೇಶ್ ಕಾಳಪ್ಪ ಅವರು ಎಚ್ಚರಿಸಿದ್ದಾರೆ.

ರಾಜ್ಯ ಆಪ್​ ಸಂವಹನ ಮುಖ್ಯಸ್ಥ ಬ್ರಿಜೇಶ್ ಕಾಳಪ್ಪ
ರಾಜ್ಯ ಆಪ್​ ಸಂವಹನ ಮುಖ್ಯಸ್ಥ ಬ್ರಿಜೇಶ್ ಕಾಳಪ್ಪ

By

Published : May 26, 2023, 8:04 PM IST

ರಾಜ್ಯ ಆಪ್​ ಸಂವಹನ ಮುಖ್ಯಸ್ಥ ಬ್ರಿಜೇಶ್ ಕಾಳಪ್ಪ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಆಶ್ವಾಸನೆಗಳು ಮತ್ತು ಗ್ಯಾರಂಟಿಗಳು ಆಮ್ ಆದ್ಮಿ ಪಕ್ಷದ ಶೇ 90 ನಕಲು ಆಗಿವೆ. ಇವುಗಳನ್ನು ರಾಜ್ಯದ ಜನತೆಗೆ ಸಂಪೂರ್ಣವಾಗಿ ತಲುಪಿಸಲು ನಾವು ಸದಾ ಸಿದ್ಧರಿದ್ದೇವೆ ಎಂದು ರಾಜ್ಯ ಆಪ್​ ಸಂವಹನ ಮುಖ್ಯಸ್ಥ ಬ್ರಿಜೇಶ್ ಕಾಳಪ್ಪ ಅವರು ತಿಳಿಸಿದ್ದಾರೆ.

ಶುಕ್ರವಾರ ಆಮ್ ಆದ್ಮಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ಈಗಾಗಲೇ ಈಡೇರಿಸಿರುವ ಈ ಎಲ್ಲ ಭರವಸೆಗಳನ್ನು ಅನಧಿಕೃತವಾಗಿ ಉನ್ನತ ಅಧಿಕಾರಿಗಳನ್ನು ಆ ರಾಜ್ಯಗಳಿಗೆ ಕಳಿಸುವುದನ್ನು ಬಿಟ್ಟು ಕಾಂಗ್ರೆಸ್ ಪಕ್ಷವು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರಿಗೆ ಪತ್ರ ಬರೆದರೆ ನಾವುಗಳು ಸಂಪೂರ್ಣವಾಗಿ ನಿಮಗೆ ತಾಂತ್ರಿಕ ಸಹಾಯ ಹಸ್ತವನ್ನು ಮಾಡುತ್ತೇವೆ ಎಂದು ತಿಳಿಸಿದರು.

ಜನತೆಯಿಂದ ಸಂಪೂರ್ಣ ತಿರಸ್ಕರಿಸಲ್ಪಟ್ಟಿರುವ ಬಿಜೆಪಿ ಇಂದು ರಾಜ್ಯದ ಜನತೆಗೆ ಪ್ರಚೋದಿಸಿ ಗಲಾಟೆ ಮಾಡಿ ಎನ್ನುವ ಮೂಲಕ ಅಶಾಂತಿಯನ್ನು ಮೂಡಿಸಲು ಯತ್ನಿಸುತ್ತಿರುವುದು ಹೇಯಕರ ಕೃತ್ಯ ಆಗಿದೆ ಎಂದು ಕುಟುಕಿದರು.

ಪೆಟ್ರೋಲ್ ಡೀಸೆಲ್ ಬೆಲೆ ಇಳಿಸುವಲ್ಲಿ ವೈಫಲ್ಯ : ರೈತರ ಆದಾಯ ದ್ವಿಗುಣ, ಸರ್ವರಿಗೂ ವಸತಿ, ವಿದೇಶಗಳಲ್ಲಿನ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೂ 15ಲಕ್ಷ, ಪ್ರತಿವರ್ಷ ಎರಡು ಕೋಟಿ ಉದ್ಯೋಗ ನೀಡಿಕೆ, ಐದು ಟ್ರಿಲಿಯನ್ ಆರ್ಥಿಕತೆ, ಬುಲೆಟ್ ಟ್ರೈನ್, ಪೆಟ್ರೋಲ್ ಡೀಸೆಲ್ ಬೆಲೆ ಇಳಿಸುವಲ್ಲಿ ವೈಫಲ್ಯ, ಬೆಲೆ ಏರಿಕೆಯಂತಹ ಯಾವುದೇ ಆಶ್ವಾಸನೆಗಳನ್ನು ಇದುವರೆಗೂ ಈಡೇರಿಸದೇ ನೈತಿಕತೆ ಇಲ್ಲದೆ ಬಿಜೆಪಿಯವರು ಏಕಾಏಕಿ ರಾಜ್ಯದ ಶಾಂತಿಗೆ ಭಂಗ ತರುವ ರೀತಿಯಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿದ್ದಾರೆ ಎಂದು ಖಂಡಿಸಿದರು.

ಕಾಂಗ್ರೆಸ್ ಪಕ್ಷವು ಕಾರ್ಯೋನ್ಮುಖವಾಗಬೇಕು : ಈ ಎಲ್ಲ ಭರವಸೆಗಳನ್ನು ಈಡೇರಿಸಲು ಆಮ್ ಆದ್ಮಿ ಪಕ್ಷದ ಪ್ರಾಮಾಣಿಕ ಪಾರದರ್ಶಕ ಆಡಳಿತ ಶೈಲಿಯಿಂದ ಮಾತ್ರ ಸಾಧ್ಯ. ಇವುಗಳನ್ನು ರೂಢಿಸಿಕೊಳ್ಳಲು ಕಾಂಗ್ರೆಸ್ ಪಕ್ಷವು ಕಾರ್ಯೋನ್ಮುಖವಾಗಬೇಕು ಎಂದು ತಿಳಿಸಿದರು.

ನಮ್ಮದು ಭ್ರಷ್ಟಾಚಾರ ರಹಿತ ರಾಜಕೀಯವಾಗಿದೆ. ಅದರಲ್ಲಿ ಎಲ್ಲವೂ ಸಾಧ್ಯ. ಹಳೆಯ ಸರ್ಕಾರ 40 ಪರ್ಸೆಂಟ್​ ಎಂದರು. ರಾಜ್ಯದಲ್ಲಿ 40 ಪರ್ಸೆಂಟ್​ ಅನ್ನು ನುಂಗಿಹಾಕಿದರೆ, ಬಜೆಟ್ ಬರುವುದೇ 3 ಲಕ್ಷ ಕೋಟಿ, ಇದರಲ್ಲಿ 1,20 ಸಾವಿರ ಕೋಟಿ ತಿಂದು ಬಿಡುತ್ತಾರೆ ಎಂದರೆ ಖಂಡಿತಾ ಜನರಿಗೆ ಸಾಲುವುದಿಲ್ಲ. ಅದಕ್ಕೋಸ್ಕರ ಭಾರತೀಯ ಜನತಾ ಪಾರ್ಟಿಯವರು ಹೇಳುವುದು, ನೀವು ಆಡಳಿತಾತ್ಮಕ ಸುಧಾರಣೆಯನ್ನು ಬಿಡಿ, ನೀವು ಭ್ರಷ್ಟಾಚಾರ ರಹಿತವಾದ ರಾಜಕೀಯ ಮಾಡಲಿಲ್ಲ ಎಂದು ಹೇಳಿದರೆ ಖಂಡಿತವಾಗಲೂ ಆಗಲ್ಲ ಎಂದು ಬ್ರಿಜೇಶ್​ ಕಾಳಪ್ಪ ಹೇಳಿದರು.

ಜನರಿಗೆ ಅನುಕೂಲ ಆಗುತ್ತದೆ:ಅದಕ್ಕೋಸ್ಕರ ನಾವು ಹೇಳೊದು ಕಾಂಗ್ರೆಸ್​ ಪಕ್ಷದಲ್ಲಿ ನೀವು ಯಾವ್ಯಾವ ಟಿಕೆಟ್​ ಸೇಲ್ ಮಾಡ್ತೀರಿ, ಯಾವ್ಯಾವ ನಾಮಿನೇಷನ್​ ಸೇಲ್ ಮಾಡ್ತೀರಿ ಅದನ್ನು ನಿಲ್ಲಿಸಿ. ನಿಮ್ಮ ಮಂತ್ರಿಗಳಿಗೆ ಇಷ್ಟು ಎಂಬುದನ್ನು ನಿಲ್ಲಿಸಿ. ಹೀಗಾದರೆ ಮಾತ್ರ ಜನರಿಗೆ ಅನುಕೂಲ ಆಗುತ್ತದೆ ಎಂಬುದನ್ನು ನಾವು ಆಶ್ವಾಸನೆ ಕೊಡುತ್ತೇವೆ ಎಂದರು.

ಕಾಂಗ್ರೆಸ್ ಪಕ್ಷವು ಇನ್ನು ಒಂದು ತಿಂಗಳಲ್ಲಿ ತಾನು ನೀಡಿರುವ ಗ್ಯಾರಂಟಿಗಳನ್ನು ಈಡೇರಿಸದಿದ್ದಲ್ಲಿ ಆಮ್ ಆದ್ಮಿ ಪಕ್ಷವು ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಸರ್ಕಾರವನ್ನು ಇದೇ ವೇಳೆ ಆಪ್​ ನಾಯಕರು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮಾಧ್ಯಮ ಉಸ್ತುವಾರಿ ಜಗದೀಶ್ ವಿ. ಸದಂ ಕಾರ್ಯಾಧ್ಯಕ್ಷ ಶಿವರಾಯಪ್ಪ ಜೋಗಿನ್ ಉಪಸ್ಥಿತರಿದ್ದರು.

ಇದನ್ನೂ ಓದಿ:ರಾಷ್ಟ್ರಪತಿ ಚುನಾವಣೆ ಬಹಿಷ್ಕರಿಸಿದ್ದು ಜೆಡಿಎಸ್​ ಮರೆಯಬಾರದು ಎಂದ ಡಿಕೆಶಿ.. ನಾವು ಕಾಂಗ್ರೆಸ್‌ನ ಗುಲಾಮರಲ್ಲ ಎಂದ ಹೆಚ್​ಡಿಕೆ!

ABOUT THE AUTHOR

...view details