ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಸಾವಿರಾರು ಕೋಟಿ ಕಸ ನಿರ್ವಹಣೆ ಮಾಫಿಯಾ ಎನ್​ಜಿಟಿ ದಂಡಕ್ಕೆ ಕಾರಣ: ಮೋಹನ್ ದಾಸರಿ - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ 2014ರಲ್ಲೇ ಹಲವು ಕ್ರಮಗಳನ್ನು ಸೂಚಿಸಿದ್ದರೂ ಸರ್ಕಾರ ಅವುಗಳನ್ನು ಪಾಲಿಸಿಲ್ಲ. ಆದ್ದರಿಂದ ಈಗ ಬರೋಬ್ಬರಿ 2,900 ರೂಪಾಯಿ ದಂಡವನ್ನು ಸರ್ಕಾರ ಕಟ್ಟಬೇಕಾಗಿದೆ ಎಂದು ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ನಗರದ ಅಧ್ಯಕ್ಷ ಮೋಹನ್ ದಾಸರಿ ಅವರು ಕಿಡಿಕಾರಿದರು.

ಎಎಪಿ ನಗರ ಅಧ್ಯಕ್ಷ ಮೋಹನ್ ದಾಸರಿ
ಎಎಪಿ ನಗರ ಅಧ್ಯಕ್ಷ ಮೋಹನ್ ದಾಸರಿ

By

Published : Oct 17, 2022, 4:47 PM IST

ಬೆಂಗಳೂರು: ಘನ ಹಾಗೂ ದ್ರವ ತ್ಯಾಜ್ಯ ವಿಲೇವಾರಿಯಲ್ಲಿ ವಿಫಲವಾಗಿರುವುದಕ್ಕೆ ರಾಜ್ಯ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ಪೀಠವು (ಎನ್‌ಜಿಟಿ) 2,900 ಕೋಟಿ ರೂಪಾಯಿ ದಂಡ ವಿಧಿಸಿದ್ದು, ಬಿಜೆಪಿ ಸರ್ಕಾರವು ಕರ್ನಾಟಕದ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿದೆ ಎಂದು ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಕಿಡಿಕಾರಿದರು.

ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮೋಹನ್ ದಾಸರಿ, ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ 2014ರಲ್ಲೇ ಹಲವು ಕ್ರಮಗಳನ್ನು ಸೂಚಿಸಿದ್ದರೂ ಸರ್ಕಾರ ಅವುಗಳನ್ನು ಪಾಲಿಸಿಲ್ಲ. ಆದ್ದರಿಂದ ಈಗ ಬರೋಬ್ಬರಿ 2,900 ರೂಪಾಯಿ ದಂಡವನ್ನು ಸರ್ಕಾರ ಕಟ್ಟಬೇಕಾಗಿದೆ.

ಎನ್‌ಜಿಟಿಯು ರಾಜ್ಯ ಸರ್ಕಾರಕ್ಕೆ ಈಗ ವಿಧಿಸಿರುವ ದಂಡದ ಜೊತೆಗೆ, ಈ ಹಿಂದೆ ಚಂದಾಪುರದ ಕೆರೆ ಹಾಳುಗೆಡವಿರುವುದಕ್ಕೆ ಹಾಕಿದ್ದ ದಂಡ ಮೊತ್ತದ ಸೇರಿಸಿದರೆ ಒಟ್ಟು 3,400 ಕೋಟಿ ರೂಪಾಯಿ ಆಗುತ್ತದೆ. ಬಿಜೆಪಿ ಸರ್ಕಾರದ ಎಡವಟ್ಟಿನಿಂದಾಗಿ ಜನರ ಅಪಾರ ತೆರಿಗೆ ಹಣವು ವ್ಯರ್ಥವಾಗುತ್ತಿದೆ ಎಂದು ಹೇಳಿದರು.

ಎಎಪಿ ನಗರ ಅಧ್ಯಕ್ಷ ಮೋಹನ್ ದಾಸರಿ ಅವರು ಮಾತನಾಡಿದರು

ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿ ಆಗುತ್ತಿಲ್ಲ: ರಾಜ್ಯದಲ್ಲಿ ಪ್ರತಿದಿನ ಸರಾಸರಿ 15,000 ಟನ್‌ ಘನ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಈ ಪೈಕಿ ಸುಮಾರು 6,000 ಟನ್‌ ತ್ಯಾಜ್ಯವು ಸಮರ್ಪಕವಾಗಿ ವಿಲೇವಾರಿ ಆಗುತ್ತಿಲ್ಲ. ಇದನ್ನು ಬಯಲಿನಲ್ಲಿ ಸುರಿದು ನಿರ್ಲಕ್ಷ್ಯ ತೋರಲಾಗುತ್ತಿದೆ. ಸುಮಾರು 200 ಬಯಲಿನಲ್ಲಿ ವಿಲೇವಾರಿಯಾಗದೆ ಉಳಿದಿರುವ 180 ಲಕ್ಷ ಟನ್‌ ಕಸವು ಪರ್ವತಾಕಾರದ ರಾಶಿಯಾಗಿದೆ. ಜೊತೆಗೆ, ಪ್ರತಿದಿನ ಸುಮಾರು 1,400 ಲೀಟರ್‌ ಕೊಳಚೆಯು ಶುದ್ಧೀಕರಣಗೊಳ್ಳದೇ ನೀರಿನ ಮೂಲಗಳನ್ನು ಸೇರುತ್ತಿದೆ ಎಂದು ಹೇಳಿದರು.

ಮಾಧ್ಯಮಗೋಷ್ಟಿಯಲ್ಲಿ ಆಮ್‌ ಆದ್ಮಿ ಪಾರ್ಟಿ ವಕೀಲರ ಘಟಕದ ಸದಸ್ಯ ಗಂಗಾಧರ್ ಮಾತನಾಡಿ, ರಾಜ್ಯದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಕಸ ನಿರ್ವಹಣೆಯು 1,500 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ದಂಧೆಯಾಗಿ ಪರಿವರ್ತನೆಗೊಂಡಿದೆ. ಇದರಿಂದಾಗಿ ಕರ್ನಾಟಕವು ಎನ್‌ಜಿಟಿಯಿಂದ ಛೀಮಾರಿ ಹಾಕಿಸಿಕೊಳ್ಳಬೇಕಾಗಿದೆ. ಈಗ ರಾಜ್ಯ ಸರ್ಕಾರಕ್ಕೆ ದಂಡ ವಿಧಿಸಿದ್ದಲ್ಲದೇ, ಕಸ ವಿಲೇವಾರಿಗೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿವರವಾಗಿ ಹಾಗೂ ಸ್ಪಷ್ಟವಾಗಿ ಹೇಳಬೇಕೆಂದು ಆದೇಶಿಸಿದೆ.

ಜನತೆಗೆ ಸ್ಪಷ್ಟೀಕರಣವನ್ನು ನೀಡಬೇಕು: ಸರ್ಕಾರವು ಎನ್‌ಜಿಟಿಯ ನಂಬಿಕೆಯನ್ನು ಕಳೆದುಕೊಂಡಿರುವುದು ಇದರಿಂದಲೇ ತಿಳಿಯುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾವೇ ಸ್ವತಃ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಹೊಣೆಯನ್ನು ಹೊತ್ತಿದ್ದಾರೆ. ಬೆಂಗಳೂರು ನಗರದ ಕಸ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡದ ಇವರು ಕೂಡಲೇ ತಮ್ಮ ಖಾತೆಯನ್ನು ತೊರೆಯಬೇಕು. ರಾಜ್ಯದ ಜನತೆಗೆ ಈ ಕೂಡಲೇ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದರು. ಆಮ್‌ ಆದ್ಮಿ ಪಾರ್ಟಿಯ ವಕ್ತಾರರಾದ ಉಷಾ ಮೋಹನ್‌ ಉಪಸ್ಥಿತರಿದ್ದರು.

ಓದಿ:ಲೋಕಾಯುಕ್ತಕ್ಕೆ ಬಲ ತುಂಬಲು ಒಳ್ಳೆಯ ಅಧಿಕಾರಿಗಳನ್ನು ಕೊಡಬೇಕು: ನ್ಯಾ. ಸಂತೋಷ್ ಹೆಗ್ಡೆ

ABOUT THE AUTHOR

...view details