ಕರ್ನಾಟಕ

karnataka

ETV Bharat / state

ವೈದ್ಯಕೀಯ ಉಪಕರಣ ಖರೀದಿಯಲ್ಲಿ 25 ಕೋಟಿ ಲೂಟಿ: ಸುಧಾಕರ್ ವಿರುದ್ಧ ಆಪ್​​ ಆರೋಪ - ಸಿಸ್ಮೆಕ್ಸ್ ಕಂಪನಿ

ಸರ್ಕಾರದ ಪ್ರಮುಖ ಸಚಿವ ಸ್ಥಾನ ಹೊಂದಿರುವ ಡಾ.‌ಕೆ.ಸುಧಾಕರ್ ತಮ್ಮ ಆಪ್ತ ಕಂಪನಿಯಾದ ಸಿಸ್ಮೆಕ್ಸ್ ಕಂಪನಿಗೆ ನೇರವಾಗಿ ದುಬಾರಿ ಮೊತ್ತಕ್ಕೆ ಟೆಂಡರ್ ನೀಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.

ಬೆಂಗಳೂರು ನಗರ ಎಎಪಿ ಪಕ್ಷದ ಅಧ್ಯಕ್ಷ ಮೋಹನ್ ದಾಸರಿ
ಬೆಂಗಳೂರು ನಗರ ಎಎಪಿ ಪಕ್ಷದ ಅಧ್ಯಕ್ಷ ಮೋಹನ್ ದಾಸರಿ

By

Published : Apr 1, 2021, 9:51 PM IST

ಬೆಂಗಳೂರು:ಸರ್ಕಾರಿ ಆಸ್ಪತ್ರೆಗಳಲ್ಲಿ ಬಡರೋಗಿಗಳಿಗೆ ಸೌಲಭ್ಯ ಕೊಡುವ ಜೈವಿಕ ರಸಾಯನಿಕ ಶಾಸ್ತ್ರ ಮತ್ತು ಹೆಮಟಾಲಜಿ ಉಪಕರಣಗಳನ್ನು ಖರೀದಿಯಲ್ಲಿ 25 ಕೋಟಿ ರೂ. ಹಗರಣ ನಡೆದಿದೆ ಎಂದು ಆಮ್‌ ಆದ್ಮಿ ಪಕ್ಷ (ಆಪ್) ಆರೋಪಿಸಿದೆ.

ಈ ಬಗ್ಗೆ ಬೆಂಗಳೂರು ನಗರ ಎಎಪಿ ಪಕ್ಷದ ಅಧ್ಯಕ್ಷ ಮೋಹನ್ ದಾಸರಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಸರ್ಕಾರದ ಪ್ರಮುಖ ಸಚಿವ ಸ್ಥಾನ ಹೊಂದಿರುವ ಡಾ.‌ಕೆ.ಸುಧಾಕರ್ ತಮ್ಮ ಆಪ್ತ ಕಂಪನಿಯಾದ ಸಿಸ್ಮೆಕ್ಸ್ ಕಂಪನಿಗೆ ನೇರವಾಗಿ ದುಬಾರಿ ಮೊತ್ತಕ್ಕೆ ಟೆಂಡರ್ ನೀಡಿದ್ದಾರೆ. ಈ ವೇಳೆ ಟೆಂಡರ್ ನಿಯಮವನ್ನೇ ಉಲ್ಲಂಘನೆ ಮಾಡಿ ಭಾರಿ ಅಕ್ರಮಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.

ಒಟ್ಟು ಎರಡು ಟೆಂಡರ್​ಗಳ ಮೂಲಕ 1,195 ಉಪಕರಣಗಳ ಖರೀದಿ ಮಾಡಲಾಗಿದ್ದು, ಪ್ರತೀ ಉಪಕರಣದ ಬೆಲೆಯಲ್ಲಿ ಡಬಲ್ ಪೇಮೆಂಟ್ ಪಾವತಿಸೋ ಮೂಲಕ ಸರ್ಕಾರದ ಖಜಾನೆ ಕೊಳ್ಳೆ ಹೊಡೆಯಲಾಗಿದೆ.

ದುಬಾರಿ ಬೆಲೆ ನೀಡಿ ಖರೀದಿಸಿರುವ ಉಪಕರಣಗಳ ಬೆಲೆ ಇತರೆ ರಾಜ್ಯಗಳಿಗೆ ಹೋಲಿಸಿದರೆ ಹಿಮಾಚಲ ಪ್ರದೇಶದಲ್ಲಿ 1,30,000 ರೂ.ಗೆ ಖರೀದಿ ಮಾಡಿದ್ರೆ, ದೆಹಲಿ ಮುನಿಸಿಪಾಲಿಟಿ 1,44,000 ರೂ.ಗೆ ಖರೀದಿಸಿದೆ. ಆದರೆ ಕರ್ನಾಟಕದಲ್ಲಿ ಇದೇ ಉಪಕರಣಕ್ಕೆ 2,96,180 ರೂ. ನೀಡಿ ಖರೀದಿಸಲಾಗಿದೆ. ಒಟ್ಟು 1,195 ಜೈವಿಕ ರಾಸಾಯನಿಕ ಮತ್ತು ಹೆಮಟಾಲಜಿ ಉಪಕರಣಗಳನ್ನು ಖರೀದಿಸೋ ಮೂಲಕ ಸುಮಾರು 25 ಕೋಟಿ ರೂ. ಹಗರಣ ಮಾಡಲಾಗಿದೆ ಎಂದು ಆಮ್​ ಆದ್ಮಿ ಪಕ್ಷ ಗಂಭೀರ ಆರೋಪ ಮಾಡಿದೆ.

ABOUT THE AUTHOR

...view details