ಕರ್ನಾಟಕ

karnataka

ETV Bharat / state

ಆಮ್ ಆದ್ಮಿ ಪಕ್ಷದಿಂದ ಲೆಟ್ಸ್ ಕ್ಲೀನ್ ಬೆಂಗಳೂರು ಅಭಿಯಾನ - Cleaning compign by Aam admi party

ಇಂದು ಉದ್ಯಾನಗರಿಯ ಪುಲಕೇಶಿ ನಗರ, ಕೆಜಿ ಹಳ್ಳಿ, ಎಚ್‌ಬಿಆರ್ ಲೇಔಟ್‌ನಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸ್ವಚ್ಛತಾ ಅಭಿಯಾನ ನಡೆಸಿದರು.

aam-admi-party-started-lets-clean-campaign-in-bengaluru
ಲೆಟ್ಸ್ ಕ್ಲೀನ್ ಬೆಂಗಳೂರು ಅಭಿಯಾನ

By

Published : Oct 18, 2020, 5:36 PM IST

Updated : Oct 18, 2020, 5:47 PM IST

ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಇಂದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಲೆಟ್ಸ್ ಕ್ಲೀನ್ ಬೆಂಗಳೂರು ಎಂಬ ಅಭಿಯಾನವನ್ನು ಆಯೋಜಿಸಿದ್ದರು.

ನಗರದ ಪುಲಕೇಶಿ ನಗರ, ಕೆಜಿ ಹಳ್ಳಿ, ಎಚ್‌ಬಿಆರ್ ಲೇಔಟ್‌ನಲ್ಲಿ ಅಭಿಯಾನದಡಿಯಲ್ಲಿ ಕಾರ್ಯಕರ್ತರು ಸ್ವಚ್ಛತಾ ಕಾರ್ಯ ಮಾಡಿದರು.

ಈ ವೇಳೆ ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಮಾತನಾಡಿ,‌ ಉದ್ಯಾನನಗರಿ ಕಸ ತುಂಬಿ ಗಬ್ಬೆದ್ದು ನಾರುವಂತೆ ಮಾಡಿದ್ದೇ ಬಿಬಿಎಂಪಿಯ ಭ್ರಷ್ಟ ಆಡಳಿತದ ಹೆಗ್ಗಳಿಕೆ. ಪೊರಕೆ ಹಿಡಿದು ಭ್ರಷ್ಟ ಆಡಳಿತ ವ್ಯವಸ್ಥೆಯನ್ನು ಕಸದ ಜೊತೆಗೆ ಗುಡಿಸಿ ಸ್ವಚ್ಚಗೊಳಿಸೋಣ ಎಂದು ಸಾರ್ವಜನಿಕರಿಗೆ ಕರೆ ನೀಡಿದರು.

ಬಿಬಿಎಂಪಿ ಹಾಗೂ ಸರ್ಕಾರ ಎಚ್ಚೆತ್ತುಕೊಳ್ಳುವ ತನಕ ಈ ಅಭಿಯಾನ ನಡೆಯುತ್ತಲೇ ಇರುತ್ತದೆ. ಅಲ್ಲಿಯ ತನಕ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರತಿ ಭಾನುವಾರ ನಗರದ ಎಲ್ಲಾ ಭಾಗದ ರಸ್ತೆಗಳು, ಕಸ ಸುರಿಯುವ ಬ್ಲಾಕ್ ಸ್ಪಾಟ್ ಗಳನ್ನು ಸ್ವಚ್ಚಗೊಳಿಸುತ್ತಾರೆ ಎಂದು ತಿಳಿಸಿದರು.

ಈ ವೇಳೆ ಅಭಿಯಾನ ನಡೆಯುವ ಸ್ಥಳದ ಸುತ್ತಮುತ್ತಲಿನ ಪ್ರದೇಶ, ಆಟೋಗಳನ್ನು ಸ್ಯಾನಿಟೈಜ್ ಮಾಡಲಾಯಿತು. ಬೆಳಿಗ್ಗೆಯಿಂದ ಆರಂಭವಾದ ಅಭಿಯಾನ ನಗರದ 50 ಭಾಗಗಳಲ್ಲಿ ನಡೆಯಿತು.

ನಗರ, ಮಾರುತಿ ಸೇವಾ ನಗರ, ಬಾಣಸವಾಡಿ ಮುಖ್ಯ ರಸ್ತೆ ಪೆಟ್ರೋಲ್ ಬಂಕ್ ಹತ್ತಿರ, ಶಾಂತಿ ನಗರ ನಂಜಾಂಭ ವೃತ್ತ, ಯಲಹಂಕ ಹೊಸ ಬಡಾವಣೆ, ಬಿಳಿಕೆಹಳ್ಳಿಯ ವಿಜಯಾ ಬ್ಯಾಂಕ್‌ ಕಾಲೋನಿ, ಹೀಗೆ ಹಲವು ಭಾಗಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು.

Last Updated : Oct 18, 2020, 5:47 PM IST

ABOUT THE AUTHOR

...view details